
ವಿಜಯಪುರ, ಮಾ. ೧೦- ನಾವು ಮಹಿಳೆಯರ ಸಬಲೀಕರಣದ ಬಗ್ಗೆ ಕೇವಲ ವೇದಿಕೆಯಲ್ಲಿ ಮಾತ್ರ ಮಾತನಾಡದೆ ವಿದ್ಯಾರ್ಥಿ ದೆಸೆಯಿಂದಲೆ ಸಕಾರಾತ್ಮಕ ಭಾವದಿಂದ ಸರ್ವ ಅನುಕೂಲ ಮಾಡಿಕೊಡುವ ಮನೋಭಾವ ಹೊಂದ ಬೇಕು ಎಂದು ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಮುರಳೀಧರ ತಿಳಿಸಿದರು.
ಬುಧವಾರದಂದು ಅವರು ಇಲ್ಲಿಗೆ ಸಮೀಪದ ನಾರಾಯಣಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಏರ್ಪಡಿಸಿದ್ದ ಮಹಿಳಾ ದಿನಾಚರಣೆಯ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ಪ್ರಾಸ್ತಾವಿಕ ವಾಗಿ ಮಾತನಾಡಿದ ಮುಖ್ಯ ಶಿಕ್ಷಕ ಚಂದ್ರಶೇಖರ ಹಡಪದ್, ಈ ಪ್ರಸಕ್ತ ಸನ್ನಿವೇಶದ ದಲ್ಲಿ ಮಹಿಳೆಯರು ಸಮಾಲುಗಳ ನಡುವೆ ಸಾಧನೆ ಹಾದಿಯಲ್ಲಿ ಇದ್ದಾರೆ ವಿದೆ, ಕಲೆ, ಕ್ರೀಡೆ, ಸೃಜನಶೀಲ ಸೂಕ್ಷ್ಮ ಪ್ರತಿಭೆಯ ಮೂಲಕ ತಮ್ಮ ನೈಜ ಪ್ರತಿಭೆಯ ಮೂಲಕ ಮನೆ, ಸಮಾಜ, ರಾಜ್ಯ, ದೇಶ ಕ್ಕೆ ಕೀರ್ತಿಯನ್ನು ತಂದ ಸಾಧಕೀಯರಿಗೆ ಕಡಿಮೆ ಇಲ್ಲ. ಸರ್ಕಾರದ ಎಲ್ಲ ಸೌಲಭ್ಯ ಗಳ ಸದುಪಯೋಗ ಅವರೆ ಮಾಡಿಕೊಳ್ಳುವಲ್ಲಿ ಮಂಚೂಣಿಯಲ್ಲಿರುವರು ಎಂದರು.
ಕಾರ್ಯಕ್ರಮದಲ್ಲಿ ಧರ್ಮ ಸ್ಥಳ ಜ್ಞಾನ ವಿಕಾಸ ಸಂಸ್ಥೆಯ ವಿಜಯಲಕ್ಷ್ಮೀ, ಮಹಿಳೆಯರ ಆರ್ಥಿಕ ಸಹಾಯ ಕುರಿತು, ವಿದ್ಯಾರ್ಥಿಗಳಿಂದ ಸಂಸ್ಕೃತಿಯ ಏಳಿಗೆ ಕುರಿತು ಮಾತನಾಡಿದರು.
ಅಧ್ಯಕ್ಷತೆ.ವಹಿಸಿದ್ದ ಗ್ರಾಮ ಪಂಚಾಯಿತಿಯ ಸದಸ್ಯರಾದ ಕೋಮಲ ಬಸವರಾಜು, ಮಹಿಳೆಯರು ಆರೋಗ್ಯ ದಬಗ್ಗೆ ಕಾಳಜಿಯಿಂದ ಇರಬೇಕು. ಬಾಲ್ಯದಲ್ಲಿ ಸತ್ವಯುತ ಆಹಾರ ಅಗತ್ಯ ವಿದೆ ಈಗ ಶಾಲೆಗಳಲ್ಲಿ ಅದನ್ನ ನೀಡಲಾಗುತ್ತಿದೆ ಎಂಬ ಮಾಹಿತಿ ತಿಳಿಸಿದರು. ಇದೇ ಸಂದರ್ಭದಲ್ಲಿ ಅಡುಗೆಯವರಾದ ಭಾರತಿ ಮುಖ್ಯ ಅಡುಗೆ ಸಾವಿತ್ರಮ್ಮರವರನ್ನು ಸನ್ಮಾನ ಮಾಡಲಾಯಿತು.