ಮಹಿಳೆರಿಗೆ ಸಮಾನತೆ ನೀಡಿದ್ದು ಲಿಂಗಾಯತ ಧರ್ಮ


ಸಂಜೆವಾಣಿ ವಾರ್ತೆ
ಸಂಡೂರು:ಮಾ: 10: ಅಮೇರಿಕಾದ ಮಹಿಳೆಯರು, ಕಾರ್ಮಿಕರ ಹೋರಾಟದ ಫಲದಿಂದ ಮಹಿಳಾ ಸ್ವಾತಂತ್ರ್ಯದ ಹೋರಾಟ ಪ್ರಾರಂಭ ಎನ್ನುವುದಕ್ಕಿಂತ ಕರ್ನಾಟಕದ 12ನೇ ಶತಮಾನದ ಶರಣರು, ಅದರಲ್ಲೂ ಅಕ್ಕಮಹಾದೇವಿಯ ಎಲ್ಲಾ ವಚನಗಳಲ್ಲಿ ಮಹಿಳಾ ಸ್ವಾತಂತ್ರ್ಯ ಮತ್ತು ಮಾನಸಿಕ ಅಂಶಗಳು ಕಂಡು ಬರುತ್ತವೆ ಎಂದು ಗದುಗಿನ ಪ್ರಾಂಶುಪಾಲರು, ಉಪನ್ಯಾಸಕರು ಆದ ಸಿದ್ದು ಆ್ಯಪಲ್ ಪರ್ವಿ ತಿಳಿಸಿದರು.
ಅವರು ಪಟ್ಟಣದ ವೀರಶೈವ ಕಲ್ಯಾಣ ಮಂಟಪದಲ್ಲಿ ವಿಶ್ವ ಮಹಿಳಾ ದಿನಾಚರಣೆ ಹಾಗೂ ಅಕ್ಕನ ಬಳಗದ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವನ್ನು ಉದ್ದೇಶಿಸಿ ವಿಶೇಷ ಉಪನ್ಯಾಸ ನೀಡಿ ಮಾತನಾಡಿ ವಿದೇಶಿ ಮಹಿಳೆಯರಿಂದ ಮಹಿಳಾ ಸಬಲೀಕರಣ ಪ್ರಾರಂಭವಲ್ಲಿ 12ನೇ ಶತಮಾನದ ಅಕ್ಕಮಹಾದೇವಿಯಿಂದ ಪ್ರಾರಂಭವಾಯಿತು, ಅದು ಕರ್ನಾಟಕದಿಂದ, ನಮ್ಮ ರಾಣಿಯರಾದ ಕಿತ್ತೂರು ರಾಣಿ ಚನ್ನಮ್ಮ, ಅಬ್ಬಕ್ಕ, ಬೆಳವಡಿ ಮಲ್ಲಮ್ಮ, ಇಂತಹ ಮಹಾನ್ ರಾಣಿಯರು ವಿಧವೆಯಾಗಿದ್ದರೂ ಸಹ ಎದೆ ಗುಂದದೆ ದೇಶಕ್ಕಾಗಿ ತಮ್ಮ ಬದುಕನ್ನು ಸಮರ್ಪಿಸಿದರು, ಮಹಿಳಾ ಸಬಲೀಕರಣಕ್ಕೆ ಕೊಟ್ಟ ಕೊಡುಗೆ ಅದ್ಭುತವಾದುದು, ಆಯ್ದಕ್ಕಿ ಲಕ್ಕಮ್ಮ 12ನೇ ಶತಮಾನದಲ್ಲಿಯೇ ರಾಜನಾದಂತಹ ಬಿಜ್ಜನ ಆಸ್ಥಾನದಲ್ಲಿ ಆಸೆ ಎಂಬುದು ಅರಸರಿಗಲ್ಲ, ಯಮಧೂತರಿಗುಂಟೆ ಎನ್ನುವ ಪ್ರಶ್ನೆ ಮೂಲಕ ರಾಜನನ್ನೇ ಪ್ರಶ್ನಿಸುವಂತಹ ಎದೆಗಾರಿಕೆ, ಸಬಲೆ ಅಂದು ಕಂಡು ಬರುತ್ತದೆ, ಅದ್ದರಿಂದ ಬಹಳಷ್ಟು ಮಹಿಳೆಯರು ವಿಶ್ವ ಮಹಿಳಾ ದಿನದಂದು ಮಾತ್ರ ಹೊಗಳಿ ಹೋಗುವುದಲ್ಲ, ಬದ್ಧತೆ ಬಹು ಮುಖ್ಯವಾದುದು, ನಮ್ಮ ಮಹಿಳೆಯರು ಕಡ್ಡಾಯವಾಗಿ ಅಕ್ಕನ ವಚನಗಳನ್ನು ಪಾಲಿಸಿ ಅವುಗಳ ಅನುಷ್ಠಾನ ಮಾಡಿಕೊಂಡಾಗ ನಿಜವಾದ ಸಬಲತೆ ಬರುತ್ತದೆ, ಶಿವಮೊಗ್ಗದಿಂದ ಬಸವಕಲ್ಯಾಣದ ವರೆಗೆ ಅಕ್ಕಮಹಾದೇವಿ, ಸುಂದರೆ ಯುವತಿ ನಡೆದು ಹೋಗುತ್ತಾಳೆ ಎಂದರೆ ಅವಳ ಧೈರ್ಯ ಎಷ್ಟು ಎಂಬುದು ಮುಖ್ಯ, ಅದೇ ರೀತಿ ನಮ್ಮ ಮಹಿಳೆಯರು ಬರೀ ಮಗಳನ್ನು ಬೈದು ಸರಿದಾರಿಗೆ ತರುವುದಲ್ಲ ಮಗನು ಮಾಡಿದ ತಪ್ಪನ್ನು ಸಹ ತಿದ್ದಬೇಕು, ಪರಸ್ತ್ರೀ, ಪರಧನ, ಹೊಲ್ಲೆ ಎಂಬ ತತ್ವ ಕಲಿಸಬೇಕು, ಅದು ನಿಜವಾದ ಸಬಲತೆ, ಗಾಂಧೀಜಿ ರಾತ್ರಿ 12 ಗಂಟೆಗೆ ಮಹಿಳೆ ಒಬ್ಬಂಟಿಯಾಗಿ ಬಂದಾಗ ಸ್ವಾತಂತ್ರ್ಯ ಎಂದರು, ಅದರೆ ಇಂದು 12 ಗಂಟೆ ಹಗಲೇ ಬರುವುದು ಕಷ್ಟವಾಗಿದೆ, ಕಾರಣ ನಮ್ಮ ಮಕ್ಕಳಿಗೆ ಬದ್ಧತೆ ಕಲಿಸುತ್ತಿಲ್ಲ, ಅದ್ದರಿಂದ ಹೆಣ್ಣು ಮಾಯೆಯಲ್ಲ, ಅಬಲೆಯಲ್ಲ, ನಾವು ವೈಜಾರಿಕತೆಯಿಂದ ಯೋಜಿಸಿ, ಥ್ಯಾಕರೆ ಲಿಂಗಪೂಜೆ ಮಾಡುವ ಕಿತ್ತೂರು ರಾಣಿ ಚನ್ನಮ್ಮನಿಗೆ ಭಯ ಪಡುತ್ತಾನೆ, ಮುಟ್ಟಲು ಸಾಧ್ಯವಿಲ್ಲ, ಇಂಗ್ಲೇಂಡ್ ಸಂಸತ್ತಿನಲ್ಲಿ ಚರ್ಚೆಯಾಗುತ್ತದೆ ಎಂದರೆ ಎಷ್ಟು ಗಟ್ಟಿ ಗಿತ್ತಿ ಎನ್ನುವುದನ್ನು ನಾವು ಕಾಣಬೇಕು, ನಮ್ಮ ಮಹಿಳೆಯರು ಪುರಷನನ್ನು ಪ್ರಶ್ನಿಸುವಂತಹ ಗುಣ ಬೆಳೆಬೇಕು ಅದಕ್ಕೆ ಶಿಕ್ಷಣ, ಸಂಸ್ಕೃತಿ, ಬದ್ಧತೆ ಮುಖ್ಯ ಎಂದರು. ಟಿ.ವಿಯಲ್ಲಿ ಬರುವ ಭವಿಷ್ಯ ಹೇಳುವ ಗುಂಡಾ ಸ್ವಾಮಿಗಳಿಂದ ದೂರವಾಗಿ, ನಮ್ಮನ್ನು ದಾರಿ ತಪ್ಪಿಸುತ್ತಿದ್ದಾರೆ, ಕರೋನಾ ಸಂದರ್ಭದಲ್ಲಿ ಯಾವ ಸ್ವಾಮಿ ರಕ್ಷಿಸಿದ, ಯಾವ ದೇವರು ಸಿಟ್ಟಾಗಿದ್ದ ಹೇಳಿ ಎಂದು ಮಹಿಳೆರಿಗೆ ಪ್ರಶ್ನಿಸುವ ಮೂಲಕ ಹೆಣ್ಣು ಮಕ್ಕಳು ಶರಣರ ತತ್ವ ಅಳವಡಿಕೆ, ಲಿಂಗಾಯತ ಧರ್ಮ ಏಕೈಕ ಧರ್ಮ ಜಗತ್ತಿನಲ್ಲಿ ಮಹಿಳೆರಿಗೆ ಸಮಾನತೆ ಸ್ವಾತಂತ್ರ್ಯ ಕೊಟ್ಟ ಧರ್ಮ ಎಂದರು.
ಸಾನಿಧ್ಯ ವಹಿಸಿ ಪ್ರಭುಮಹಾಸ್ವಾಮಿಗಳು ಶರಣರು, ಅದರಲ್ಲೂ ತಳ ಸಮುದಾಯದ ವಚನಕಾರ್ತಿಯರ ಸ್ವಾತಂತ್ರ್ಯದ ಬಗ್ಗೆ ತಿಳಿಸಿದರು,
ಪುರಸಭೆಯ ಅಧ್ಯಕ್ಷೆ ಅನಿತಾ ವಸಂತಕುಮಾರ್ ಉದ್ಘಾಟಿಸಿ ಮಾತನಾಡಿದರು, ಮದರ್ ಸಿಸಿಲಾ,ಅಕ್ಕನ ಬಳಗದ ಗೌರವಾಧ್ಯಕ್ಷೆ ಅಂಕಮನಾಳ್ ಶಾಂತಮ್ಮ , ನೂತನ ಅಧ್ಯಕ್ಷೆ ಜ್ಯೋತಿ ಗುಡೇಕೋಟೆ ಮಾತನಾಡಿದರು, ಗೋನಾಳು ನಿರ್ಮಲ ಬಸವರಾಜ, ಶಶಿಕಲಾ ಚಂದ್ರಶೇಖರಪ್ಪ, ನಿರೂಪಿಸಿದರು, ಸುಧಾ ಸಂಗಡಿಗರು ಪ್ರಾರ್ಥಿಸಿದರು, ಶಿವಲೀಲಾ ವೀರೇಶ್ ಸ್ವಾಗತಿಸಿದರು, ವಿಶಾಲಾಕ್ಷಿ ಉಗ್ರಾಣದ ಪ್ರಸ್ತಾವಿಕ ನುಡಿಗಳನ್ನಾಡಿದರು, ಸಮಾರಂಭದಲ್ಲಿ ವೆಸ್ಕೋ ಕಂಪನಿಯ ಕುಮಾರಿ ಅಕ್ಷಯ ಕಂಪನಿಯು ಮಹಿಳೆಯರ ಶಿಕ್ಷಣಕ್ಕೆ ಒತ್ತು ಕೊಡುತ್ತಿರುವ ಬಗ್ಗೆ, ಸಬಲೀಕರಣದ ಬಗ್ಗೆ ತಿಳಿಸಿದರು.
ಗಣ್ಯರಾದ ಮೇಲು ಸೀಮೆ ಶಂಕ್ರಪ್ಪ, ಗುಡೇಕೋಟೆನಾಗರಾಜ, ಅರಳಿಕುಮಾರಸ್ವಾಮಿ, ಹಗರಿ ಬಸವರಾಜಪ್ಪ, ಗುಡೇಕೋಟೆ ನಾಗರಾಜ್, ಮಂದಲಾ ಶಶಿಧರ್, ವಸಂತಕುಮಾರ್ ಹಲವಾರು ಗಣ್ಯರು, ಮಹಿಳೆಯರು ಉಪಸ್ಥಿತರಿದ್ದರು.