ಮಹಿಳೆ ಎಲ್ಲಾ ಕ್ಷೇತ್ರದಲ್ಲೂ ಸಾಧನೆ ಮಾಡಿದ್ದಾಳೆ: ಸವಿತಾ ಪ.ಮಲ್ಲೇಶ್

ಸಂಜೆವಾಣಿ ವಾರ್ತೆ
ಮಂಡ್ಯ:ಮಾ.24:- ಕರ್ನಾಟಕ ಸಂಘದ ಮಹಿಳಾ ಘಟಕ ಇವರ ಸಂಯುಕ್ತ ಆಶ್ರಯದಲ್ಲಿ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ನಡೆದ ಮಹಿಳಾ ದಿನಾಚರಣೆ- 2024ರ ಕಾರ್ಯಕ್ರಮವನ್ನು ಮೈಸೂರಿನ ಚಿಂತಕರಾದ ಸವಿತಾ ಪ.ಮಲ್ಲೇಶ್ ಅವರು ಉದ್ಘಾಟಿಸಿ, “ವರ್ತಮಾನದ ಮಹಿಳೆ:ಅವಕಾಶಗಳು ಮತ್ತು ಸವಾಲುಗಳು”ಎಂಬ ವಿಷಯ ಕುರಿತು ಮಾತನಾಡಿದರು.ನಮಗೆ ಅವಕಾಶಗಳು ಏನಿದೆ? ಸಮ ಸಮಾಜದ ಸೃಷ್ಟಿಯಾಗಬೇಕಾದರೆ ಹೆಣ್ಣು ಎಲ್ಲ ರೀತಿಯಿಂದಲೂ ಸದೃಢ ಆಗಬೇಕು.ಅದು ಹೇಗೆ ಸಾಧ್ಯ? ಹೆಣ್ಣಿಗೆ ಆರ್ಥಿಕ ಸ್ವಾತಂತ್ರ್ಯದ ಅವಶ್ಯಕತೆ ಇದೆ. ದೇಶ ಸ್ವಾತಂತ್ರ್ಯಗೊಂಡ ನಂತರದ ದಿನದಿಂದಲೂ ಹೆಣ್ಣನ್ನು ಬಲಗೊಳಿಸುವುದಕ್ಕೆ ಸರ್ಕಾರಗಳು ಹಲವಾರು ಕಾರ್ಯಕ್ರಮಗಳನ್ನು ರೂಪಿಸಿವೆ. ಈ ಯೋಜನೆಗಳ ಬಗ್ಗೆ ನಮಗೆ ಮೊದಲು ಅರಿವು ಇರಬೇಕು. ಕುಟುಂಬದಲ್ಲಿ ಹೆಣ್ಣಿಗೆ ಯಾವ ರೀತಿಯ ಸಮಾನತೆ ಇದೆ? ಎಂಬುದನ್ನು ನಾವು ತಿಳಿಯಬೇಕು. ಹೆಣ್ಣಿಗೆ ಸಂಕೋಲೆಯನ್ನು ಹಾಕಿದವರು ಯಾರು? ಕೌಟುಂಬಿಕ ಕೆಲಸಗಳಿಗೆ ಮಾತ್ರವೇ ಮಹಿಳೆಯರನ್ನು ತಯಾರಿ ಮಾಡುತ್ತಾರೆ. ಇದನ್ನು ಬದಲಾಯಿಸುವ ಮನಸ್ಸು ನಮ್ಮದಾಗಬೇಕು.ಮನಸು ಬದಲಾವಣೆ ಆಗಲಿಲ್ಲವೆಂದರೆ ನಮ್ಮ ಮಾತು ವ್ಯರ್ಥ.ಪ.ಮಲ್ಲೇಶ್ ನನ್ನ ತಂದೆ,ಯಾವತ್ತು ಹೆಣ್ಣು ಗಂಡು ಎಂಬ ತಾರತಮ್ಯ ಭಾವವನ್ನು ಮಾಡಿಲ್ಲ ಸಮಾನವಾಗಿ ನಮ್ಮನ್ನು ಬೆಳೆಸಿದರು. ಮನೆಯಲ್ಲೇ ತಾರತಮ್ಯವಿರುವಾಗ ಹೆಣ್ಣಿಗೆ ಹೇಗೆ ಗೌರವ ತೋರಿಸುತ್ತಾರೆ? ‘ಹೆಣ್ಣು ದೇವತೆ’ಎಂದು ಹೊಗಳುವುದು ಬೇಡ.ಧಾರಾವಾಹಿಗಳು ಕೂಡ ಹೆಣ್ಣು ಬದುಕನ್ನು ಪುರುಷನಿಗೆ ಅಡಿಯಾಳಾಗಿ ಇರುವುದನ್ನೇ ಬಿಂಬಿಸಿವೆ.ಅವಕಾಶ ಏನಿದೆ ಹೆಣ್ಣಿಗೆ? ಸ್ವಾತಂತ್ರ್ಯ ಪೂರ್ವದಿಂದಲೂ ಹೆಣ್ಣು ಯುದ್ಧಭೂಮಿಯನ್ನು ಬಿಟ್ಟಿಲ್ಲ ಒನಕೆ ಓಬವ್ವ,ರಾಣಿ ಅಬ್ಬಕ್ಕ, ಕಿತ್ತೂರು ರಾಣಿ ಚೆನ್ನಮ್ಮ, ಅಹಲ್ಯಾಓಳ್ಕರ್, ಇಂತಹ ಎಷ್ಟು ಜನ ಹೆಣ್ಣು ಮಕ್ಕಳು ಯುದ್ಧ ಭೂಮಿಯಲ್ಲಿ ಹೋರಾಟ ಮಾಡಿದ್ದಾರೆ.ಯುದ್ಧಭೂಮಿಯಿಂದ ಹಿಡಿದು ವಿಮಾನ ನಡೆಸುವವರೆಗೂ ಸಾಧನ ಮೆರೆದಿದ್ದಾರೆ.ಉದ್ಯೋಗ ಮಾಡುವ ಸ್ಥಳಗಳಲ್ಲಿ ಲೈಂಗಿಕ ದೌರ್ಜನ್ಯಕ್ಕೆ ಮಹಿಳೆಯರು ಒಳಗಾಗುತ್ತಿದ್ದಾರೆ.ಹೆಣ್ಣಿನ ಜಾತಿಯನ್ನು ಕೀಳರಿಮೆಯಿಂದ ಮಾತನಾಡುವುದು,ಹೆಣ್ಣು ಮಕ್ಕಳನ್ನು ಸಿನಿಮಾದಲ್ಲಿ ಬಿಂಬಿಸುವ ರೀತಿ ನೋವುಂಟು ಮಾಡುತ್ತದೆ. ಮಣಿಪುರದ ಘಟನೆ ಅತ್ಯಂತ ಸಂಕಟವನ್ನು ತರಿಸುತ್ತದೆ. ದ್ವೇಷ ಸಾಧಿಸಲು ಹೆಣ್ಣಿನ ಮೇಲೆ ಅತ್ಯಾಚಾರ ಹೆಸಗುವುದು ದುರಂತ.ಇವತ್ತು ಮಠಗಳೇ ಹೆಣ್ಣಿನ ಶೋಷಣೆ ಮಾಡಿರುವುದಕ್ಕೆ ಸಾಕಷ್ಟು ಸಾಕ್ಷಿಗಳಿವೆ.ಧರ್ಮದ ಬೇರುಗಳಲ್ಲಿ ಹೆಣ್ಣಿನ ಶೋಷಣೆಯ ಮೂಲ ನೆಲೆಗಳಿವೆ. ಆರ್ಥಿಕ ಸ್ವಾತಂತ್ರ್ಯ ಸಾಧಿಸುತ್ತಿದ್ದರು, ಸಾಮಾಜಿಕ ಸ್ವಾತಂತ್ರ್ಯದ ಅಗತ್ಯವಿದೆ. ಆರ್ಥಿಕವಾಗಿ,ಕೌಟುಂಬಿಕವಾಗಿ, ರಾಜಕೀಯವಾಗಿ, ಸಾಮಾಜಿಕವಾಗಿ ಯಾವಾಗ ಹೆಣ್ಣು ಸಬಲಳಾಗು ತ್ತಾಳೋ ಆಗ ಅವಳು ಪೂರ್ಣ ಸ್ವಾತಂತ್ರ್ಯಣ ಆಗುತ್ತಾಳೆ ಎಂದು ಮಾತನಾಡಿದರು.
ಕಾರ್ಯಕ್ರಮದಲ್ಲಿ ಪೆÇ್ರ. ಜಯಪ್ರಕಾಶ್ ಗೌಡ, ಕರ್ನಾಟಕ ಸಂಘದ ಮಹಿಳಾ ಘಟಕದ ಅಧ್ಯಕ್ಷೆ ನಾಗರೇವಕ್ಕ,ಪೆÇ್ರ.ಅನಿತಾ ಉಪಸ್ಥಿತರಿದ್ದು ಸಂವಾದದಲ್ಲಿ ಪೆÇ್ರ,ಶ್ರೀದೇವಿ ,ಪೆÇ್ರ,ಶ್ರೀಲತಾ, ನಂದಿನಿ ಜಯರಾಮ್, ಮಂಜುಳಾ ಜಯಪ್ರಕಾಶ್, ಪೆÇ್ರ.ಎಸ್.ಬಿ. ಶಂಕರಗೌಡ, ಸುಜಾತ ಕೃಷ್ಣ ಮುಂತಾದವರು ಭಾಗವಹಿಸಿದ್ದರು.