ಮಹಿಳೆ ಅಂತರಿಕ್ಷಕ್ಕೂ ಹಾರಬಲ್ಲಳು

ವಿಜಯಪುರ :ಮಾ.10: ಮಹಿಳೆ ಇಂದು ವಿಮಾನ ಹಾರಿಸಬಲ್ಲಳು ಅಷ್ಟೇ ಏಕೆ ಅಂತರಿಕ್ಷಕ್ಕೂ ಹಾರಿಬಲ್ಲಳು ತೊಟ್ಟಿಲು ತೂಗಲು ಅಷ್ಟೆ ಸೀಮಿತವಾಗದ ಹೆಣ್ಣು ವಿಜ್ಞಾನ-ತಂತ್ರಜ್ಞಾನದಲ್ಲೂ ಮುಂಚೂಣಿಯಲ್ಲಿದ್ದಾಳೆ. ಮಹಿಳೆ ನಿಸ್ವಾರ್ಥಿ,ಪರೋಪಕಾರಿ ಹೀಗಾಗಿ ಮಹಿಳೆ ಸಬಲೀಕರಣದತ್ತ ಹೆಜ್ಜೆ ಹಾಕಿದ್ದು ಸ್ವಾಗತಾರ್ಹ. ಅದಾಗ್ಯೂ ಸತಿ-ಪತಿಗಳು ಒಂದಾಗಿದ್ದರೆ ಹಿತವಾಗಿಪ್ಪುದುಶಿವಂಗೆ ಎನ್ನುವ ಮಾತಿನಂತೆ ಗಾಡಿಗೆ ಎರಡು ಚಕ್ರ ಅತ್ಯವಶ್ಯ. ಆ ನಿಟ್ಟಿನಲ್ಲಿ ನಮಗೆ ಹೆತ್ತ ತಂದೆ ತಾಯಿಯರಿಗೂ ಸಹೋದರಿಯರಿಗೂ ಈ ಮಾತು ಸಲ್ಲುತ್ತದೆ. ಹೆಣ್ಣು ತನ್ನ ತಾ ಬಣ್ಣಿಸಕೊಳ್ಳದೆ ಪುರುಷರ ಬಗ್ಗೆಯು ಅಭಿಮಾನ ಹೊಂದಿದಕ್ಕಾಗಿ ಅವಳಿಗೆ ಹೆಣ್ಣು ಜಗದ ಕಣ್ಣು ಎನ್ನುತ್ತಾರೆ ಎಂದು ಭಾಗ್ಯಶ್ರೀ ಪಾಟೀಲ ನುಡಿದರು.
ಮಹಿಳಾ ದಿನಾಚರಣೆ ಅಂಗವಾಗಿ ಸಾಯಿ ರೆಸಿಡೆನ್ಸಿಯಲ್ಲಿ ಮಹಾಲಕ್ಷ್ಮೀ ಸ್ವಸಹಾಯ ಸಂಘ ಏರ್ಪಡಿಸಿದ ಕಾರ್ಯಕ್ರಮದ ಮಹಿಳಾ ಸಬಲೀಕರಣ ವಿಷಯ ಕುರಿತು ಉಪನ್ಯಾಸ ಮಾಡುತ್ತ ಈ ವಿಷಯ ತಿಳಿಸಿದರು.
ಹೆಣ್ಣು ಭ್ರೂಣ ಹತ್ಯೆ ಮಹಾಪಾಪ ಹೀಗಾಗಿಯೆ ಚೀನಾದಲ್ಲಿ ಅಲ್ಲೊಲ-ಕಲ್ಲೋಲವಾಗಿದೆ. ವರ ಮಹಾಷಯರಿಗೆ ಕನ್ಯೆಗಳು ಸಿಗುತ್ತಿಲ್ಲ ಇದು ಅತ್ಯಂತ ದುರ್ದೈದ ಸಂಗತಿ ಎಂದು ರುದ್ರಮ್ಮಾ ಬಾಬಾನಗರ ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ವನಜಾಕ್ಷಿ ನರಗುಂದ ಅವರು ಹೆಣ್ಣು ಬದುಕಿನ ಎಲ್ಲ ಕಷ್ಟಕಾಲಗಳನ್ನು ಎದುರಿಸಿ ಘಟ್ಟಿಯಾಗಿ ನಿಲ್ಲುವ ಸುಸ್ಥಿರ ನಾಡಿಗಾಗಿ ಇಂದು ಲಿಂಗ ಸಮಾನತೆಗಾಗಿ ಈ ದಿನಾಚರಣೆ ಆಚರಿಸಲಾಗುತ್ತಿದೆ. 1975 ರಲ್ಲಿ ಮೊದಲ ಬಾರಿಗೆ ವಿಶ್ವಸಂಸ್ಥೆ ಮಾರ್ಚ 8 ರಂದು ಅಧಿಕೃತವಾಗಿ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಜಾರಿಗೆ ತಂದಿತು.
ಇದೇ ಸಂದರ್ಭದಲ್ಲಿ ಬಡಾವಣೆಯ ಹಿರಿಯ ನಾಗರಿಕರಾದ ಶಾಂತಾ ಯಾಳವಾರ ಹಾಗೂ ಲೋಕೋಪಯೋಗಿ ಇಲಾಖೆಯಲ್ಲಿ ಮ್ಯಾನೇಜರರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಮೇಘಾ ಕರಜಗಿ ಅವರಿಗೆ ಸನ್ಮಾನಿಸಲಾಯಿತು.
ಸುಧಾ ರಾಜಶೇಖರ ಇಂಡಿ ಅಧ್ಯಕ್ಷತೆ ವಹಿಸಿದ್ದರು. ಶಕುಂತಲಾ ಹೂಗಾರ ಪ್ರಾರ್ಥಿಸಿದರು. ವಿದ್ಯಾ ಬರಡ್ಡಿ ಸ್ವಾಗತಿಸಿದರು. ಮಂಜುಳಾ ಅಗ್ನಿ ನಿರೂಪಿಸಿದರು. ಶಾರದಾ ಯಾಳವಾರ ವಂದಿಸಿದರು.