ಮಹಿಳೆಯರ ಸಬಲೀಕರಣಕ್ಕಾಗಿ ನಮ್ಮ ಸರ್ಕಾರ ಬದ್ದ

ಬಂಗಾರಪೇಟೆ, ಫೆ. ೧೫:ಮಹಿಳೆಯರ ಸಬಲೀಕರಣಕ್ಕಾಗಿ ನಮ್ಮ ಸರ್ಕಾರ ಬದ್ದವಾಗಿದ್ದು, ಅವರ ಶ್ರೇಯೋಭಿವೃದ್ಧಿಗಾಗಿ ಶಕ್ತಿ ಯೋಜನೆಗಳನ್ನು ಜಾರಿಗೆ ತಂದಿದೆ. ಮಹಿಳೆಯರ ನಾಲ್ಕು ಕೋಣೆಯ ಮದ್ಯೆದಲ್ಲಿ ಜೀವಿಸುವುದನ್ನು ಬಿಟ್ಟು, ಸಾಮಾಜಿಕ, ರಾಜಕೀಯ, ಆರ್ಥಿಕ ಮತ್ತು ಔದ್ಯೋಗಿಕ ಕ್ಷೇತ್ರದಲ್ಲಿ ತನ್ನ ಕಾಲ ಮೇಲೆ ತಾನು ನಿಂತು, ಸ್ವಾವಲಂಬಿಯಾಗಿ ಜೀವಿಸವಂತಾಗಬೇಕು ಎಂದು ಶಾಸಕ ಎಸ್.ಎನ್.ನಾರಾಯಣಸ್ವಾಮಿ ಅವರು ಅಭಿಪ್ರಾಯಪಟ್ಟರು.
ತಾಲ್ಲೂಕಿನ ಹೊರವಲಯದ ಎಸ್.ಎನ್.ಸಿಟಿಯಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ಮಹಿಳೆಯರ ನೌಕರರ ಸಂಘದವರಿಂದ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ಮಹಿಳೆಯರ ಸಮಸ್ಯೆಗಳ ಬಗ್ಗೆ ಸರ್ಕಾರದ ಗಮನ ಸೆಳೆಯುವುದು ಮುಖ್ಯವಾದ ಹಂತ. ನಿಮ್ಮ ಸಮಸ್ಯೆಗಳನ್ನು ಶ್ರದ್ಧಾಪೂರ್ವಕವಾಗಿ ಪರಿಹರಿಸಲು ಸಹಕರಿಸುತ್ತೇನೆ. ಸಮಾಜದ ಸಾಮಾನ್ಯ ಪ್ರಗತಿಗೆ ಅಗತ್ಯವಾದ ಅಂಶ. ನಮ್ಮ ಸಮಾಜವು ಸಮತ್ವ, ನ್ಯಾಯ ಮತ್ತು ಸಮಾನ ಅವಕಾಶಗಳ ಮೇಲೆ ನಿಂತಿರುವಾಗ, ಮಹಿಳೆಯರ ಸಮಸ್ಯೆಗಳನ್ನು ಪರಿಹರಿಸುವುದು ಅತ್ಯಂತ ಮುಖ್ಯ, ಸದಾಕಾಲ ನಿಮ್ಮೊಂದಿಗೆ ನಾನಿದ್ದು, ನಿಮ್ಮೊಂದಿಗೆ ಸಹಕಾರ ನೀಡುವುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ.ಶೈಲಜ.ಸಿ.ವಿ, ರಾಜ್ಯ ಜಂಟಿ ಕಾರ್ಯದರ್ಶಿ ರಮಾ, ರಾಜ್ಯ ಸಂಘಟನಾ ಕಾರ್ಯದರ್ಶಿ ಪದ್ಮಶ್ರೀ, ಬೆಂಗಳೂರು ನಗರ ಜಿಲ್ಲಾ ಅಧ್ಯಕ್ಷೆ ಮಲ್ಲಿಕ, ಉಪಾಧ್ಯಕ್ಷ ಕವಿತ, ಜಂಟಿ ಕಾರ್ಯದರ್ಶಿ ಮಸ್ರತ್ ಜಬೀನ್, ಜಿಲ್ಲಾ ಅಧ್ಯಕ್ಷೆ ಸಹನ, ಜಿಲ್ಲಾ ಉಪಾಧ್ಯಕ್ಷೆ ನಾಗವೇಣಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನೀತ, ಜಿಲ್ಲಾ ಕ್ರೀಡಾ ಕಾರ್ಯದರ್ಶಿ ಪ್ರೇಮ, ಕೆಜಿಎಫ್ ತಾಲ್ಲೂಕು ಅಧ್ಯಕ್ಷೆ ಜ್ಹಹೂರ ಅಮೀನಾ ಹಾಗೂ ರೀಹಾನಬೇಗಂ ಇನ್ನಿತರ ಉಪಸ್ಥಿತರಿದ್ದರು.