
ಬೀದರ್:ಮಾ.24: ಮಹಿಳೆ ಇಲ್ಲದ ಮನೆ ಅದು ಮನೆಯೇ ಇರುವುದಿಲ್ಲ. ಅದು ಮಸಣಕ್ಕೆ ಸಮಾನವಾಗಿರುತ್ತದೆ ಎಂದು ಬೀದರ್ ನೂತನ ವಿಶ್ವವಿದ್ಯಾಲಯದ ನೂತನ ಕುಲಪತಿಗಳಾದ ಪೆÇ್ರ.ಬಿ.ಎಸ್ ಬಿರಾದಾರ ನುಡಿದರು.
ಗುರುವಾರ ಸಾಯಂಕಾಲ ನಗರದ ಕರ್ನಾಟಕ ಸಾಹಿತ್ಯ ಸಂಘದ ಸಾಂಸ್ಕøತಿಕ ಸಭಾಂಗಣದಲ್ಲಿ ಅಕ್ಕಮಹಾದೇವಿ ಮಹಿಳಾ ಪತ್ತಿನ ಸಹಕಾರ ಸಂಘ, ಡಾ.ಎಸ್.ಎಸ್ ಸಿದ್ದಾರೆಡ್ಡಿ ಫೌಂಡೇಶನ್ ಹಾಗೂ ಕರ್ನಾಟಕ ಜಾನಪದ ಪರಿಷತ್ತು ಜಿಲ್ಲಾ ಮಹಿಳಾ ಘಟಕಗಳ ಸಹಯೋಗದಲ್ಲಿ ಅಂತರಾಷ್ಟಿಯ ಮಹಿಳಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ಮಹಿಳೆ ಎಲ್ಲ ಕ್ಷೇತ್ರಗಳಲ್ಲಿ ಗುರ್ತಿಸಿರಬೇಕು ಅಂದಾಗ ಮಾತ್ರ ಆ ಕ್ಷೇತ್ರ ಸಮೃದ್ಧಗೊಳ್ಳಲು ಸಾದ್ಯ. ಇತ್ತಿಚೀಗಂತೂ ಎಲ್ಲ ಶಾಲಾ, ಕಾಲೇಜುಗಳು ಹಾಗೂ ವಿಶ್ವವಿದ್ಯಾಲಯಗಳಲ್ಲಿ ಯುವತಿಯರ ಸಂಖ್ಯೆ ಜಾಸ್ತಿಯಾಗಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಶೇಕಡಾ 95ರಷ್ಟು ಯುವತಿಯರು ಎಲ್ಲ ಶಾಲಾ, ಕಾಲೇಜುಗಳಲ್ಲಿ ವ್ಯಾಸಾಂಗ ಮಡುತ್ತಿರುವರು. ಫಲಿತಾಂಶ ಗಳಿಕೆಯಲ್ಲೂ ಯುವತಿಯರ ಮೇಲುಗೈ. ಇದು ಪುರುಷ ಹಾಗೂ ಮಹಿಳಾ ಸಮಾನತೆ ಎದ್ದು ತೋರುತ್ತದೆ ಎಂದರು.
ಇತ್ತಿಚೀನ ದಿನಗಳಲ್ಲಿ ಮಹಿಳೆಯನ್ನು ಬರ್ಬರವಾಗಿ ಹತ್ಯೆಗೈಯ್ಯುವುದು, ಸಾಮೂಹಿಕ ಅತ್ಯಾಚಾರಗೈಯ್ಯುತ್ತಿರುವುದು, ಆಕೆಯನ್ನು ತುಂಡರಸಿ ರೆಫ್ರಿಜಿರೆಟರ್‍ಗಲಲ್ಲಿ ಇಡುತ್ತಿರುವುದು, ಲೈಂಗಿಕ ದೌರ್ಜನ್ಯ ಇತ್ಯಾದಿ ಕಾಮ ಪೈಶಾಚಿಕ ಕೃತ್ಯಗಳು ಸಂಪೂರ್ಣವಾಗಿ ನಿಲ್ಲಬೇಕೀದೆ. ಅದಕ್ಕಾಗಿ ಕಾನೂನಿನಲ್ಲಿ ಇನ್ನಷ್ಟು ಸುಧಾರಣೆ ತಂದು ಮಹಿಳೆಯ ಮೇಲೆ ಶೋಷಣೆ ಶುನ್ಯವಾದರೆ ಭಾರತ ಮತ್ತೊಮ್ಮೆ ಗುರು ಸ್ಥಾನದಲ್ಲಿ ಕಾಣಬಹುದಾಗಿದೆ ಎಂದರು.
ಗುಲಬರ್ಗಾ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳಾದ ಪೆÇ್ರ.ಬಿ.ಜಿ ಮೂಲಿಮನಿ ಮಾತನಾಡಿ, ಈ ವರ್ಷದ ದೈಹ್ಯ ವಾಕ್ಯ ಎಂದರೆ ‘ಸಬಲಿಕರಣ ತಿವೃತೆ ಹೆಚ್ಚಿಸುವುದು’. ಒಂದು ದೇಶ ಅಭಿವೃದ್ಧಿ ಕಾಣಬೇಕಾದರೆ ಆ ದೇಶದಲ್ಲಿ ಉನ್ನತ ಶಿಕ್ಷಣ ಬಲಿಷ್ಟವಾಗಿರಬೇಕು, ಅಲ್ಲಿಯ ಶಾಲೆ, ಕಾಲೇಜು ಹಾಗೂ ವಿಶ್ವವಿದ್ಯಾಲಯಗಳು ಶಿಕ್ಷಣವನ್ನು ಸಮೃದ್ಧಗೊಳಿಸಲು ಕಟಿಬದ್ದರಾಗಬೇಕು, ಅದರಲ್ಲೂ ಯುವತಿಯರು ಹೆಚ್ಚೆಚ್ಚು ಶೈಕ್ಷಣಿಕ ಅಭಿವೃದ್ಧಿ ಹೊಂದಬೇಕೆಂದು ಕರೆ ನೀಡಿದರು.
ಗುರುನಾನಕ ಸಮೂಹ ಶಿಕ್ಷಣ ಸಂಸ್ಥೆ ಉಪಾಧ್ಯಕ್ಷೆ ಡಾ.ರೇಷ್ಮಾ ಕೌರ್ ಅಕ್ಕಮಹಾದೇವಿ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿ, ಅನ್ನದಲ್ಲಿ ರೂಚಿ ಕಾಣಬೇಕಾದರೆ ಉಪ್ಪು ಎಷ್ಟು ಮಹತ್ವವೋ ಒಂದು ಕುಟುಂಬದಲ್ಲಿ ಮಹಿಳೆ ಇದ್ದರೆ ಅಷ್ಟೆ ಮಹತ್ವತೆ ಬರುವುದು. ಬಾಲ್ಯದಲ್ಲಿ ಒಂದು ಹೆಣ್ಣಿಗೆ ತಾಯಿ ಆಸರೆ ನೀಡಿದಂತೆ ದಾಂಪತ್ಯ ಬದುಕಿನಲ್ಲಿ ಅತ್ತೆ ತನ್ನ ಸೊಸೆಯನ್ನು ಅದೇ ತರಹ ನೋಡಿಕೊಂಡರೆ ಆ ಮನೆ ಹೃದಯವಂತಿಕೆಯಿಂದ ಕೂಡಿರುತ್ತದೆ ಎಂದರು.
ವಚನ ಪ್ರವಚನಕಾರರಾದ ಸುವರ್ಣಾ ಚಿಮಕೊಡೆ ಮಾತನಾಡಿ, ಹೆಣ್ಣು ಒಂದು ಕುಟುಂಬದ ಬೇರಿದ್ದಂತೆ. ಹೆಣ್ಣು ಮನೆಯಲ್ಲಿ ಇಲ್ಲದಿದ್ದರೆ ಅದರ ಕೊರತೆ ಎದ್ದು ಕಾಣುತ್ತದೆ. ಹೆಣ್ಣಾದ ನಾವುಗಳು ನಮ್ಮನ್ನು ನಾವು ಗೌರವಿಸಿಕೊಳ್ಳಬೇಕು. ಇಂದಿನಿಂದ ನಾವು ಮನೆಯ ಸೇವಕಿಯಾಗಿರದೆ ಮನೆಯ ವ್ಯವಸ್ಥಾಪಕಿ ಎಂದು ಹೇಳಿಕೊಳ್ಳಬೇಕೆಂದು ತಿಳಿಸಿದರು.
ಬ್ರಿಮ್ಸ್ ಬೋಧಕ ಆಸ್ಪತ್ರೆಯ ಸಮುದಾಯ ವೈದ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ.ಪಲ್ಲವಿ ಕೇಸರಿ ಮಾತನಾಡಿದರು. ಕರ್ನಾಟಕ ಸಾಹಿತ್ಯ ಸಂಘದ ಅಧ್ಯಕ್ಷ ಡಾ.ಜಗನ್ನಾಥ ಹೆಬ್ಬಾಳೆ ಪ್ರಾಸ್ತಾವಿಕ ಮಾತನಾಡಿದರು. ಅಕ್ಕಮಹಾದೇವಿ ಮಹಿಳಾ ಪತ್ತಿನ ಸಹಕಾರ ಸಂಘದ ಅಧ್ಯಕ್ಷೆ ಡಾ.ಸಾವಿತ್ರಿಬಾಯಿ ಹೆಬ್ಬಾಳೆ ಅಧ್ಯಕ್ಷತೆ ವಹಿಸಿದ್ದರು.
ಕಿತ್ತೂರು ರಾಣಿ ಚನ್ನಮ್ಮ ಮಹಿಳಾ ಮಂಡಳದ ಕಾರ್ಯದರ್ಶಿ ಪುಣ್ಯವತಿ ವಿಸಾಜಿ ಅತಿಥಿಗಳಾಗಿ ಭಾಗವಹಿಸಿದರು. ಭಾಲ್ಕಿ ಚನ್ನಬಸವೇಶ್ವರ ಮಹಾವಿದ್ಯಾಲಯದ ಪ್ರಾಧ್ಯಾಪಕಿ ವಿಜಯಲಕ್ಷ್ಮೀ ಗಡ್ಡೆ ವಿಶೇಷ ಉಪನ್ಯಾಸ ನೀಡಿದರು.
ಡಾ. ವಿದ್ಯಾ ಪಾಟೀಲ, ಪೆÇ್ರ. ವಿಜಯಲಕ್ಷ್ಮಿ ಗಡ್ಡೆ, ಸುವರ್ಣಾ ಚಿಮಕೋಡೆ, ಶ್ರೀದೇವಿ ಗುರಪ್ಪ ಟೊಣ್ಣೆ, ಹೇಮಲತಾ ವೀರಶೆಟ್ಟಿ, ಲಕ್ಷ್ಮಿ ಮೇತ್ರೆ, ಮದುಮತಿ ನಾಗಣ್ಣ ಸಜ್ಜನಶೆಟ್ಟಿ, ಪಾರ್ವತಿ ವೀರಶೆಟ್ಟಿ ಮೊಕ್ತದಾರ್, ಸುರೇಖಾ ಬಸವರಾಜ ಬೇಲೂರೆ, ಭಾಗಮ್ಮ ಗುರುನಾಥ, ಶಕುಂತಲಾ ಮಹಾದೇವ ಮಠಪತಿ, ಮಾಣಿಕಾದೇವಿ ಪಾಟೀಲ ಇವರಿಗೆ ಅಕ್ಕಮಹಾದೇವಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಉದ್ಯಮಿ ಮಲ್ಲಮ್ಮ ಚಂದ್ರಶೇಖರ ಹೆಬ್ಬಾಳೆ, ಇಂಜಿನಿಯರ್ ಉಮಾ ಮಹೇಶ್ವರಿ ವೀರಶೆಟ್ಟಿ ಮಣಗೆ, ಅಖಿಲ ಭಾರತೀಯ ವೀರಶೈವ ಮಹಾಸಭೆ ಜಿಲ್ಲಾಧ್ಯಕ್ಷ ವೈಜಿನಾಥ ಕಮಠಾಣೆ ಹಾಗೂ ವಿಶ್ವ ಹಿಂದು ಪರಿಷತ್ ಅಧ್ಯಕ್ಷ ರಾಮಕೃಷ್ಣ ಸಾಳೆ ಗೌರವ ಉಪಸ್ತಿತರಿದ್ದರು.
ಆರಂಭದಲ್ಲಿ ಕರ್ನಾಟಕ ಜಾನಪದ ಪರಿಷತ್ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಮಲ್ಲಮ್ಮ ಸಂತಾಜಿ ಸ್ವಾಗತಿಸಿದರು. ಡಾ.ಸುನಿತಾ ಕೂಡ್ಲಿಕರ್ ಕಾರ್ಯಕ್ರಮ ನಿರೂಪಿಸಿ, ತಾಲೂಕಾಧ್ಯಕ್ಷೆ ಸವಿತಾ ಸಾಕುಳೆ ವಂದಿಸಿದರು. ಡಾ.ರಾಜಕುಮಾರ ಹೆಬ್ಬಾಳೆ, ನಿಜಲಿಂಗಪ್ಪ ತಗಾರೆ ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿದ್ದರು.