ಮಹಿಳೆಯ ವ್ಯಾನಿಟಿ ಬ್ಯಾಗ್ ಕಸಿದು ಪರಾರಿ

ಮೈಸೂರು,ಮಾ.29:- ಮಹಿಳೆಯೋರ್ವರು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಹಿಂದಿನಿಂದ ಬೈಕಿನಲ್ಲಿ ಬಂದ ದುಷ್ಕರ್ಮಿಗಳು ಮಹಿಳೆಯ ವ್ಯಾನಿಟಿ ಬ್ಯಾಗ್ ನ್ನು ಅಪಹರಿಸಿದ ಘಟನೆ ಚಾಮರಾಜಪುರಂ ಜಯಲಕ್ಷ್ಮಿವಿಲಾಸ ರಸ್ತೆಯಲ್ಲಿ ನಡೆದಿದೆ.
ಕುವೆಂಪುನಗರ ನಿವಾಸಿ ನಿಮಿಷಾ ನಂದಕುಮಾರ್ ಎಂಬವರೇ ಬ್ಯಾಗ್ ಕಳೆದುಕೊಂಡವರಾಗಿದ್ದಾರೆ. ಇವರು ನಿನ್ನೆ ಸಾಯಂಕಾಲ 4.30ರ ಸುಮಾರಿಗೆ ಚಾಮರಾಜಪುರಂನ ಜಯಲಕ್ಷ್ಮಿ ವಿಲಾಸ ರಸ್ತೆಯ ಲಕ್ಷ್ಮಿರಾಮಸ್ವಾಮಿ ಸೌಧದ ಬಳಿ ನಡೆದು ಹೋಗುತ್ತಿದ್ದ ವೇಳೆ ಬೈಕಿನಲ್ಲಿ ಹಿಂದಿನಿಂದ ಬಂದ ದುಷ್ಕರ್ಮಿಗಳು ವ್ಯಾನಿಟಿ ಬ್ಯಾಗ್ ಕಸಿದು ಪರಾರಿಯಾಗಿದ್ದಾರೆ. ಬ್ಯಾಗ್ ನಲ್ಲಿ 7ಸಾವಿರ ರೂ.ನಗದು ಇತ್ತು ಎನ್ನಲಾಗಿದೆ. ದುಷ್ಕರ್ಮಿಗಳು ಬ್ಯಾಗ್ ಕಸಿದುಕೊಂಡು ಪರಾರಿಯಾಗುತ್ತಿರುವ ದೃಶ್ಯ ಸ್ಥಳೀಯ ನಿವಾಸಿಯೊಬ್ಬರು ಅಳವಡಿಸಿದ್ದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಪೆÇಲೀಸರು ಸಿಸಿಟಿವಿ ಫೂಟೇಜ್ ಪರಿಶೀಲಿಸಿದ್ದು ದುಷ್ಕರ್ಮಿಗಳ ಪತ್ತೆಗೆ ಬಲೆ ಬೀಸಿದ್ದಾರೆ. ಲಕ್ಷ್ಮಿಪುರಂ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.