ವಿಜಯಪುರ:ಮೇ.29:ಮಹಿಳೆಯರ ಪ್ರತಿಭೆ ಅನಾವರಣಗೊಳ್ಳಲು ಪುರುಷರ ಸಹಕಾರ ಅತ್ಯಗತ್ಯ ಎಂದು ಪ್ರಾಧ್ಯಾಪಕಿ ರೋಹಿಣಿ ಜತ್ತಿ ಅಭಿಪ್ರಾಯ ವ್ಯಕ್ತಪಡಿಸಿದರು
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ವಿಜಯಪುರ ಹಾಗು ವಿರಕ್ತಮಠ ಇಂಗಳೇಶ್ವರ ಸಂಯುಕ್ತ ಆಶ್ರಯದಲ್ಲಿ ಒಂದನೆಯ ಗೋಷ್ಠಿ ಮಹಿಳೆಯರ ಸಬಲೀಕರಣ ಉದ್ಘಾಟಿಸಿ ಮಾತನಾಡಿದ ಪೆÇ್ರ, ರೋಹಿಣಿ ಜತ್ತಿ ಮಹಿಳೆ ಕುಟುಂಬದ ಜವಾಬ್ದಾರಿಯುತ ಸ್ಥಾನದಲ್ಲಿದ್ದು ಮಕ್ಕಳ ಭವಿಷ್ಯ ರೂಪಿಸಿ ಪರಿಪೂರ್ಣ ವ್ಯಕ್ತಿತ್ವ ಬೆಳೆಸಿದವಳು ಮಹಿಳೆಯರ ಪಾತ್ರ ಅಪರೂಪ ಎಂದರು.
ಮಹಿಳೆಯರ ಶಿಕ್ಷಣದ ಸ್ಥಿತಿಗತಿ ಕುರಿತು ಸಾಹಿತಿ ಗಿರಿಜಾ ಪಾಟೀಲ ಮಾತನಾಡಿ ಮಹಿಳೆಯರು ಇಂದು ಶಿಕ್ಷಣದಲ್ಲಿ ಉತ್ತಮ ಸ್ಥಾನ ಪಡೆದಿರುವಳು. ವೈದ್ಯಕೀಯ, ಸೈನಿಕ, ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿದ್ದಾಳೆ. ನಮಗೆ ಮೊದಲ ಶಿಕ್ಷಕಿ ಸಾವಿತ್ರಿಬಾಯಿ ಪುಣೆ ನಮಗೆ ಪ್ರೇರಣೆ. ಮಹಿಳೆಯರ ಸಬಲೀಕರಣಕ್ಕೆ ಶಿಕ್ಷಣವೇ ಬುನಾದಿ.
ಪಾಲಕರಿಗೆ ಶಿಕ್ಷಣದ ಅರಿವು ಮೂಢಿಸಬೇಕು. ಶಿಕ್ಷಣವೇ ಸಂಪತ್ತು ಎಂಬುದನ್ನು ಅರ್ಥ ಮಾಡಿಕೊಡಬೇಕು. ಬಡತನ ಶಿಕ್ಷಣಕ್ಕೆ ಅಡ್ಡಿಯಾಗಿದೆ. ಸರಕಾರಿ ಬಾಲಕಿಯರ ಶಾಲೆಯ ಗುಣಮಟ್ಟದ್ದಾಗಿರಬೇಕು. ಮಹಿಳೆಯರ ದಿಟ್ಟತನದಿಂದ ಬದುಕಬೇಕು ಎಂದರು.
ಮಹಿಳೆಯ ಆರೋಗ್ಯ ಕುರಿತು ಸಾಹಿತಿ ಶಿವಲೀಲಾ ಮುರಾಳ ಹುಣಶ್ಯಾಳ ಉಪನ್ಯಾಸ ನೀಡಿ ಮಹಿಳೆಯರು ಆತ್ಮವಿಶ್ವಾಸದಿಂದ ಶಾರೀರಿಕವಾಗಿ ಆರೋಗ್ಯ ಕಡೆಗೆ ಗಮನ ಹರಿಸುತ್ತಿಲ್ಲ. ಗರ್ಭಾವಸ್ಥೆಯ ಲ್ಲಿ ಪೌಷ್ಠಿಕ ಆಹಾರ ಪದಾರ್ಥ ನೀಡಬೇಕು. ಸದೃಢ ಮಗುವನ್ನು ಬಯಸುತ್ತೇವೆ ಆದರೆ ಮಹಿಳೆಯರ ಆರೋಗ್ಯ ನಿರ್ಲಕ್ಷತನ ತೊರಬಾರದು. ಮಹಿಳೆ ನಮ್ಮ ಮನೆಯ ವಂಶ ಬೆಳೆಸುವ ಮಹಿಳೆಯರ ಸ್ಥಾನ ಇನ್ನೊಬ್ಬರು ತುಂಬಲು ಸಾಧ್ಯವಿಲ್ಲ ಎಂದರು.
ಮುಖ್ಯ ಅತಿಥಿಗಳಾಗಿ ಚಿಂತಕಿ ಚೈತನ್ಯ ಮುದ್ದೇಬಿಹಾಳ ಮಾತನಾಡಿ ಮಹಿಳೆಯರು ನಿರಂತರ ಶೋಷಣೆಗೆ ಒಳಗಾಗಿ ನೋವನ್ನುಂಡಿದ್ದಾರೆ. ಹನ್ನೇರಡನೆಯ ಶತಮಾನದಲ್ಲಿ ಮಹಿಳೆಗೆ ಹಕ್ಕುಗಳನ್ನು ನೀಡಿದವರು ಬಸವಣ್ಣನವರು .ಮಹಿಳೆ ತಾನು ಅಬಲೆಯನ್ನದೆ ನಾನು ಸಮಥ9ಳು ಎಂದು ಭಾವಿಸಿಬೇಕು ಎಂದರು.
ಈ ಗೋಷ್ಠಿಯ ಅಧ್ಯಕ್ಷತೆ ವಹಿಸಿದ ಮುಖ್ಯ ಅಧ್ಯಾಪಕರಾದ ಕಮಲಾ ಮುರಾಳ ಮಾತನಾಡಿದರು ಕಸಾಪ ಅಧ್ಯಕ್ಷ ಹಾಸಿಂಪೀರ ವಾಲಿಕಾರ ಉಪಸ್ಥಿತರಿದ್ದರು .ಹೂವಿನ ಹಿಪ್ಪರಗಿ ಮಾತಾ ದ್ರಾಷಾಯಿನಿ ಅಮ್ಮನವರು. ಬಳಗಾನೂರ ಮಂಜುಳಾ ದೇವಿ .ದೇವರಹಿಪ್ಪರಗಿ ಮಡಿವಾಳೆಶ್ವರ ಮಾತನಾಡಿದರು
ಸಾನಿಧ್ಯ ವಹಿಸಿದ್ದ ಚನ್ನಬಸವ ಸ್ವಾಮೀಜಿ ಡಾ, ಸಿದ್ದಲಿಂಗ ಸ್ವಾಮೀಜಿ ಮಸಬಿನಾಳದ ಸಿದ್ದರಾಮ ಸ್ವಾಮೀಜಿ ಬಾಗೇವಾಡಿ ಸಿದ್ದಲಿಂಗ ಸ್ವಾಮೀಜಿ .ಶಿವಪ್ರಕಾಶ ಶಿವಾಚಾರ್ಯರು ಪಡೇಕನೂರ ಮಲ್ಲಿಕಾರ್ಜುನ ಸ್ವಾಮೀಜಿ ಚಡಚಣ ಷಡಕ್ಷರಿ ಸ್ವಾಮಿಜಿ ವಡವಡಗಿ ವೀರಸಿದ್ದ ಸ್ವಾಮಿಜಿ ಶಿವಲೀಲಾ ಕೋರಿ ವಿಜಯಲಕ್ಷ್ಮೀ ಕೌಲಗಿ ಸುಖದೇವಿ ಅಲಬಾಳಮಠ ಗಿರಿಜಾ ಸಜ್ಜನ ಶಾಂತಾ ಚೌರ ಸಿದ್ದು ಡಿಗ್ಗಾವಿ ಸಂಗನಗೌಡ ಬಿರಾದಾರ ಉಪಸ್ಥಿತರಿದ್ದರು