ಮಹಿಳೆಯಿಂದ ಸ್ವಯಂ ಸೇವಕರ ಸಮುದಾಯ ರಚನೆ

ಬೆಂಗಳೂರು. ಡಿ.೩-ಲಾಕ್‌ಡೌನ್‌ನಿಂದಾಗಿ ಸಿಲುಕಿಕೊಂಡವರಿಗೆ ಸಹಾಯ ಮಾಡಲು ಬೆಂಗಳೂರಿನ ಈ ಏಕೈಕ ಅಮ್ಮ ಮಹಿತಾ ನಾಗರಾಜ್ ೫೫,೦೦೦ ಕ್ಕೂ ಹೆಚ್ಚು ಸ್ವಯಂಸೇವಕರ ಸಮುದಾಯವನ್ನು ರಚಿಸಿದ್ದಾರೆ.
ಬೆಂಗಳೂರಿನ ಮಹಿತಾ ನಾಗರಾಜ್ ಅವರಿಗೆ ಯುಕೆಯಲ್ಲಿ ತನ್ನ ಸಹಪಾಠಿಯೋರ್ವರ ಪರಿಚಯ ಇತ್ತು. ಜೊತೆಗೆ ಅವರ ತಂದೆ-ತಾಯಿ ಇಬ್ಬರು ಬೆಂಗಳೂರಿನಲ್ಲಿ ವಾಸವಾಗಿದ್ದರು. ಈ ಹಿನ್ನಲೆ ಅವರಿಗೆ ಕೋವಿಡ್ ಪರೀಕ್ಷೆ ನಡೆಸುವುದರೊಂದಿಗೆ ಅಗತ್ಯ ವಸ್ತುಗಳ ಪೂರೈಕೆ ಮಹಿತಾ ನಾಗರಾಜ್ ಅವರನ್ನು ಕೇಳಿದ್ದರು, ಇದರಿಂದ ತಕ್ಷಣ ತನ್ನ ಸ್ನೇಹಿತೆಯ ಪೋಷಕರಿಗೆ ಕೋವಿಡ್ ಪರೀಕ್ಷೆ ಮಾಡಿಸುವುದರೊಂದಿಗೆ ಅಗತ್ಯ ವಸ್ತುಗಳನ್ನ ಸಹ ಪೂರೈಕೆ ಮಾಡಿದ್ದರು.
ಇದರಿಂದ ಎಚ್ಚೆತ್ತ ಮಹಿತಾ ನಾಗರಾಜ್ ಸೋಷಿಯಲ್ ಮೀಡಿಯಾದಲ್ಲಿ ಜನರು ತಮ್ಮ ಅಗತ್ಯತೆಗಳನ್ನು ಕೇಳುವಂತಹ, ಜೊತೆಗೆ ಅಗತ್ಯವಂತಹವರಿಗೆ ಸಹಾಯ ಮಾಡುವಂತಹ ಪೇಸ್ ಬುಕ್ ಪೇಜ್‌ವೊಂದನ್ನು ಕ್ರಿಯೇಟ್ ಮಾಡಿದರು. ಇದರಿಂದ ಈ ಫೇಸ್‌ಬುಕ್ ಪೇಜ್ ನ ಗುಂಪಿನಲ್ಲಿ ಸುಮಾರು ೫೫ ಸಾವಿರಕ್ಕೂ ಹೆಚ್ಚು ಜನರಿದ್ದು, ಕೇರ್‌ಮೊಂಗರ್ಸ್ ಇಂಡಿಯಾ ಎಂಬ ಗುಂಪು ಹುಟ್ಟಿಕೊಂಡಿತು.
ಈ ಮೂಲಕ ದಿನಕ್ಕೆ ೮೦೦ ರಿಂದ ೧,೫೦೦ ಕಾಲ್ಸ್, ಮೆಸೆಜ್‌ಗಳು ಬರುತ್ತಿತ್ತು. ಜೊತೆಗೆ ವಾಟ್ಸಾಪ್ ಮೂಲಕ ಸುಮಾರು ೨,೫೦೦ ಮೆಸಡಜ್‌ಗಳು ಸಹಾಯಕ್ಕಾಗಿ ಬರುತ್ತಿದ್ದು, ಅವರ ಅಗತ್ಯತೆಯನ್ನ ಪೂರೈಸುವಂತಹ ಕೆಲಸ ತ್ವರಿತವಾಗಿ ಆಗಬೇಕಿತ್ತು. ಹೀಗಾಗಿ ಕೆಲವರು ವಾಟ್ಸ್ ಅಪ್ ಮೂಲಕ ನಗರ ಭಾಗಕ್ಕೆ ಮಾತ್ರ ಕೆಲ ಗುಂಪುಗಳನ್ನು ಮಾಡಲಾಗಿತ್ತು. ಇನ್ನು ಕೇರಳದ ಮಗುವಿಗೆ ಎಪಿಲೆಪ್ಟಿಕ್ ಚುಚ್ಚುಮದ್ದಿನ ಅಗತ್ಯವಿದ್ದ ಸಂದರ್ಭದಲ್ಲಿ, ಆ ಮಗುವಿಗೆ ಚುಚ್ಚು ಮದ್ದನ್ನ ೭೨ ಗಂಟೆಗಳ ಒಳಗೆ ನೀಡಬೇಕಾಗಿತ್ತು. ಆದರೆ ಅದು ನಮ್ಮ ರಾಜ್ಯದಲ್ಲಿ ಲಭ್ಯವಿಲ್ಲದಿದ್ದಾಗ, ಅವರ ನೆರವಿಗೆ ಬಂದಿದ್ದು ಕೇರ್‌ಮೊಂಗರ್ಸ್.
ಇವರು ಆ ಮಗುವಿಗೆ ಪುಣೆಯಲ್ಲಿ ಚುಚ್ಚು ಮದ್ದನ್ನ ಒತ್ತೆ ಹಚ್ಚಿ ಅದನ್ನ ೪೮ ಗಂಟೆಗಳಲ್ಲಿ ಮಗುವಿಗೆ ತಲುಪಿಸುವಂತಹ ಕೆಲಸ ಮಾಡಿತು. ಇನ್ನು ವ್ಯಕ್ತಿಯೋರ್ವ ತನ್ನ ಮಗಳೊಂದಿಗೆ ವಿದೇಶದಲ್ಲಿ ವಾಸವಾಗಿದ್ದು, ತಾವು ೩೫ ವರ್ಷಗಳ ಕಾಲ ವಾಸ ಮಾಡಿದ್ದ ಮನೆಗೆ ಹಿಂತಿರುಗಿದಾಗ, ಅವರಿಗೆ ನೆರೆಹೊರೆಯವರಿಂದ ಸಮಸ್ಯೆಯಾದಾಗ, ಆಮಸ್ಯೆಯನ್ನ ಕೇರ್‌ಮೊಂಗರ್ಸ್ ಬಗೆಹರಿಸಿದ್ದರು ಎಂದು ಹೇಳುತ್ತಾರೆ.
ಗುಂಪಿನಲ್ಲಿರುವ ನಾವು ಇದುವರೆಗೂ ಒಬ್ಬರನ್ನೊಬ್ಬರು ಭೇಟಿ ಆಗಿಲ್ಲ, ಬದಲಾಗಿ ನಾವೆಲ್ಲಾ ಸಂಪರ್ಕದಲ್ಲಿದ್ದೇವೆ, ಜೊತೆಗೆ ಲಾಕ್ ಡೌನ್ ನಿಂದಾಗಿ ನಾವೆಲ್ಲ ಕುಟುಂಬಸ್ಥರಾಗಿದ್ದೇವೆ ಎಂದು ಸಣ್ಣ ಸ್ಮೇಲ್ ಮಾಡಿದ್ದಾಳೆ.
ಅಲ್ಲದೆ ಈ ಕೆಲಸದ ಮೇಲೆ ಹೆಚ್ಚು ಗಮನ ಇಡುವ ಸಲುವಾಗಿ ತನ್ನ ೧೨ ವರ್ಷದ ಮಗನನ್ನ ತಮ್ಮ ಸ್ನೇಹಿತನ ಮನೆಗೆ ಕಳಿಸಿ, ನನ್ನ ತಾಯಿಯನ್ನ ಅಜ್ಜಿ ಮನೆಗೆ ಕಳುಹಿಸಿದ್ದರು. ಅಲ್ಲದೆ ಮಗ ತಾಯಿಯನ್ನ ಬಿಟ್ಟು ಒಂಟಿಯಾಗಿರುವುದು ಕಷ್ಟವಾಗಿತ್ತು, ಆದರೆ ಲಾಕ್ ಡೌನ್ ಸಂದರ್ಭದಲ್ಲಿ ಇದು ಅಗತ್ಯ ಹೆಚ್ಚಿದ್ದ ಪರಿಣಾಮ ಈ ಕೆಲಸ ಮಾಡಬೇಕಾಗಿ ಬಂತು ಎಂದಿದ್ದಾರೆ ಮೋಹಿತಾ ನಾಗರಾಜ್.