ಮಹಿಳೆಯರ ಸಬಲೀಕರಣದಿಂದ ಅಭಿವೃದ್ದಿ ಸಾಧ್ಯ

ಸಿರುಗುಪ್ಪ ಮಾ 30 : ತಾಲೂಕಿನ ತೆಕ್ಕಲಕೋಟೆ ಪಟ್ಟಣದ ಸ್ತ್ರೀಶಕ್ತಿ ಭವನದಲ್ಲಿ ಅಂಗನವಾಡಿ ನೌಕರರ ತಾಲೂಕು ಸಂಘದವತಿಯಿಂದ ವಿಶ್ವಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ತಾಲೂಕು ಅಧ್ಯಕ್ಷೆ ಬಿ.ಉಮದೇವಿ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು ಇಂದು ಆಧುನಿಕ ಯುಗದಲ್ಲಿ ಮಹಿಳೆಯರು ಪ್ರತಿಯೊಂದು ಕ್ಷೇತ್ರದಲ್ಲಿ ತನ್ನದೆ ಸಾಧನೆ ಮಾಡಿ ಹೆಮ್ಮರವಾಗಿದ್ದಾರೆ, ಉನ್ನತ ಸಾಧನೆಯೊಂದಿಗೆ ಮಹಿಳೆಯರು ಸಾಮಾಜಿಕ, ಸಂಸ್ಕೃತಿಯನ್ನು ಮರೆಯುವಂತಿಲ್ಲ, ಮಹಿಳೆಯರು ಇಂದು ಮಾಡದ ಕ್ಷೇತ್ರಗಳಿಲ್ಲ, ಗ್ರಾಮೀಣ ಭಾಗದ ಮಹಿಳೆಯರ ಸಬಲೀಕರಣವಾಗುವಂತೆ ನಾವೇಲ್ಲರು ಸಂಘಟಿತರಾಗಬೇಕೆಂದು ತಿಳಿಸಿದರು
ಇದೆ ಸಂದರ್ಭ ಸಿಐಯುಟಿ ಜಿಲ್ಲಾ ಉಪಾಧ್ಯಕ್ಷ ತಿಪ್ಪಯ್ಯ, ಸಿಐಯುಟಿ ತಾಲೂಕು ಕಾರ್ಯದರ್ಶಿ ಸುರೇಶ, ಅಂಗನವಾಡಿ ನೌಕರರ ಸಮಘದ ತಾಲೂಕು ಕಾರ್ಯದರ್ಶಿ ನೀಲವತಿ, ಸದಸ್ಯರಾದ ಈರಮ್ಮ, ಖಾಜಾಬೀ ಮತ್ತು ಅಂಗವಾಡಿ, ಆಶಾ ಕಾರ್ಯಕರ್ತೆಯರು ಹಾಗೂ ಎಂ.ಎಸ್.ಪಿ.ಸಿಯ ಮಹಿಳಾ ಕಾರ್ಮಿಕರು ಇದ್ದುರು.