ಮಹಿಳೆಯರ ಶೋಷಣೆಗೆ ಮಹಿಳೆಯರೇ ಕಾರಣ


ಸಂಜೆವಾಣಿ ವಾರ್ತೆ
ಸಂಡೂರು:ಮ: 9: ಇಂದು ಬಹಳಷ್ಟು ಸಂದರ್ಭದಲ್ಲಿ ತಾಯಂದಿರೇ ತಮ್ಮ ಹೆಣ್ಣು ಮಗುವನ್ನು ಕೆಳಮಟ್ಟಕ್ಕೆ ತೆಗೆದುಕೊಂಡು ಹೋಗುವುದನ್ನು ಕಾಣುತ್ತೇವೆ, ಅಲ್ಲದೆ ಅತ್ತೆ ಸೊಸೆಯನ್ನು ಕೆಳಗೆ ಇಳಿಸುವ ಮೂಲಕ ಹೆಣ್ಣು ಹೆಣ್ಣನ್ನೇ ಶೋಷಣೆ ಮಾಡುತ್ತಿರುವ ಅಂಶ ಕಂಡು ಬರುತ್ತಿದ್ದು ಅದನ್ನು ಸರಿಪಡಿಸಿದಾಗ ಮಾತ್ರ ನಾವು ಲಿಂಗ ತಾರತಮ್ಯವನ್ನು ಹೋಗಲಾಡಿಸಲು ಸಾಧ್ಯ ಎಂದು ಕಸಾಪ ತಾಲೂಕು ಅಧ್ಯಕ್ಷ ಬಿ.ನಾಗನಗೌಡ ಅಭಿಪ್ರಾಯಪಟ್ಟಿದ್ದಾರೆ.
ಅವರು ಪಟ್ಟಣದ ಬಿಕೆಜಿ ಸಂಸ್ಥೆಯ ಅವರಣದಲ್ಲಿ ವಿಶ್ವ ಮಹಿಳಾ ದಿನಾಚರಣೆಯನ್ನು ಉದ್ದೇಶಿಸಿ ಮಾತನಾಡಿ ಮಹಿಳೆಯರು ಅನ್ಯತಾ ಭಾವಿಸಬಾರದು ಕಾರಣ ಬಹಳಷ್ಟು ಸಮಸ್ಯೆಗಳು ಹೆಣ್ಣು ಮಕ್ಕಳಿಂದಲೇ ಪ್ರಾರಂಭವಾಗುವದನ್ನು ಕಾಣುತ್ತೇವೆ, ಅದ್ದರಿಂದ ಕುಟುಂಬದಲ್ಲಿ ಗಂಡು ಶ್ರೇಷ್ಠ ಎಂದು ಯಾವ ತಂದೆಯೂ ಹೇಳಿಲ್ಲ, 12ನೇ ಶತಮಾನದಲ್ಲಿ ಬಸವಣ್ಣನವರು ಸಮಾನತೆಯ ತತ್ವವನ್ನು ಈ ಜಗತ್ತಿಗೆ ನೀಡಿದರು, ಅವರು ಮಹಿಳಾ ಸಮಾನತೆಯನ್ನು ಸಾರಿದರು. ಅದ್ದರಿಂದ ಬರೀ ಗಂಡು ಮಕ್ಕಳು ನಮ್ಮನ್ನು ರಕ್ಷಿಸುತ್ತಾರೆ ಎನ್ನುವುದು ಸರಿಯಲ್ಲ ಎಂದರು.
ಬಿಕೆಜಿ ಕಂಪನಿಯ ಜನರಲ್ ಮ್ಯಾನೇಜರ್ ಪಿ.ಶ್ರೀನಿವಾಸ ರಾವ್ ಮಾತನಾಡಿ ಇಂದು ನಾವು ಶಿಕ್ಷಣವನ್ನು ಕೊಡುವ ಮೂಲಕ ಹೆಣ್ಣು ಗಂಡು ಬೇಧವಿಲ್ಲದೆ ಕಾಣಲು ಸಾಧ್ಯ, ಅದ್ದರಿಂದ ಶಿಕ್ಷಣ ಬಹು ಮುಖ್ಯ ಎಲ್ಲಾ ರಂಗದಲ್ಲಿ ಪುರಷ ಮೇಲೆ ಬರುತ್ತಿದ್ದಾನೆ ಎಂದರೆ ಅದಕ್ಕೆ ಹೆಣ್ಣು ಮಕ್ಕಳೇ ಕಾರಣ ಎಂದರು.
ನಂದಿಹಳ್ಳಿ ಸ್ನಾತಕೋತ್ತರ ಕೇಂದ್ರದ ಉಪನ್ಯಾಸಕಿ ಡಾ. ಪವಿತ್ರ ಅರ್. ಅಲೂರ್ ಮಾತನಾಡಿ ಹೆಣ್ಣು ಮಕ್ಕಳಿಗೆ ಇಂದು ಬಹಳಷ್ಟು ಸೌಲಭ್ಯಗಳಿವೆ, ತಂದೆಯಾದವನು ಬಹು ಪ್ರೋತ್ಸಾಹ ನೀಡುತ್ತಾನೆ, ಎಲ್ಲೋ ಒಂದು ಕಡೆ ತಾಯಿಯೇ ಹೆಣ್ಣು ಮಗುವನ್ನು ಷರತ್ತುಗಳಿಗೆ ಒಳಪಡಿಸುತ್ತಾಳೆ ಅದ್ದರಿಂದ ಅವರಿಗೆ ಸ್ವಾತಂತ್ರ್ಯ ಕೊಡಬೇಕು ಎಂದರು.
ಕಂಪನಿಯ ಸಿಬ್ಬಂದಿಗಳು ಹೆಣ್ಣಿನ ಶಿಕ್ಷಣದ ಮಹತ್ವ ಸಾರುವ ಕಿರು ನಾಟಕ ಪ್ರದರ್ಶನ ಮಾಡಿದರು, ಅಲ್ಲದೆ ಹೆಣ್ಣು ಅಬಲೆಯಲ್ಲ ಸಬಲೆ ಎನ್ನುವ ಘೋಷಣೆ ಪತ್ರಗಳನ್ನು ಪ್ರದರ್ಶ ನ ಮಾಡಿದರು. ಈ ಸಂದರ್ಭದಲ್ಲಿ ಬಿಕೆಜಿ ಗ್ಲೋಬ್ಲ ಶಾಲೆಯ ಪ್ರಾಚಾರ್ಯರಾದ ಮೀನಾಕ್ಷಿ ದಾಸ ಅತಿಥಿಗಳಾಗ ಅಗಮಿಸಿ ಮಾತನಾಡಿದರು, ವೇದಿಕೆಯಲ್ಲಿ ಉಮೇಶ್ ಭಟ್, ಹಾಗೂ ಎಲ್ಲಾ ಸಿಬ್ಬಂದಿಗಳು ಉಪಸ್ಥಿತರಿದ್ದರು. ಮಹಿಳಾ ಉದ್ಯೋಗಗಳು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ನಾಗವೇಣಿ ತಂಡದವರು ಪ್ರಾರ್ಥಿಸಿದರು, ದ್ರಾಕ್ಷಯಣಿ ನಿರೂಪಿಸಿದರು, ರಾಜಶೇಖರ ಬಿ. ಪರಿಚಯ ಭಾಷಣ ಮಾಡಿದರು, ಪವಿತ್ರ ಅರ್ ಅಲೂರು ಉದ್ಘಾಟಿಸಿದರು, ರಾಜಲಕ್ಷ್ಮಿ ತಂಡದವರು ಕಿರು ನಾಟಕ ಪ್ರದರ್ಶಿಸಿದರು, ಅಮೃತ ಇತರರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು., ಸ್ವಪ್ನ ತಂಡದವರು ನೃತ್ಯ ಪ್ರದರ್ಶನ ಮಾಡಿದರು, ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಉಮಾ, ದ್ರಾಕ್ಷಯಣಿ, ನಾಗವೇಣಿ ಇತರರಿಗೆ ಬಹುಮಾನ ವಿತರಿಸಿದರು.