ಮಹಿಳೆಯರ ಬಹಿರದೆಸೆ ಶೌಚಾಲಯ ಮುಕ್ತ ಗೊಳ್ಳದ ಸರ್ಕಾರದ ವಿರುದ್ಧ ಪೂಜಾ ರಮೇಶ್ ಆಕ್ರೋಶ.

ರಾಯಚೂರು ಮಾ. ೧೦
ಉತ್ತರ ಕರ್ನಾಟಕದಲ್ಲಿ ಅದು ಕಲ್ಯಾಣ ಕರ್ನಾಟಕದಲ್ಲಿ ಇಂದಿಗೂ ಪ್ರತಿ ಗ್ರಾಮಗಳಲ್ಲಿ ಬೆಳಗ್ಗೆ ಮತ್ತು ಸಂಜೆ ಮಹಿಳೆಯರು ಬಹಿರ್ದೆಸೆಗಾಗಿ ಬಯಲಿಗೆ ಹೋಗುತ್ತಿರುವುದು ನಿಜಕ್ಕೂ ದುರಾದೃಷ್ಟಕರ ಸಂಗತಿ. ಇಂದು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಸಾಧಕರಿಗೆ ಸನ್ಮಾನಿಸುವುದು ಮಾತ್ರ ಹಾಗೂ ಮಹಿಳೆಯರಿಗೆ ಒಂದು ದಿನ ಗೌರವಿಸುವ ದಿನಾಚರಣೆ ಆಗಿದೆ.. ಇಲ್ಲಿ ಪ್ರತಿ ಹಳ್ಳಿಯಲ್ಲಿ ಮಹಿಳೆಯರ ಪಡುವ ಕಷ್ಟಗಳು ತುಂಬಾ ಇದೆ ಈ ನಿಟ್ಟಿನಲ್ಲಿ ಸರ್ಕಾರ ಕಂಭೀರವಾಗಿ ಮಹಿಳೆಯರ ಬಗ್ಗೆ ನಿರ್ಲಕ್ಷೇತನ ತೋರುತಿದೆ ಎನ್ನುವುದಕ್ಕೆ ಇದೊಂದೇ ಸಾಕ್ಷಿಯಾಗಿದೆ ಎಂದು ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಚಿತ್ರನಟಿ ಸಮಾಜ ಸೇವಕಿ ಡಾ. ಪೂಜಾ ರಮೇಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ..
ಅವರು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ರಾಯಚೂರು ತಾಲೂಕಿನ ಮಾಸದೊಡ್ಡಿ ಗ್ರಾಮದಲ್ಲಿ ಮಹಿಳೆಯರು ಬಹಿರ್ದೆಸಿಗೆ ಹೋಗುವ ಸಂದರ್ಭದಲ್ಲಿ ಅವರಿಗೆ ಮನವೊಲಿಸಿ ಅವರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಎಲ್ಲರಿಗೂ ಗುಲಾಬಿ ಹೂಗಳನ್ನು ಕೊಟ್ಟು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಬಗ್ಗೆ ಹೇಳುತ್ತಾ ಕಲ್ಯಾಣ ಕರ್ನಾಟಕದ ಏನ್ ರಾಯಚೂರು ಗುಲ್ಬರ್ಗ ಯಾದಗಿರಿ ಕೊಪ್ಪಳ ಬಳ್ಳಾರಿ ಜಿಲ್ಲೆಗಳಲ್ಲಿ ಇಂದಿಗೂ ಪ್ರತಿ ಹಳ್ಳಿಗಳಲ್ಲಿ ಮಹಿಳೆಯರು ಬಹಿರ್ದೆಸೆಗೆ ಹೋಗುತ್ತಿದ್ದಾರೆ.. ಗರ್ಭಿಣಿ ಮತ್ತು ತುಂಬ ಗರ್ಭಿಣಿ ಸ್ತ್ರೀಯರಿಗಂತು ತುಂಬಾ ಕಷ್ಟವಾಗಿದ್ದು ಇಲ್ಲಿ ಮಹಿಳೆಯರು ಊಟ ಮಾಡಿದರೆ ಸೌಚಬರುತ್ತದೆ ಎಂದು ಬೆಳಿಗ್ಗೆ ರಾತ್ರಿ ೨ ಟೈಮ್, ಎರಡು ಸಲ ಮಾತ್ರ ಊಟ ಮಾಡುತ್ತಾರೆ ಈ ಭಾಗದ ಜನ ಇದರಿಂದ ಮಹಿಳೆಯರಲ್ಲಿ ಗರ್ಭಿಣಿ ಸ್ತ್ರೀಯರಲ್ಲಿ ಅಪೌಷ್ಟಿಕತೆ ತಾಂಡವಾಡುತ್ತಿದೆ…
ಇಂದು ಮಹಿಳಾ ದಿನಾಚರಣೆ ಮಾಡುತ್ತಿರುವುದು ನಿಜಕ್ಕೂ ಮಹಿಳೆಯರಿಗೆ ಹಕ್ಕುಗಳ ಚಳುವಳಿಯ ದಿನ ಆಗಿರೋದರಿಂದ ಇಲ್ಲಿ ಈ ಭಾಗದಲ್ಲಿ ಹಳ್ಳಿಗಳಲ್ಲಿ ಹೈಟೆಕ್ ಸೌಚಾಲಯಗಳಾಗಬೇಕು, ಕಳೆಪೆ ಗುಣಮಟ್ಟದ ವೈಯಕ್ತಿಕ ಶೌಚಾಲಯಗಳ ಆಗಬಾರದು.. ಸರ್ಕಾರ ಕೋಟಿಗಟ್ಟಲೆ ಹಣ ಅನುದಾನವನ್ನು ವೈಯಕ್ತಿಕ ಶೌಚಾಲಯಕ್ಕೆ ಸ್ವಚ್ಛ ಭಾರತಕ್ಕೆ ನೈರ್ಮಲ್ಯ ಯೋಜನೆಗೆ ಖರ್ಚು ಮಾಡುತ್ತಿದ್ದು ವ್ಯರ್ಥವಾಗುತ್ತಿದೆ… ಜಿಲ್ಲಾಧಿಕಾರಿಗಳು ಶಾಸಕರುಗಳು ಮಹಿಳೆಯರ ಬಗ್ಗೆ ಗಂಭೀರವಾಗಿ ಯೋಚನೆ ಮಾಡುತ್ತಿಲ್ಲ.. ಸರ್ಕಾರ ಮಹಿಳೆಯರಲ್ಲಿ ಜಾಗೃತಿ ಮೂಡಿಸುವಂತಹ ಕೆಲಸ ಮಾಡಬೇಕಿದೆ.. ನಾನು ಇಂದು ವಿಶ್ವ ಮಹಿಳಾ ದಿನಾಚರಣೆ ದಿನದಂದು ಮಹಿಳೆಯರಿಗೆ ಶೌಚಾಲಯದ ಬಗ್ಗೆ ಇಡೀ ಉತ್ತರ ಕರ್ನಾಟಕದಲ್ಲಿ ಮುಂದಿನ ದಿನಗಳಲ್ಲಿ ಹೋರಾಟ ಮಾಡಿ ಇದೊಂದು ದೊಡ್ಡ ಅಭಿಯಾನವನ್ನೇ ಮಾಡುತ್ತೇನೆ ಎಂದು ಸರ್ಕಾರಕ್ಕೆ ಹೇಳಿದ್ದಾರೆ..
ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದಂತೆ ದೇವಸ್ಥಾನಗಳನ್ನು ಕಟ್ಟಬೇಡಿ ಶೌಚಾಲಯಗಳನ್ನು ಕಟ್ಟಿ ಅಂತ ಆದರೆ ಸರ್ಕಾರ ಮಾತ್ರ ಈ ನಿಟ್ಟಿನಲ್ಲಿ ದಾಖಲಾತಿಗಳಲ್ಲಿ ಮಾತ್ರ ಶೌಚಾಲಯ ಮುಕ್ತ ಗ್ರಾಮ ಎಂದು ನಮೂದಿಸಿದ್ದಾರೆ ಪ್ರಚಲಿತ ಇಂತಹ ಒಂದು ದೊಡ್ಡ ಸಮಸ್ಯೆ ಪ್ರತಿ ಹಳ್ಳಿಗಳಲ್ಲಿ ಇರುವುದು ನಿಜಕ್ಕೂ ಮಹಿಳೆಯರಿಗೆ.
ಅನ್ಯಾಯವಾಗುತ್ತಿದೆ.
ಚುನಾವಣೆ ಬಂದಾಗ ಮಹಿಳೆಯರನ್ನು ಮತ ಬ್ಯಾಂಕ್ ಆಗಿ ತೆಗೆದುಕೊಳ್ಳುವ ಪ್ರತಿನಿಧಿಗಳು ನಂತರ ಅವರ ಬಗ್ಗೆ ಅವರ ಸಮಸ್ಯೆಗಳ ಬಗ್ಗೆ ಯಾರು ಗಮನಹರಿಸುತ್ತಿಲ್ಲ ಎಂದು ನೇರವಾಗಿ ಚಿತ್ರನಟಿ ಡಾ. ಪೂಜಾ ರಮೇಶ್ ಆರೋಪಿಸಿದ್ದಾರೆ..