ಮಹಿಳೆ ಕಾಣೆ

ಸಂಜೆವಾಣಿ ವಾರ್ತೆಸಿರುಗುಪ್ಪ, ಆ.10: ತಾಲೂಕಿನ ಹಚ್ಚೋಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 18 ವರ್ಷದ ಶ್ಯಾಮಲಾ ಮಹಿಳೆ ಕಾಣೆಯಾಗಿರುವ ಘಟನೆ ನಡೆದಿದೆ.ನಾಲ್ಕು ಅಡಿ ಎತ್ತರ, ತಳ್ಳನೆ ವೈಕಟ್ಟು, ದುಂಡು ಮುಖ ಗೋದಿ ಬಣ್ಣ, ಕನ್ನಡ ಭಾಷೆ ಮಾತನಾಡುವ ಹರಿಜನ ಜನಾಂಗದವರಾಗಿದ್ದು, ಕಾಣೆಯಾದಾಗ ಹಳದಿ ಬಣ್ಣದ ಚೂಡಿದಾರ ಕೆಂಪು ಬಣ್ಣದ ಪ್ಯಾಂಟ್ ಧರಿಸಿದ್ದಳು.ಕಳೆದ ಕೆಲ 10 ದಿನಗಳ ಹಿಂದೆ ತಂದೆ ತಾಯಿಯೊಂದಿಗೆ ಊಟ ಮಾಡಿ ರಾತ್ರಿ ಮಲಗಿದ್ದ ಶ್ಯಾಮಲ ಬೆಳಗ್ಗೆ ನೋಡಿದಾಗ ಮನೆಯಲ್ಲಿ ಇರಲಿಲ್ಲಈ ಸಂಬಂಧವಾಗಿ ಸಿರುಗುಪ್ಪ, ಅಗಸನೂರು ರಾವಿಹಾಳು ಗ್ರಾಮಗಳಲ್ಲಿ ಹುಡುಕಿದ್ದಾರೆ ನಂತರ ಸಂಬಂಧಪಟ್ಟ ಎಲ್ಲಾ ಸಂಬಂಧಿಕರ ಮನೆಗಳಿಗೂ ದೂರವಾಣಿ ಕರೆ ಮಾಡಿ ವಿಚಾರಿಸಿದ್ದಾರೆ ಆದರೆ ಎಲ್ಲಿಯೂ ಶ್ಯಾಮಲಾಳ ಸುಳಿವು ಸಿಕ್ಕಿರುವುದಿಲ್ಲ ಎಂದು ತಂದೆ ಲೂಥರ್ ತಿಳಿಸಿದ್ದಾರೆ. ಹಚ್ಚೋಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿರುತ್ತದೆ.ಹಚ್ಚೋಳ್ಳಿ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ 9480803054 ಅಥವಾ ಹತ್ತಿರದ ಪೊಲೀಸ್ ಠಾಣೆಗೆ ತಿಳಿಸುವಂತೆ ಕೋರಲಾಗಿದೆ.
One attachment • Scanned by Gmail