ಮಹಿಳೆ ಅಪಹರಣಕ್ಕೆ ಯತ್ನ: ನಾಲ್ವರ ಬಂಧನ ಪಿಸ್ತೂಲ್, 18 ಜೀವಂತ ಗುಂಡು ವಶಕ್ಕೆ

ಕಲಬುರಗಿ,ಜೂ.27-ಹಣಕಾಸಿನ ವ್ಯವಹಾರದ ವೈಷಮ್ಯದ ಹಿನ್ನೆಲೆಯಲ್ಲಿ ಸಿನಿಮೀಯ ರೀತಿಯಲ್ಲಿ ಪೆÇಲೀಸರು ಎಂದು ಸುಳ್ಳು ಹೇಳಿ ಗನ್ ತೋರಿಸಿ ಮಹಿಳೆಯನ್ನು ಕಾರಿನಲ್ಲಿ ಅಪಹರಿಸಿಕೊಂಡು ಹೋಗಲು ಯತ್ನಿಸಿದಾಗ ಗಲಾಟೆ ನಡೆದು ಜನರು ಜಮಾಗೊಂಡು ಬಿಗುವಿನ ವಾತಾವರಣ ನಿರ್ಮಾಣಗೊಂಡ ಘಟನೆ ಸೋಮವಾರ ಸಂಜೆ ನಗರದ ಅಫಜಲಪುರ ರಸ್ತೆಯಲ್ಲಿರುವ ಚೆಕ್‍ಪೆÇೀಸ್ಟ್ನಲ್ಲಿ (ಹೈಕೋರ್ಟ್ ಹತ್ತಿರ) ನಡೆದಿದೆ.
ಘಟನೆಗೆ ಸಂಬಂಧಿಸಿದಂತೆ ಉಪ ಪೆÇಲೀಸ್ ಆಯುಕ್ತ ಅಡ್ಡೂರು ಶ್ರೀನಿವಾಸುಲು ಮಾರ್ಗದರ್ಶನದಲ್ಲಿ ಅಶೋಕ ನಗರ ಠಾಣೆಯ ಇನ್‍ಸ್ಪೆಕ್ಟರ್ ಪಂಡಿತ ಸಗರ ಹಾಗೂ ಪೆÇಲೀಸ್ ಸಿಬ್ಬಂದಿ ಮಿಂಚಿನ ಕಾರ್ಯಾಚರಣೆ ನಡೆಸಿ ನಾಲ್ವರನ್ನು ಬಂಧಿಸಿ, ಲೈಸನ್ಸ್ ಹೊಂದಿದ ಪಿಸ್ತೂಲ್ ಹಾಗೂ 18 ಜೀವಂತ ಗುಂಡುಗಳನ್ನು, ಎರಡು ಕಾರ್‍ಗಳನ್ನು ವಶಪಡಿಸಿಕೊಂಡಿದ್ದಾರೆ.
ಹಣ ಕೊಡಬೇಕಾಗಿರುವ ಮಂಗಲಾ, ಪೆÇಲೀಸ್ ಎಂದು ಬಿಂಬಿಸಿಕೊಂಡ ದಯಾನಂದ ಹೂಗಾರ ಹಿರೋಳ್ಳಿ, ರಾಜಕುಮಾರ ಪಾಟೀಲï ಹಿರೇಜೇವರ್ಗಿ, ಕಾರಭೋಸಗಾದ ನಬಿಸಾಬ್ ದಸ್ತಿಗಿರ ಶೇಖ ಎಂಬುವರು ಪೆÇಲೀಸ್ ವಶದಲ್ಲಿದ್ದಾರೆ. ವಿಚಾರಣೆ ನಡೆಸಿ ಮಾಹಿತಿ ಕಲೆ ಹಾಕುತ್ತಿದ್ದಾರೆ.
ಘಟನೆ ವಿವರ
ಕಲಬುರಗಿ ಹೊರವಲಯದ ಶ್ರೀನಿವಾಸ ಸರಡಗಿಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿರುವ ಗೌಡಗಾಂವ ಮೂಲದ ಮಂಗಳ ಮಹೇಶ್ ಬಿರಾದಾರ ಎಂಬುವರಿಗೆ ಶೆಟ್ಟಿ ಕಾಂಪ್ಲೆಕ್ಸ್ ಬಳಿಯ ನಿವಾಸಿ ಸಾವಿತ್ರಿ ರಮೇಶ ಕಲಶೆಟ್ಟಿ ಎಂಬುವರು 20 ಲಕ್ಷ ರೂ. ಹಣವನ್ನು ಕೊಟ್ಟಿದ್ದರು. ಹಲವು ಸಲ ಕೇಳಿದರು, ಕೊಟ್ಟಿರಲಿಲ್ಲ. ಹೀಗಾಗಿ ಹಣ ಕೇಳಲು ಸೋಮವಾರ ಸಾವಿತ್ರಿ ಹಾಗೂ ಅವರ ಪುತ್ರ ಮಾಣಿಕಪ್ಪ ಸೇರಿಕೊಂಡು ಶ್ರೀನಿವಾಸ ಸರಡಗಿಯ ಶಾಲೆಗೆ ಹೋಗಿದ್ದರು. ಈ ವೇಳೆ ಮಾತಿನ ಚಕಮಕಿ ನಡೆದಿದೆ.
ಈ ವೇಳೆಯಲ್ಲಿ ಹಣ ಕೊಡಬೇಕಾಗಿರುವ ಮಂಗಲಾ ಕೆಲವರಿಗೆ ಕರೆ ಮಾಡಿ ಕರೆಯಿಸಿಕೊಂಡಿದ್ದಾರೆ. ಗಲಾಟೆ ನಡೆಯುವ ಕಾಲಕ್ಕೆ ಅಲ್ಲಿಗೆ ದಯಾನಂದ ಹೂಗಾರ, ರಾಜಕುಮಾರ ಪಾಟೀಲ್, ನಬಿಸಾಬ್, ರಮೇಶ ಎಂಬುವರು ಆಗಮಿಸಿದರು. ಆಗ ದಯಾನಂದ ಬಳಿ ಇದ್ದ ಪರವಾನಿಗೆ ಹೊಂದಿದ ಪಿಸ್ತೂಲ್ ತೋರಿಸಿ ಬೆದರಿಸಿದ್ದಾರೆ. ಅಲ್ಲದೆ ಮಂಗಲಾ ವಿರುದ್ದ ಕೇಸ್ ಕುರಿತು ವಾರೆಂಟ್ ಇದೆ ಕರೆದುಕೊಂಡು ಹೋಗಬೇಕು ಎಂದು ಹೇಳಿ ಮಂಗಲಾ ಅವರ ಕಾರಿನಲ್ಲಿ ಸಾವಿತ್ರಿ ಅವರನ್ನು ಕುಳ್ಳಿರಿಸಿಕೊಂಡು ಹೊರಟಿದ್ದಾರೆ. ಪೆÇಲೀಸ್ ಕಮಿಷನರ್ ಕಚೇರಿಗೆ ಹೋಗಬೇಕು ಎಂದು ಹೇಳಿ ಅಫಜಲಪುರ ರಸ್ತೆಯಲ್ಲಿ ಹೊರಟಾಗ ಹಿಂದೆ ಇನ್ನೊಂದು ಕಾರಿನಲ್ಲಿ ಹೊರಟಿದ್ದ ಸಾವಿತ್ರಿ ಪುತ್ರ ಮಾಣಿಕಪ್ಪ ಸಂಶಯಗೊಂಡು ಸಹೋದರ ಸಂಬಂಧಿಗೆ ಕರೆ ಮಾಡಿದ್ದಾರೆ. ಹೀರಾಪುರ ಸರ್ಕಲ್ ದಾಟಿ ಬಂಕ್ ಬರುತ್ತಲೇ ಆಗ ಕಾರಿಗೆ ಅಡ್ಡ ಹಾಕಲು ಯತ್ನಿಸಿದ್ದಾನೆ, ಮುಂದೆ ಬಂದಾಗ ಪಿಸ್ತೂಲ್ ತೋರಿಸಿ ಬೆದರಿಸಲು ಯತ್ನಿಸಿದ್ದಾರೆ.
ಆಗ ಮಾಣಿಕಪ್ಪ ತಾಯಿಯನ್ನು ಕಿಡ್ನಾಪ್ ಮಾಡುತ್ತಿದ್ದಾರೆ ಎಂದು ಕಿರುಚತ್ತಲೇ ಬೆನ್ನಟ್ಟಿದ್ದಾನೆ. ದುಷ್ಕರ್ಮಿಗಳು ಕಾರ್ ವೇಗವಾಗಿ ತೆಗೆದುಕೊಂಡು ಹೋಗಿದ್ದಾರೆ. ಚೆಕ್‍ಪೆÇೀಸ್ಟ್ ಬಳಿ ಬಂದು ಕಾರಿಗೆ ಅಡ್ಡ ಹಾಕಿ ತಾಯಿಯನ್ನು ಬಿಡಿಸಿಕೊಳ್ಳಲು ಯತ್ನಿಸಿದ್ದಾನೆ. ಅಷ್ಟೊತ್ತಿಗೆ ಜನರು ಜಮಾಗೊಂಡರು. ಅಲ್ಲದೆ ಆತನ ಸಹೋದರ ಸಂಬಂಧಿಯು ಬಂದ. ಇದರಿಂದಾಗಿ ಗಲಾಟೆ ನಡೆಯಿತು. ಎರಡು ಕಡೆಯುವರು ಮಾರಾಮಾರಿ ಶುರುವಾಯಿತು. ಬಿಗುವಿನ ವಾತಾವರಣ ಸಹ ನಿರ್ಮಾಣಗೊಂಡಿತ್ತು.
ಈ ವೇಳೆಯಲ್ಲಿ ಚೆಕ್‍ಪೆÇೀಸ್ಟ್ನಲ್ಲಿ ಕರ್ತವ್ಯ ನಿರತ ಪೂಲೀಸ್ ಸಿಬ್ಬಂದಿ ಬಸವರಾಜ ಮೇಟಿ ಮತ್ತು ಬಾಬಾ ಪಟೇಲ್ ಸ್ಥಳಕ್ಕೆ ಧಾವಿಸಿ ಹೋಗಿ ಪರಿಸ್ಥಿತಿ ನಿಯಂತ್ರಿಸಿದ್ದಾರೆ. ನಂತರ ಅಶೋಕ ನಗರ ಇನ್‍ಸ್ಪೆಕ್ಟರ್ ಪಂಡಿತ ಸಗರ ಅವರಿಗೆ ಮಾಹಿತಿ ನೀಡಿದಾಗ ಅವರು ಆಗಮಿಸಿ ತಪ್ಪಿಸಿಕೊಳ್ಳಲು ಯತ್ನಿಸಿದ ಎಲ್ಲರನ್ನು ವಶಕ್ಕೆ ತೆಗೆದುಕೊಂಡಿದ್ದಲ್ಲದೆ ಬಳಿಯಿದ್ದ ಪಿಸ್ತೂಲ್ ಸಹ ವಶಪಡಿಸಿಕೊಂಡಿದ್ದಾರೆ. ಡಿಸಿಪಿ ಅಡ್ಡೂರು ಶ್ರೀನಿವಾಸಲು ಸಹ ಭೇಟಿ ನೀಡಿದರು.
ಅಶೋಕ ನಗರ ಠಾಣೆಯ ಇನ್‍ಸ್ಪೆಕ್ಟರ್ ಪಂಡಿತ ಸಗರ ಹಾಗೂ ಸಿಬ್ಬಂದಿ ಸಕಾಲಿಕ ಕ್ರಮದಿಂದಾಗಿ ಸಂಭವಿಸಬಹುದಾಗಿದ್ದ ಅವಘಡ ತಪ್ಪಿದಂತಾಗಿದೆ. ವಶಕ್ಕೆ ತೆಗೆದುಕೊಂಡವರನ್ನು ಠಾಣೆಗೆ ಕರೆದುಕೊಂಡು ಹೋಗಿ ವಿಚಾರಣೆ ನಡೆಸಿ ಮಾಹಿತಿ ಕಲೆ ಹಾಕಿದ್ದಾರೆ. ಘಟನೆ ಮೊದಲು ನಡೆದಿದ್ದು ಶ್ರೀನಿವಾಸ ಸರಡಗಿಯಲ್ಲಿ ಹೀಗಾಗಿ ವಿಶ್ವವಿದ್ಯಾಲಯ ಠಾಣೆಯಲ್ಲಿ ಪ್ರಕರಣದಾಖಲಾಗಿದ್ದು ತನಿಖೆ ಜಾರಿಯಲ್ಲಿದೆ.