ಮಹಿಳೆಯರ ಶೌಚಾಲಯ ಚರಂಡಿ ವ್ಯವಸ್ಥೆ ಇಲ್ಲದೆ ! ಕಂಗಾಲಾದ ಬಿಬ್ಬಳ್ಳಿ ಗ್ರಾಮಸ್ಥರು

ಸೇಡಂ,ನ,06 :ತಾಲೂಕಿನ ಯಡಗಾ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವಂತಹ ಬಿಬ್ಬಳ್ಳಿ ಗ್ರಾಮದಲ್ಲಿ ಕಾಗಿನ ನದಿ ಇದ್ದರು ನೀರಿನ ಸಮಸ್ಯೆ, ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದೆ ರಸ್ತೆ ಮೇಲೆ ಚರಂಡಿ ನೀರು, ಮಹಿಳೆಯರಿಗೆ ಶೌಚಾಲಯವಿಲ್ಲದೆ ಮಹಿಳೆಯರು ಬಯಲಿನಲ್ಲಿ ತೆರಳುವ ಪರಿಸ್ಥಿತಿ. ಹತ್ತು ಹಲವು ಸಮಸ್ಯೆಗಳನ್ನು ಹೊಂದಿದೆ ಈ ಗ್ರಾಮದಲ್ಲಿ ಪ್ರವಾಹ ಬಂದು 15 ದಿನಗಳಾದರೂ ಸಂಬಂಧಪಟ್ಟ ಅಧಿಕಾರಿಗಳಾಗಲಿ ಜನಪ್ರತಿನಿಧಿಗಳಾಗಲಿ ಗ್ರಾಮದ ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿದ್ದು ಸಮಸ್ಯೆಗಳ ಕುಂದುಕೊರತೆಗಳ ಕುರಿತು ಆಲಿಸುವುದಕ್ಕೆ ಅಧಿಕಾರಿಗಳು ಬಂದಿರುವುದು ದುರದೃಷ್ಟಕರ. ಈ ಗ್ರಾಮದಿಂದ ಬೇರೆ ಗ್ರಾಮಗಳಿಗೆ ಈ ರಸ್ತೆಯಿಂದ ಕಾಚುರ್,ಯಡಗಾ, ಕುಕ್ಕುಂದಾ, ಹಲವು ಗ್ರಾಮಕ್ಕೆ ತೆರಳುವಾಗ ದ್ವಿಚಕ್ರವಾಹನ ತ್ರಿಚಕ್ರ ವಾಹನ ಸವಾರರು ಬಿದ್ದು ಗಾಯಗಳನ್ನಾಗಿ ಮಾಡಿಕೊಂಡು ಹೋಗಿದ್ದಾರೆ ಎಂಬುದು ಗ್ರಾಮಸ್ಥರ ಆರೋಪ.

ಗ್ರಾಮದ ಅಗಸಿ,ನೀರು ಈ ರಸ್ತೆಯ ಮೇಲೆ ಬರುವುದರಿಂದ ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದೆ ರಸ್ತೆಯ ಮೇಲೆ ನೀರು ನಿಂತು ಮುಂದಿನ ಗ್ರಾಮಗಳಾದ ಕಾಚೂರ್, ಯಡಗಾ, ಕುಕ್ಕುಂದಾ, ಹಲವಾರು ಈ ಗ್ರಾಮಗಳಿಗೆ ದ್ವಿಚಕ್ರ ತೆಗೆದುಕೊಂಡು ಹೋಗುವರು ಅನೇಕ ಬಾರಿ ಬಿದ್ದಿದ್ದಾರೆ ಗಾಯಗಳನ್ನು ಮಾಡಿಕೊಂಡು ಹೋಗಿದ್ದಾರೆ, ಅಭಿವೃದ್ಧಿ ಅಧಿಕಾರಿಗಳಿಗೆ ಜನಪ್ರತಿನಿಧಿಗಳಿಗೆ ಹೇಳಿದರು ಪ್ರಯೋಜನವಾಗಿಲ್ಲ. ರವಿ ತಳವಾರ್ ಬಿಬ್ಬಳ್ಳಿ ಗ್ರಾಮಸ್ಥ

ಕಾಗಿಣಾ ನದಿ ಇದ್ದರು ನೀರಿನ ಸಮಸ್ಯೆ ಬಹಳಷ್ಟಿದೆ ಹಾಗೂ ಮಹಿಳೆಯರ ಶೌಚಾಲಯ, ಚರಂಡಿ ವ್ಯವಸ್ಥೆ, ಇಲ್ಲದಿರುವುದರಿಂದ ಗ್ರಾಮ ದೊಳಗಿನ ಎಲ್ಲ ರಸ್ತೆಗಳು ಚರಂಡಿ ನೀರಿನಿಂದ ಆವರಿಸಿವೆ, ಗ್ರಾಮದ ಹಿರಿಯರು ಕಿರಿಯರು ಮಹಿಳೆಯರು ಅನೇಕ ಕಾಲು ಜಾರಿ ಬಿದವರುಂಟು. ಶ್ರೀಮಂತ ತಳವಾರ್ ಬಿಬ್ಬಳ್ಳಿ ಗ್ರಾಮಸ್ಥ