
ಸಂಜೆವಾಣಿ ವಾರ್ತೆ
ಸಂಡೂರು:ಮಾ: 10: ಮಹಿಳೆ ಅಬಲೆಯಲ್ಲ ಅವರಳು ಸಬಲೆ ಎನ್ನುವುದನ್ನು ಇಂದು ಇಡೀ ಜಗತ್ತಿಗೆ ತೋರಿಸಿಕೊಟ್ಟಿದ್ದಾಳೆ, ಅವರಳ ನಿರಂತರ ಹೋರಾಟ, ಶ್ರಮದ ಫಲವಾಗಿ ಇಂದು ನಾವು ವಿಶ್ವ ಮಹಿಳಾ ದಿನಾಚರಣೆಯನ್ನು ಹೆಮ್ಮೆಯಿಂದ ಆಚರಿಸೋಣ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷೆ ನಾಡಿಗರು ಹಂಪಮ್ಮ ತಿಳಿಸಿದರು.
ಅವರು ತಾಲೂಕಿನ ಜೋಗ ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ಹಾಗೂ ಶ್ರೀ ವೀರಭದ್ರೇಶ್ವರ ಸಂಜೀವಿನಿ ಒಕ್ಕೂಟದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಮಹಿಳಾ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿ ಭಾರತದ ರಾಷ್ಟ್ರಪತಿ ಹುದ್ದೆಯಿಂದ ಮನೆಯ ಅಡುಗೆ ಕೆಲಸದವರೆಗೂ ಸಹ ತನ್ನದೇ ಅದ ಶಕ್ತಿ, ಸಾಮಾಥ್ರ್ಯ, ಬುದ್ದಿವಂತಿಕೆಯನ್ನು ಪ್ರದರ್ಶನ ಮಾಡುವ ಮೂಲಕ ಎಲ್ಲಾ ರೀತಿಯ ಸ್ಥಾನ ಮತ್ತು ಅಧಿಕಾರಗಳನ್ನು ಪಡೆದುಕೊಂಡಿದ್ದಾಳೆ, ಇಂದು ನಾನು ಅಧ್ಯಕ್ಷೆ ಅಗಿದ್ದೇನೆ ಎಂದರೆ ಅದಕ್ಕೆ ಪುರುಷರ ಪೂರ್ಣ ಬೆಂಬಲ ಇರುವುದರ ಜೊತೆಗೆ ಪ್ರಜಾಪ್ರಭುತ್ವದಲ್ಲಿ ಸಮಾನತೆಯನ್ನು, ಮೀಸಲಾತಿಯನ್ನು ಪಡೆದು ಪ್ರಗತಿ ಸಾಧಿಸಲು ಸಾಧ್ಯವಾಗಿದೆ, ಅದ್ದರಿಂದ ಮಹಿಳೆ ಅಬಲೆಯಲ್ಲ, ಸಬಲೆ ಎನ್ನುವುದನ್ನು ನಾವೆಲ್ಲರೂ ಮನಗಾಣಬೇಕು ಎಂದರು.
ಈ ಸಂದರ್ಭದಲ್ಲಿ ಶ್ರೀ ವೀರಭದ್ರೇಶ್ವರ ಒಕ್ಕೂಟದ ಅಧ್ಯಕ್ಷರಾದ ಅಕ್ಷತಾ ಮಾತನಾಡಿ ಹೆಣ್ಣೊಂದು ಕಲಿತರೆ ಶಾಲೆಯೊಮದು ತೆರೆದಂತೆ ಎನ್ನುವ ಮಾತಿನಂತೆ ಮಹಿಳೆ ಮುಂದೆ ಬರಬೇಕಾದರೆ ಉತ್ತಮ ಶಿಕ್ಷಣ ಪಡೆಯಬೇಕು, ಅದ್ದರಿಂದ ಪ್ರತಿಯೊಬ್ಬ ತಾಯಿಯೂ ಸಹ ತಮ್ಮ ಮಕ್ಕಳಿಗೆ ಶಿಕ್ಷಣ, ಸಂಸ್ಕಾರ ಕೊಡುವಂತಹ ಮಹತ್ತರ ಕಾರ್ಯ ಮಾಡಿದಾಗ ಪ್ರಗತಿಯ ಪಥದಲ್ಲಿ ಸಾಗಲು ಸಾಧ್ಯವಾಗುತ್ತದೆ, ಅದ್ದರಿಂದ ಶಿಕ್ಷಣ, ಶಿಸ್ತು ಬಹು ಮುಖ್ಯವಾದುದು ಅಂತಹ ಕಲಿಕೆಯನ್ನು ಕಡ್ಡಾಯವಾಗಿ ಕಲಿಯೋಣವೆಂದು ಪ್ರತಿಜ್ಞೆ ಮಾಡೋಣ ಎಂದರು.
ಈ ಸಂದರ್ಭದಲ್ಲಿ ಮಹಿಳಾ ಮುಖಂಡರು ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬುದುಗುಪ್ಪೆ ಪಕಿರಪ್ಪ ಸಂಘದ ಸದಸ್ಯರು ಭುವನೇಶ್ವರಿ ರೇಣುಕಾ ಶ್ವೇತಾ ಮಾರೆಮ್ಮ , ಮರಿಯಮ್ಮ ಮತ್ತು ಇತರರು ಇದ್ದರು