
ಭಾಲ್ಕಿ:ಮಾ.13:ಕ್ಷೇತ್ರದ ಶಾಸಕ ಈಶ್ವರ ಖಂಡ್ರೆ ಅವರಿಗೆ ಮಹಿಳೆಯರ ಬಗ್ಗೆ ಅಪಾರ ಗೌರವ ಇದೆ. ಎಲ್ಲರನ್ನು ಅತ್ಯಂತ ಪ್ರೀತಿಯಿಂದ ಕಾಣುತ್ತಾರೆ. ಮಹಿಳೆಯರ ಬೆಳವಣಿಗೆಗೆ ಶಾಸಕರು ಸದಾ ಸಹಕಾರ, ಪೆÇ್ರೀತ್ಸಾಹ ನೀಡುತ್ತ ಬಂದಿದ್ದಾರೆ
ಎಂದು ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷೆ ರೇಖಾ ವಿಲಾಸ ಪಾಟೀಲ್ ಹೇಳಿದರು.
ಪಟ್ಟಣದ ಭೀಮಣ್ಣ ಖಂಡ್ರೆ ತಾಂತ್ರಿಕ ಮಹಾವಿದ್ಯಾಲಯ(ಬಿಕೆಐಟಿ) ಸಭಾಂಗಣದಲ್ಲಿ ಅಂತರ ರಾಷ್ಟ್ರೀಯ ಮಹಿಳಾ ದಿನಾಚರಣೆ ನಿಮಿತ್ತ ಭಾನುವಾರ ಆಯೋಜಿಸಿದ್ದ ಅಂಗನವಾಡಿ, ಆಶಾ ಕಾರ್ಯಕರ್ತೆಯರ, ಮಹಿಳಾ ಬರಹಗಾರರು ಮತ್ತು ಸಂಪನ್ಮೂಲ ವ್ಯಕ್ತಿಗಳ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.
ಶಾಸಕರು ಅಣ್ಣನ ಸ್ಥಾನದಲ್ಲಿ ನಿಂತೂ ಮಹಿಳೆಯರಿಗೆ ಶೈಕ್ಷಣಿಕ, ಸಾಮಾಜಿಕ, ರಾಜಕೀಯ ಕ್ಷೇತ್ರದಲ್ಲಿ ಬೆಳವಣಿಗೆಗೆ ಅವಕಾಶ ನೀಡಿದ್ದಾರೆ. ಅದಕ್ಕೆ ನಾನೇ ಸಾಕ್ಷಿಯಾಗಿದ್ದೇನೆ ಶಾಸಕರ ಸಹಕಾರದಿಂದ ನಾನು ತಾಲೂಕು ಪಂಚಾಯಿತಿ ಅಧ್ಯಕ್ಷೆಯಾಗಿ ಸೇವೆ ಸಲ್ಲಿಸಿದ್ದೇನೆ. ನನ್ನಂತೇ ಎಲ್ಲ ಮಹಿಳೆಯರಿಗೆ ವಿವಿಧ ರಂಗಗಳಲ್ಲಿ ಅಭಿವೃದ್ಧಿ ಹೊಂದಲು ಅವಕಾಶ ನೀಡಿದ್ದಾರೆ ಅವರ ಸಹಕಾರ ಯಾರು ಮರೆಯಬಾರದು ಎಂದು ತಿಳಿಸಿದರು.
ತಾಲೂಕು ಮಹಿಳಾ ಕದಳಿ ವೇದಿಕೆ ಅಧ್ಯಕ್ಷೆ ಮಲ್ಲಮ್ಮ ನಾಗನಕೆರೆ ಮಾತನಾಡಿ, ಇಲ್ಲಿಯ ಶಾಂತಿವರ್ಧಕ ಶಿಕ್ಷಣ ಸಂಸ್ಥೆ ಮಹಿಳೆಯರ ಪಾಲಿಗೆ ಕಾಮಧೇನು ಆಗಿದೆ. ಈ ಸಂಸ್ಥೆಯಡಿ ವ್ಯಾಸಂಗ ಮಾಡಿರುವ ಮಹಿಳೆಯರು ವಿವಿಧ ಕ್ಷೇತ್ರಗಳಲ್ಲಿ ಪ್ರಗತಿ ಸಾಧಿಸಿದ್ದಾರೆ. ಅದರಲ್ಲಿ ನಾನು ಕೂಡ ಒಬ್ಬಳಾಗಿದ್ದು ಹೆಮ್ಮೆ ತರಿಸಿದೆ ಎಂದು ತಿಳಿಸಿದರು.
ಡಾ.ವೈಶಾಲಿ ಯುವರಾಜ ಜಾಧವ ಮಾತನಾಡಿ, ಆಧುನಿಕ ಜಗತ್ತಿನಲ್ಲಿ ಮಹಿಳೆ ಪುರಷರಿಗೆ ಸರಿಸಮನಾಗಿ ಎಲ್ಲ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿದ್ದಾಳೆ. ತೊಟ್ಟಿಲು ತೂಗವ ಕೈ ಇಂದು ಜಗವನ್ನೇ ತೂಗುವ ಸಾಮಾಥ್ರ್ಯ ಬೆಳೆಸಿ ಕೊಂಡಿದೆ. ಮಹಿಳೆಯರು ಶಿಕ್ಷಣ, ವೈದ್ಯಕೀಯ, ನ್ಯಾಯಾಂಗ, ರಾಜಕೀಯ, ಸಾಮಾಜಿಕ, ವ್ಯಾಪಾರ ಕ್ಷೇತ್ರಗಳನ್ನೊಳಗೊಂಡು ವಿವಿಧ ಕ್ಷೇತ್ರಗಳಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ ಎಂದು ತಿಳಿಸಿದರು.
ಶಾಂತಿವರ್ಧಕ ಶಿಕ್ಷಣ ಸಂಸ್ಥೆಯ ನಿರ್ದೇಶಕಿ ಡಾ.ಗೀತಾ ಈಶ್ವರ ಖಂಡ್ರೆ ಅಧ್ಯಕ್ಷತೆ ವಹಿಸಿದರು. ಈ ಸಂದರ್ಭದಲ್ಲಿ ಯುವ ಮುಖಂಡ ಸಾಗರ ಖಂಡ್ರೆ, ಮೀನಾಕುಮಾರಿ ಪಾಟೀಲ್, ಪುರಸಭೆ ಮಾಜಿ ಅಧ್ಯಕ್ಷೆ ಜಯಶ್ರೀ ಮಾನಕಾರಿ, ಸದಸ್ಯರಾದ ಅನಿತಾ ಪಂಚಾಳ, ಲಕ್ಷ್ಮಿ ಶಿವರಾಜ, ಶ್ರೀದೇವಿ ಕುಡತೆ, ಶಶಿಕಲಾ ಅಶೋಕ, ಲಲಿತಾ ರಾಠೋಡ್, ಶ್ವೇತಾ ಕಾರಾಮುಂಗೆ ಸೇರಿದಂತೆ ಹಲವರು ಇದ್ದರು.
ಆರತಿ ಪಾತ್ರೆ ಸ್ವಾಗತಿಸಿದರು. ದೀಪಕ ಠಮಕೆ ನಿರೂಪಿಸಿದರು. ಗೀತಾ ಪಾಟೀಲ್ ವಂದಿಸಿದರು.
600ಕ್ಕೂ ಹೆಚ್ಚು ಮಹಿಳೆಯರಿಗೆ ಸನ್ಮಾನ
ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಮಹಿಳಾ ಬರಹಗಾರರು, ಸಂಪನ್ಮೂಲ ವ್ಯಕ್ತಿಗಳು ಸೇರಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸುಮಾರು 600ಕ್ಕೂ ಹೆಚ್ಚು ಮಹಿಳೆಯರನ್ನು ಸನ್ಮಾನಿಸಿ, ಗೌರವಿಸಲಾಯಿತು.