ಮಹಿಳೆ ಕಾಣೆ

ಹೊಸಪೇಟೆ ಮಾ.16: ತಾಲ್ಲೂಕಿನ ವೆಂಕಟಪುರ-76 ಕ್ಯಾಂಪಿನ 25 ವರ್ಷದ ಅಂಬಿಕಾ ಎಂಬ ಮಹಿಳೆ ಫೆ.25ರಂದು ಕಾಣೆಯಾಗಿರುವ ಕುರಿತು ಕಮಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 5.2 ಅಡಿ ಎತ್ತರ, ತೆಳುವಾದ ಮೈಕಟ್ಟು, ಉದ್ದ ಮುಖ, ಗೋಧಿ ಮೈಬಣ್ಣ, ಎಡ ಮುಖದ ಮೂಗಿನ ಕೆಳಗೆ ಚಿಕ್ಕ ಮಚ್ಚೆ ಇರುತ್ತದೆ, ಬಂಗಾರದ ಬೊಟ್ಟಿನ ದಾರದಿಂದ ಕೂಡಿದ ತಾಳಿ ಹೊಂದಿರುತ್ತಾರೆ, ಹಸಿರು ಪಾಚಿ ಬಣ್ಣದ ಸೀರೆ, ಹಸಿರು ಬಣ್ಣದ ಕುಪ್ಪಸ ಧರಿಸಿರುತ್ತಾಳೆ.
ಈ ಮೇಲ್ಕಂಡ ಮಹಿಳೆಯ ಮಾಹಿತಿ ಅಥವಾ ಸುಳಿವು ಸಿಕ್ಕಲ್ಲಿ ಹತ್ತಿರದ ಪೋಲಿಸ್ ಠಾಣೆಗೆ ಅಥವಾ ಪೊಲೀಸ್ ಕಂಟ್ರೋಲ್ ರೂಂ 100 ಸಂಪರ್ಕಿಸಬಹುದಾಗಿದೆ.