ಮಹಿಳೆರಿಗೆ ಸ್ವಾವಲಂಬಿ ಬದುಕು ಅಗತ್ಯ

ವಿಜಯಪುರ.ಏ೨೪:ಮಹಿಳೆಯರು ಸ್ವಾವಲಂಬಿಗಳಾಗಿ ಜೀವನ ನಡೆಸುವುದನ್ನು ರೂಢಿಸಿಕೊಂಡು ಕುಟುಂಬಗಳ ನಿರ್ವಹಣೆಯನ್ನು ಸಮರ್ಥವಾಗಿ ಮಾಡುವವರಾಗಬೇಕು ಎಂದು ಮಾಜಿ ತಾಲೂಕು ಪಂಚಾಯಿತಿ ಉಪಾಧ್ಯಕ್ಷರಾದ ಮೀನಾಕ್ಷಿ ಮುನಿಕೃಷ್ಣ ತಿಳಿಸಿದರು.
ಇವರು ಪಟ್ಟಣದ ಮೇಲೂರು ರಸ್ತೆಯಲ್ಲಿ ನೂತನವಾಗಿ ಪ್ರಾರಂಭವಾಗಿರುವ ರಿಯಾವಸ್ತ್ರಣಿ ಸ್ಟುಡಿಯೋ ಉದ್ಟಾಟಿಸಿ ಮಾತನಾಡಿದರು.
ಗ್ರಾಮಾಂತರ ಭಾಗದ ಮಹಿಳೆಯರು ನಗರ ಪಟ್ಟಣಗಳಲ್ಲಿಗೆ ಫ್ಯಾಶನ್ ಡಿಸೈನರ್ ಗಾಗಿ ಹೋಗುತ್ತಾರೆ ಇದರ ಉದ್ದೇಶದಿಂದ ಗ್ರಾಮೀಣ ಭಾಗದ ಮಹಿಳೆಯರಿಗೆ ಉತ್ತಮ ಬೆಲೆಗೆ ಈ ಮಳಿಗೆಯನ್ನು ಆರಂಭವಾಗಿದ್ದು ಪಟ್ಟಣ ಹಾಗೂ ಗ್ರಾಮೀಣ ಜನತೆ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಮಹಿಳೆಯರು ಕೇವಲ ನಾಲ್ಕು ಗೋಡೆಗಳ ಮಧ್ಯಕ್ಕೆ ಸೀಮಿತವಾಗಬಾರದು. ಮಹಿಳೆಯರ ಮೇಲೆ ಸಮಾಜದಲ್ಲಿ ಸಾಕಷ್ಟು ಹೊಣೆಗಾರಿಕೆಯಿದೆ. ಈ ಸಮಾಜವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯಬೇಕಾಗಿದ ಜವಾಬ್ದಾರಿಯಿದೆ ಎಂದರು.
ರಿಯಾ ವಸ್ತ್ರಣಿ ಫ್ಯಾಷನ್ ಡಿಸೈನರ್ ಮೇಘಾ ಡಾ.ದೇವರಾಜ್ ಮಾತನಾಡಿ, ನಮ್ಮ ಸ್ಟುಡಿಯೋದಲ್ಲಿ ಮಹಿಳೆಯರ ಅವರ ಆಯ್ಕೆ ತಕ್ಕಂತೆ ಉಡುಪುಗಳನ್ನು ಕೊಡಲಾಗುತ್ತದೆ. ಗ್ರಾಮೀಣ ಭಾಗದ ಮಹಳೆಯರು ಇದರ ಸದುಪಯೋಗ ಪಡಿಸಿಕೊಳ್ಳಬೇಕು. ನಾನು ಗ್ರಾಮೀಣ ಮಹಿಳೆ ಯಾಗಿದ್ದ ಇಲ್ಲಿನ ಅವಶ್ಯಕತೆಗೆ ತಕ್ಕಂತೆ ನಮ್ಮ ಸ್ಟುಡಿಯೋದಲ್ಲಿ ದೊರಕುತ್ತದೆ ಎಂದರು.

ಈ ಸಂದರ್ಭದಲ್ಲಿ ಡಾ.ದೇವರಾಜ್, ಲಿಖಿತ್ ಗೌಡ, ಪದ್ಮವತಿ, ಆರ್.ಎನ್.ಸೂರ್ಯ, ಸಜನಾ ಹಾಜರಿದ್ದರು.