ಮಹಿಳೆಯ ಬರ್ಬರ ಹತ್ಯೆ

ನಂಜನಗೂಡು: ಜು.29:- ತಾಲ್ಲೂಕು ಹಳೇಪುರ ಗ್ರಾಮದಲ್ಲ್ಲಿ ಮಹಿಳೆ ಕೊಚ್ಚಿ ಬರ್ಬರ ಹತ್ಯೆ ಮಾಡಲಾಗಿರುವ ಘಟನೆ ನಡೆದಿದೆ.
ಮಿಣುಕಮ್ಮ (45) ಕೊಲೆಯಾದ ಮಹಿಳೆ. ಅದೇ ಗ್ರಾಮದ ಮಹದೇವನಾಯಕ ಕೊಲೆ ಮಾಡಿರುವ ಆರೋಪಿ. ಇಂದು ಬೆಳಿಗ್ಗೆ ಹಾಲು ತರಲು ಮಿಣುಕಮ್ಮ ಹೊರಗಡೆ ಬಂದಾಗ ಕೊಲೆ ಮಾಡಲಾಗಿದೆ.
ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ ಮಹದೇವನಾಯಕ ಪರಾರಿಯಾಗಿದ್ದಾನೆ. ಮಿಣುಕಮ್ಮ ಹಾಗೂ ಮಹದೇವನಾಯಕ ನಡುವೆ ಅಕ್ರಮ ಸಂಬಂಧ ಇತ್ತು ಎಂದು ಹೇಳಲಾಗಿದೆ. ಇತ್ತೀಚೆಗೆ ಮತ್ತೋರ್ವನ ಜೊತೆ ಮಿಣುಕಮ್ಮ ಸಂಬಂಧ ಬೆಳೆಸಿದ್ದಳೆಂದು ಹೇಳಲಾಗಿದೆ. ಈ ಹಿನ್ನಲೆ ಇಂದು ಬೆಳಿಗ್ಗೆ ಮಹದೇವನಾಯಕ ಕೊಲೆ ಮಾಡಿ ಪರಾರಿಯಾಗಿದ್ದಾನೆ.
ಕೌಲಂದೆ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.