ಮಹಿಳೆಯರ ಶೌಚಾಲಯ ಸಲುವಾಗಿ ಚಂಬು ಹಿಡಿದು ಹೋರಾಡಿ ಶಿಕ್ಷಕ ನಾದ !


ರುದ್ರಪ್ಪ ಭಂಡಾರಿ  
ಕುಕನೂರು, ಮಾ.09:   ಸ್ಥಳೀಯ  8, 9 ,10, 11 12ನೇ ವಾರ್ಡಿನ   ಮಹಿಳೆಯರು ಎದುರಿಸುತ್ತಿರುವ ಸಾರ್ವಜನಿಕ  ಶೌಚಾಲಯ ಬಗ್ಗೆ ಸದಾ ಹೋರಾಟ ಮಾಡುತ್ತಾ ಸರ್ಕಾರದ ಗಮನ ಸೆಳೆದಿದ್ದ ಯುವ ಮುಖಂಡ ಗವಿ ಶೆಲೂಡಿ ಎಂಬಾತ ಇದೀಗ ಸರ್ಕಾರಿ ಸೇವೆಗೆ ನಿಯುಕ್ತಿ ಆಗಿದ್ದಾರೆ. ೮ ನೆಯ ವಾರ್ಡಿನಲ್ಲಿ ನಿರ್ಮಿಸಿರುವ ಕೋಟ್ಯಂತರ ರೂಪಾಯಿ ಬೆಲೆಬಾಳುವ ಹೈಟೆಕ್ ಶೌಚಾಲಯ ಐದು ವರ್ಷಗಳು ಮುಗಿದರೂ ಸಹ ಸಾರ್ವಜನಿಕರ ಬಳಕೆಗೆ ಅನು ಮಾಡಿ ಕೊಡುತ್ತಿಲ್ಲ, ಕಾರಣಗಳನ್ನು ಹೇಳಿ ಮುಂದುಡುತ್ತಾ ಬರಲಾಗಿತ್ತು . ಈ ಸಮಸ್ಯೆ ಅರಿತ ಗವಿ ಶಲೂಡಿ ತನ್ನ ಮಿತ್ರ ಸಂಘಟನೆಗಳನ್ನು ಕಟ್ಟಿಕೊಂಡು ಪಟ್ಟಣ ಪಂಚಾಯತಿ ವಿರುದ್ಧ ಸದಾ ಹೋರಾಟ ಮಾಡಿ ಗಮನ ಸೇಳೆದಿದ್ದ . ಕೆಲ ಸಮಯ ಪಂಚಾಯತ್ ಅಧ್ಯಕ್ಷ ಶಂಭು ಜೋಳದ ವಿರುದ್ದ ಎದುರು ಹಾಕಿಕೊಂಡಿದ್ದ.  ಸಾಕಷ್ಟು ಹೋರಾಟ ಮಾಡಿದರೂ ಸಹ ಪ್ರಯೋಜನೆಯಾಗದೆ ಕೊನೆಗೆ ಮಹಿಳೆಯರ ಜೊತೆ ಚಂಬು ಹಿಡಿದು ಪ್ರತಿ ಭಟಿಸಿದ್ದ. ಡಾಕ್ಟರ್ ಬಿ.ಆರ್  ಅಂಬೇಡ್ಕರ್ ಅವರ ಸಿದ್ಧಾಂತವನ್ನು ಮೈಗೂಡಿಸಿಕೊಂಡು. ಶಿಕ್ಷಣ ,ಸಂಘಟನೆ ,ಹೋರಾಟ ಘೋಷ ವಾಕ್ಯದಿಂದ ಶೋಷಿತರ ಹಕ್ಕು ಬಾಧ್ಯತಗಳನ್ನು ಪರ ನಿರಂತರ ಕಾಳಜಿ ಇದ್ದ ಗವಿ ಅವರು , ಬಿ.ಯಡ್ ಪದವಿದರ.  ಜನಪರ ಅಭಿವೃದ್ಧಿಗಾಗಿ  4 ಗೋಡೆ ಮಧ್ಯೆ ಪುಸ್ತಕದ ಹುಳು ಆಗುವುದಕ್ಕಿಂತ ಸದಾ ಸಾರ್ವಜನಿಕರ ಸೇವೆಯಲ್ಲಿ ಇರಬೇಕೆಂಬ ಉತ್ಸಾಹದಿಂದ ಚಳುವಳಿ ಮಾಡುತ್ತಿದ್ದರು. ಎಸ್ಸಿ ಎಸ್ಟಿ ವಿದ್ಯಾರ್ಥಿ ಗಳ ಪಠ್ಯ ಪುಸ್ತಕ ಕೋಡಿಸಲು ಸಹ   ಭೀಮ ಆಮಿ೯ ಸಂಘಟನೆ ಅಧ್ಯಕ್ಷ ಶಂಕರ್ ಭಂಡಾರಿ ಜೊತೆಗೂಡಿ  ಹೋರಾಟ ನಡೆಸಿ ಈ ಸಂದರ್ಭದಲ್ಲಿ ವಿರೋಧಿಗಳಿಂದ ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಯಿತು. ಜೊತೆಗೆ ಓದಿದ ಅಭ್ಯಾಸಕ್ಕೆ ಕುಂದಾಗಬಾರದು ಎಂಬ ಉದ್ದೇಶದಿಂದ ಹಲವಾರು ಸಂದಶ೯ನ ಗಳನ್ನು ಎದುರಿಸಿದ್ದ. ಕೊನೆಗೆ ರಾಜ್ಯ ಸರ್ಕಾರ ಶಿಕ್ಷಕರ ನೇಮಕಾತಿ ಸಂದರ್ಭದಲ್ಲಿ ಗವಿಯವರ ಅಂಕಪಟ್ಟಿ ವಿಧ್ಯಾಹ೯   ಮಟ್ಟ  ಗಮನಿಸಿ ಸರ್ಕಾರಿ ಶಿಕ್ಷಕರಾಗಿ ವಿಜಯನಗರ ಜಿಲ್ಲೆಯ ಶಾಲೆಗೆ ನಿಯತ್ತಿ ಗೊಳಿಸಿ ಆದೇಶ ಪಟ್ಟಿಯಲ್ಲಿ ಇವರ ಹೆಸರು ಬುಧವಾರ ಪ್ರಕಟಣೆ ಯಲ್ಲಿ ಸೇರಿದೆ. ತಾಳಿದವರು ಬಾಳು ಯಾರು ಎಂಬ ನಾಣ್ಣುಡಿಯಂತೆ ಸತತ ಪರಿಶ್ರಮದಿಂದ ಪ್ರಯತ್ನ ಪಟ್ಟರೆ ಏನೆಲ್ಲಾ ಹುದ್ದೆಗಳು  ಹಾಗೂ ಅವಕಾಶ ಗಳು ಒಲಿಯುತ್ತಿವೆ  ಎಂಬುದಕ್ಕೆ ಗವಿಸಿದ್ದಪ್ಪ ಸೆಳುಡಿ ಎಂಬುವರೇ ತಾಜಾ ಉದಾಹರಣೆ.  ಯುವಕರು ಸತತ ಪರಿಶ್ರಮ ಪಟ್ಟರೆ ಏನೆಲ್ಲ ಸಾಧಿಸಬಹುದು ಎನ್ನುವುದಕ್ಕೆ ಇದು ನಿದಶ೯ನ. ಆದರೆ ದುರದಷ್ಟವಶಾತ್ ಇನ್ನುವರೆಗೆ ಮಹಿಳೆಯರಿಗೆ ಶೌಚಾಲಯ  ಸೌಲತ್ತು ಮಹಿಳೆಯರಿಗೆ ಇನ್ನೂ ಬಳಕೆ ಯಾಗದೆ ಇರುವುದು ಆಡಳಿತ ವ್ಯವಸ್ಥೆ ಬಗ್ಗೆ ಸಾಕಷ್ಟು ಅನುಮಾನವೇ ಕಾರಣವಾಗಿದೆ