
ವಿಜಯಪುರ, ಮೇ ೫: ಮುಂಬರುವ ವಿಧಾನಸಭಾ ಚುನಾವಣೆಗಳಲ್ಲಿ ಮಹಿಳೆಯರ ಮತದಾನ ಹೆಚ್ಚಿಸುವ ಸಲುವಾಗಿ ಮಹಿಳೆಯರಲ್ಲಿ ಜಾಗೃತಿ ಮೂಡಿಸಲು ಪಿಂಕ್ ಬೂತ್‌ಗಳನ್ನು ಸ್ಥಾಪಿಸಲಾಗುತ್ತಿದ್ದು ವಿಜಯಪುರ ಪಟ್ಟಣದ ಸರ್ಕಾರಿ ಹೆಣ್ಣು ಮಕ್ಕಳ ಪ್ರೌಢಶಾಲೆಯ ಮತಗಟ್ಟೆ ಸಂಖ್ಯೆ ೧೦೩ರಲ್ಲಿ ಪಿಂಕ್ ಬೂತ್ (ಗುಲಾಬಿ ಬಣ್ಣದ ಮತಗಟ್ಟೆ)ಯನ್ನು ಸ್ಥಾಪಿಸಲಾಗಿದೆ.
ಸರ್ಕಾರಿ ಮಾದರಿ ಬಾಲಕಿಯರ ಪಾಠಶಾಲೆಯಲ್ಲಿ ಮಾದರಿ ಮತಗಟ್ಟೆಯನ್ನು ತೆರೆಯಲಾಗಿದ್ದು, ಗುಲಾಬಿ ಬಣ್ಣದ ಪಿಂಕ್ ಬೂತ್ ಮತಗಟ್ಟೆಗೆ ಮಹಿಳೆಯರನ್ನು ಆಕರ್ಷಿಸುವಂತಹ ಆಕರ್ಷಕ ಚಿತ್ರಗಳನ್ನು ಬಿಡಿಸಲಾಗಿದೆ ಎಂದು ಸ್ವೀಪ್ ಸಮಿತಿ ಸದಸ್ಯರಾದ ತ್ಯಾಗರಾಜುರವರು ತಿಳಿಸಿದರು.
ಮತಗಟ್ಟೆ ಸಂಖ್ಯೆ ೧೦೩ರಲ್ಲಿ ಮಹಿಳಾ ಮತದಾರರು ೧೦೦೦ಕ್ಕೂ ಹೆಚ್ಚು ಮಂದಿ ಇರುವ ಕಾರಣ ಇಲ್ಲಿ ಪಿಂಕ್ ಬೂತ್ ತರಿಯಲಾಗಿದೆ ಎಲ್ಲಾ ಮಹಿಳಾ ಮತದಾರರು ಬಂದು ಮತದಾನ ಮಾಡಲು ಅವಕಾಶ ಕಲ್ಪಿಸಲಾಗಿದೆ ಎಂದು ಈ ಮತಗಟ್ಟೆಯು ಆಕರ್ಷಣೀಯವಾಗಿದೆ, ಈ ಮತಗಟ್ಟೆಯಲ್ಲಿ ಅಧಿಕಾರಿಯಿಂದ ಹಿಡಿದು ಮತಗಟ್ಟೆ ಸಹಾಯಕಿ ಕಾವಲು ಸಿಬ್ಬಂದಿಯವರೆಗೆ ಎಲ್ಲರೂ ಮಹಿಳೆಯರೇ ಇರಲಿದ್ದಾರೆ ಇದರಿಂದ ಮಹಿಳೆಯರ ಮತದಾನ ಪ್ರಮಾಣ ಹೆಚ್ಚಳವಾಗುವ ನಿರೀಕ್ಷೆ ಇದೆ ಎಂದು ತಿಳಿಸಿದರು.
ವಿಶೇಷವಾಗಿ ಗಾಲಿ ಕುರ್ಚಿಯ ಸಹಾಯದಿಂದ ಬರುವ ಮಹಿಳೆಯರು, ದೃಷ್ಟಿ ದೋಷ ಸೇರಿದಂತೆ ಅಂಗವಿಕಲ ಮಹಿಳೆಯರಿಗೆ ಈ ಪಿಂಕ್ ಬೂತ್ ಗಳಲ್ಲಿ ವಿಶೇಷ ಆತಿತ್ಯ ನೀಡಲಿದೆ ಇಂತಹ ಮಹಿಳೆಯರು ಸರತಿ ಸಾಲಿನಲ್ಲಿ ನಿಲ್ಲದೆ ನೇರವಾಗಿ ಮತಗಟ್ಟೆ ಕೇಂದ್ರಕ್ಕೆ ಪ್ರವೇಶಿಸಿ ಮತದಾನ ಮಾಡುವ ಅವಕಾಶ ಕಲ್ಪಿಸಲಾಗುವುದು ಎಂದು ತಿಳಿಸಿದರು.
ಮತದಾರರು ಮತದಾನವನ್ನು ಹಬ್ಬದ ರೀತಿ ಆಚರಿಸಬೇಕು ಮತ ಹಾಕುವುದರ ಜೊತೆಗೆ ಮತದಾನ ಮಾಡಿಸುವ ಬದ್ಧತೆಯನ್ನು ತೋರಿಸಬೇಕು ಮೇ ೯ರಂದು ಇಲ್ಲಿ ರಂಗೋಲಿ ಬಿಡಿಸಲಾಗುತ್ತದೆ. ಸೆಲ್ಫಿ ಸ್ಟ್ಯಾಂಡ್ ಕೂಡ ಇರುತ್ತದೆ ಎಂದು ತಿಳಿಸಿದರು.