ಮಹಿಳೆ ಕ್ವಾರಂಟೈನ್‌ಗೆ ಆಗಮನ-ಪಡಿತರ ಚೀಟಿ ರದ್ದತಿ ಆದೇಶ ಹಿಂಪಡೆದ ಜಿಲ್ಲಾಡಳಿತ

ರಾಯಚೂರು.ಮೇ.೨೯-ಜಿಲ್ಲೆಯ ವೀರಗೋಟ ಬಳಿಯ ಕುರುಬರದೊಡ್ಡಿ ಗ್ರಾಮದಲ್ಲಿ ಕೋವಿಡ್ ಸೋಂಕಿತರು
ಕ್ವಾರಂಟೈನ್ ಆಗದೆ ಇರುವ ಕಾರಣ ಜಿಲ್ಲಾಡಳಿತ ಅವರ ರೇಷನ್ ಕಾರ್ಡ್ ಹಾಗೂ ವಿದ್ಯುತ್ ಕಡಿತ ಗೊಳಿಸಿರುವಿದರಿಂದ ಇಂದು ಸೋಂಕಿತರು ಕ್ವಾರಂಟೈನ್‌ಗೆ ಅಗಮಿಸಿದ್ದಾರೆ.
ದೇವದುರ್ಗ ತಾಲೂಕಿನ ವೀರಗೋಠ ಹತ್ತಿರದ ಕುರುಬರದೊಡ್ಡಿ ಗ್ರಾಮದಲ್ಲಿ ಕಳೆದ ಒಂದು ವಾರದಿಂದ
ಕೊರೊನಾ ಪಾಸಿಟಿವ್ ಬಂದಿರುವವರು, ಕ್ವಾರಂಟೈನ್ ಆಗದೆ ಅಧಿಕಾರಿಗಳಿಗೆ ತಲೆನೋವು ತಂದಿದ್ದಾರೆ. ಅಧಿಕಾರಿಗಳು ಸೋಂಕಿತರನ್ನ ಕರೆಯಲು ಬಂದರೆ ಮನೆ ಪಕ್ಕದ ಗುಡ್ಡ ಹತ್ತಿ ಕೂರುತ್ತಿದ್ದು. ಈ ಮಧ್ಯೆ ಸೋಂಕಿತ ಮಹಿಳೆಯೊಬ್ಬಳು ಅಧಿಕಾರಿಗಳತ್ತಾ ನಾಯಿ ಛೂ ಬಿಟ್ಟ ಘಟನೆ ನಡೆದ್ದಿದು.
ಸೋಂಕಿತೆಯಿಂದ ಆಕೆಯ ಪತಿಗೂ ಕೊರೊನಾ ಹರಡಿದೆ. ಆಕೆಯ ಮನೆಯಲ್ಲಿ ಚಿಕ್ಕ ಮಕ್ಕಳು, ವೃದ್ಧರು ಕೂಡ ಇರುವುದರಿಂದ ಸೋಂಕಿತೆಗೆ ಕ್ವಾರಂಟೈನ್‌ಗೆನಲ್ಲಿ ಇರುವಂತೆ ಅಧಿಕಾರಿಗಳು ಸೂಚನೆ ನೀಡಿದ್ದರು ಆದರೆ ಅವರ ಮಾತಿಗೆ ಕ್ಯಾರೆ ಎನ್ನದ ಮಹಿಳೆ ಎಲ್ಲಾ ಕಡೆ ಓಡಾಟ ನಡೆಸಿದ್ದಾಳೆ ಇದರಿಂದ ಗರಂ ಗೊಂಡ ಜಿಲ್ಲಾಡಳಿತ ಆಕೆಯ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದು ಅವರ ಮನೆಗೆ ರೇಷನ್ ಕಾರ್ಡ್ ಹಾಗೂ ವಿದ್ಯುತ್ ಕಡಿತಗೊಳಿಸಿ ಸಹಾಯಕ ಆಯುಕ್ತ ಸಂತೋಷ್ ಕಾಮಗೌಡ ಅವರು ಮಹಿಳೆಯ ವಿರುದ್ಧ ಎಫ್‌ಐಆರ್ ದಾಖಲಿಸಲು ಸೂಚಿಸಿದ್ದು ಎಚ್ಚೆತ್ತು ಕೊಂಡ ಮಹಿಳೆ ಇಂದು ಪತಿ ಸಮೇತರಾಗಿ ದೇವದುರ್ಗದ ಕೋವಿಡ್ ಆರೈಕೆ ಕೇಂದ್ರಕ್ಕೆ ಆಗಮಿಸಿ ಕ್ವಾರಂಟೈನ್ ಆಗಿದ್ದಾಳೆ. ಈ ಕುರಿತು ಜಿಲ್ಲಾಡಳಿತ ಪಡಿತರ ಚೀಟಿ ರದ್ದುವಿನ ಆದೇಶ ಹಿಂಪಡೆದಿದ್ದಾರೆ.