ಮಹಿಳೆ ನಿಂದಿಸಿದ ಮುನಿಸ್ವಾಮಿ ವೀಡಿಯೋ ವೈರಲ್

ಬೆಂಗಳೂರು,ಮಾ.೯:ಮಹಿಳೆಯೊಬ್ಬರು ಹಣೆಗೆ ಕುಂಕುಮ ಇಟ್ಟುಕೊಂಡಿಲ್ಲ ಎಂದು ಕೋಲಾರದ ಬಿಜೆಪಿ ಸಂಸದ ಮಹಿಳೆಯನ್ನು ನಿಂದಿಸಿದ ಪ್ರಸಂಗ ನಿನ್ನೆ ನಡೆದಿದೆ. ಕೋಲಾರದಲ್ಲಿ ನಿನ್ನೆ ಮಹಿಳಾ ದಿನಾಚರಣೆಯಲ್ಲಿ ಭಾಗಿಯಾಗಿದ್ದ ಸಂಸದ ಮುನಿಸ್ವಾಮಿ, ಹಣೆಗೆ ಕುಂಕುಮ ಇಟ್ಟುಕೊಳ್ಳದ ಮಹಿಳೆಯನ್ನು ನಿಂದಿಸಿದ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.ಸಂಸದ ಮುನಿಸ್ವಾಮಿ ಅವರು ಹಣೆಗೆ ಕುಂಕುಮ ಇಟ್ಟುಕೊಳ್ಳದ ಮಹಿಳೆಯನ್ನು ಏನಮ್ಮ ನಿನ್ನ ಹೆಸರು. ಹಣೆಗೆ ಯಾಕೆ ಕುಂಕುಮ ಇಟ್ಟುಕೊಂಡಿಲ್ಲ. ಸುಜಾತ ಎಂಬ ಹೆಸರನ್ನಿಟ್ಟುಕೊಂಡಿದ್ದೀಯಾ, ನಿನಗೆ ಗಂಡ ಇಲ್ಲವೆ? ಎಂದು ಪ್ರಶ್ನಿಸಿ ನಿನ್ನ ಗಂಡ ಬದುಕಿದ್ದಾನೆ ತಾನೆ. ನಿನಗೆ ಕಾಮನ್‌ಸೆನ್ಸ್ ಇಲ್ಲವಾ, ಯಾರೋ ಕಾಸು ಕೊಡುತ್ತಾರೆ ಎಂದು ಮತಾಂತರ ಆಗಿಬಿಡುತ್ತೀಯಾ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
ಈ ವೀಡಿಯೊ ಸಂಸದ ಮುನಿಸ್ವಾಮಿ ಮಹಿಳೆಯನ್ನು ನಿಂದಿಸಿದ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಮೊದಲು ಕುಂಕುಮ ಇಟ್ಟುಕೊ ಎಂದು ಎಲ್ಲರೆದುರೇ ಮಹಿಳೆ ಮೇಲೆ ಸಂಸದರು ಹರಿಹಾಯ್ದಿದ್ದಾರೆ.