ಮಹಿಳೆಯರ- ಮಕ್ಕಳ ಹಕ್ಕುಗಳು ಕುರಿತು ಕಾನೂನು ಅರಿವು

ದಾವಣಗೆರೆ.ನ.೯: ರಾಷ್ಟ್ರೀಯ ಕಾನೂನು ಸೇವೆಗಳ ದಿನಾಚರಣೆ ಮತ್ತು ಮಹಿಳೆಯರ ಮತ್ತು ಮಕ್ಕಳ ಹಕ್ಕುಗಳು ಹಾಗೂ ಕಾಯ್ದೆಗಳ ಬಗ್ಗೆ ಕಾನೂನು ಅರಿವು ಕಾರ್ಯಕ್ರಮವನ್ನು ದಾವಣಗೆರೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಮತ್ತು ಮಹಿಳಾ ಸೇವಾ ಸಮಾಜ ಸಹಯೋಗದಲ್ಲಿ ನಗರದ ಪ್ರವಾಸಿ ಮಂದಿರ ರಸ್ತೆಯಲ್ಲಿನ ಮಹಿಳಾ ಸೇವಾ ಸಮಾಜ ಕಾಲೇಜಿನಲ್ಲಿ ಆಯೋಜಿಸಲಾಗಿತ್ತು.ಕಾನೂನು ಅರಿವು ನೆರವಿನ ಮೂಲಕ ನಾಗರಿಕರ ಸಬಲೀಕರಣ ಅಭಿಯಾನ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮವನ್ನು ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರಾದ ಪ್ರೀತಿ ಸದ್ಗುರು ಸದರಜೋಷಿ ಉದ್ಘಾಟಿಸಿದರು. ಮಹಿಳಾ ಸೇವಾ ಸಮಾಜ ಕಾಲೇಜಿನ ಪ್ರಸನ್ನ ರೆಡ್ಡಿ ಅಧ್ಯಕ್ಷತೆ ವಹಿಸಿದ್ದರು.ಮುಖ್ಯತಿಥಿಗಳಾಗಿ ಮಹಿಳಾ ಸೇವಾ ಸಮಾಜದ ಸಹ ಕಾರ್ಯದರ್ಶಿ ಮತ್ತು ವಕೀಲರಾದ ಮಂಜುಳ.ಐ.ಕೆ, ನಿರ್ದೇಶಕರಾದ ನೀಲಮ್ಮ ಸುಭಾಷ್ ಬೆಳ್ಳುಳ್ಳಿ, ಪ್ರವೀಣ್, ರಮೇಶ್ ಯಶಂವತ್, ವಿನಾಯಕ ಇತರರು ಇದ್ದರು.