ಮಹಿಳೆ ಅಬಲೆಯಲ್ಲಾ ಇಂದು ಅವಳು ಸಬಲಳಾಗಿದ್ದಾಳೆ: ಶಿವಾನಂದ ಮೂರಮನ್

ಇಂಡಿ:ಸೆ.23:ತಾಲೂಕಿನ ಭತಗುಣಕಿ ಗ್ರಾಮದ ನೂತನವಾಗಿ ದ.ಸಂ ಸ ಭೀಮವಾದ ಮಹಿಳಾ ಘಟಕದ ಪದಾಧಿಕಾರಗಳನ್ನು ನೇಮಕ ಮಾಡಲಾಯಿತು.

ಈ ಸಂಧರ್ಬದಲ್ಲಿ ದ.ಸಂ.ಸ ಭೀಮವಾದ ತಾಲೂಕಾ ಅಧ್ಯಕ್ಷ ಶಿವಾನಂದ ಮೂರಮನ್ ಮಾತನಾಡಿ ಮಹಿಳೆಯರು ಅಬಲೆಯರಲ್ಲ ಪುರುಷರಂತೆ ಸರಿಸಮಾನವಾಗಿ ಇಂದು ಪ್ರತಿಯೊಂದು ರಂಗದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಪುರುಷರಂತೆ ಮಹಿಳೆಯರು ಕೂಡಾ ಸರಿಸಮಾನಳು ಎಂಬ ಸಮಾನತೆಯ ಹಕ್ಕನ್ನು ನೀಡಿದ ಡಾ. ಬಿ.ಆರ್ ಅಂಬೇಡ್ಕರವರನ್ನು ಸದಾ ಸ್ಮರಿಸಬೇಕು. ಮಹಿಳೆಯರಿಗೆ ಮತದಾನದ ಹಕ್ಕು ನೀಡಿದ ಸಮಾನತೆಯ ಹರಿಕಾರ ಬಾಬಾಸಾಹೇಬ ಅಂಬೇಡ್ಕರವರು . ತಾಲೂಕಿನ ಭತಗುಣಕಿ ಗ್ರಾಮದಲ್ಲಿ ದ.ಸಂ ಸಮೀತಿ ಭೀಮವಾದ ಮಹಿಳಾ ಘಟಕದ ಪಧಾಧಿಕಾರಿಗಳನ್ನಾಗಿ ಆಯ್ಕೆ ಮಾಡುತ್ತಿರುವುದು ಸಂತೋಷದ ಸಂಗತಿ. ತಾಯಂದಿಯವರು ಸಂಘಟನೆಯಲ್ಲಿ ಹುದ್ದೆ ಸಿಕ್ಕ ನಂತರ ಸಮಾಜದ ಕಾರ್ಯಚಟುವಟಿಕೆಯಲ್ಲಿ ತೋಡಗಬೇಕು. ಯಾವುದೇ ಸಮುದಾಯದಲ್ಲಿ ಅನ್ಯಾಯ, ಶೋಷಣೆ ದಬ್ಬಾಳಿಕೆ, ಭ್ರಷ್ಟಾಚಾರ ನಡೆದರೆ ಖಂಡಿಸಬೇಕು. ಸಮಾಜದಲ್ಲಿ ಬಡವರನ್ನು ದೀನ ದುರ್ಬಲನ್ನು ಗುರುತಿಸಿ ಸರಕಾರದ ಯೋಜನೆಗಳು ತಲುಪಿಸಬೇಕು. ಶಿಕ್ಷಣ ಅತ್ಯಂತ ಪವಿತ್ರವಾದ ವಸ್ತು ಸಮಾಜದಲ್ಲಿ ಕಡು ಬಡವ ವಿಧ್ಯಾರ್ಥಿಗಳಿದ್ದರೆ ಕಲಿಕೆಗೆ ತೊಂದರೆಯಾದರೆ ಅಂತಹವರನ್ನು ಸಹಾಯ ಸಹಕಾರ ಮಾಡಿ ನಿಮಗೆ ಸಾಧ್ಯವಾಗದಿದ್ದರೆ ನಾನು ಕೂಡಾ ಸಹಾಯ ಮಾಡುವೆ ಎಂದರು.

ಮಹಿಳಾ ಘಟಕ ತಾಲೂಕಾ ಅಧ್ಯಕ್ಷೆ ಕವಿತಾ ಕಾಂಬಳೆ, ಜಿಲ್ಲಾಧ್ಯಕ್ಷ ರಾಜು ಎಂಟಮಾನ, ತಾ.ಪಂ ಮಾಜಿ ಅಧ್ಯಕ್ಷ ರುಕ್ಮುದೀನ ತದ್ದೇವಾಡಿ,ಗ್ರಾ.ಪಂ ಅಧ್ಯಕ್ಷ ಸಿದ್ದು ನಿಚ್ಚಳ, ನೀಲಾಬಾಯಿ ,ಭವನೇಶ್ವರಿ, ರಮಾಬಾಯಿ, ಶೋಭಾ ಬೂದಿಹಾಳ, ಪದ್ಮಾಬಾಯಿ ಇದ್ದರು.