ಮಹಿಳೆಯರ ಪ್ರತಿಭೆಗೆ ಅವಕಾಶ ಕಲ್ಪಿಸಿರುವುದು ಶ್ಲಾಘನೀಯ: ಅಮರಶೆಟ್ಟಿ


ಧಾರವಾಡ ಮಾ.28: ಮಹಿಳೆಯರಲ್ಲಿರುವ ಕಲೆಯನ್ನು ಗುರುತಿಸುವುದರೊಂದಿಗೆ ಅವರ ಪ್ರತಿಭೆಗೆ ವೇದಿಕೆಯನ್ನು ನೀಡುವ ಕಾರ್ಯ ರಂಗಾಯಣ ಮಾಡುತ್ತಿರುವುದು ಶ್ಲಾಘನೀಯವಾದುದು ಎಂದು ಕರ್ನಾಟಕ ರೇμÉ್ಮ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಸವಿತಾ ಅಮರಶೆಟ್ಟಿ ಹೇಳಿದರು.
ರಂಗಾಯಣವು ಪಂ. ಬಸವರಾಜ ರಾಜಗುರು ಬಯಲು ರಂಗಮಂದಿರದಲ್ಲಿ ಹಮ್ಮಿಕೊಂಡಿರುವ ಗಾಂಧೀಜಿ-150 ಕಸ್ತೂರಬಾ ಮಹಿಳಾ ನಾಟಕೋತ್ಸವದ ಮೂರನೇ ದಿನದ ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಿ, ಮಾತನಾಡಿದರು.
ಎಲ್ಲರಲ್ಲಿಯೂ ಒಂದು ಅಧ್ಬುತವಾದ ಕಲೆ ಅಡಗಿರುತ್ತದೆ. ಅದನ್ನು ಗುರುತಿಸಿ, ಪೆÇ್ರೀತ್ಸಾಹಿಸುವುದು ಉತ್ತಮ ಕಾರ್ಯವಾಗಿದೆ. ರಂಗಭೂಮಿಯ ಮೂಲಕ ದೊಡ್ಡಾಟ, ಸಣ್ಣಾಟ ಹಾಗೂ ಬೊಂಬೆಯಾಟಗಳ ಮೂಲಕ ಸಮಾಜಕ್ಕೆ ಸಂದೇಶ ನೀಡುತ್ತಿವೆ. 12ನೇ ಶತಮಾನದಲ್ಲಿಯೇ ಬಸವಣ್ಣನವರು ತಮ್ಮ ಅನುಭವ ಮಂಟಪದಲ್ಲಿ ಸಮಾನ ಅವಕಾಶವನ್ನು ನೀಡಿದ್ದರು ಎಂದು ತಿಳಿಸಿದರು.
ಕೆ.ಎಲ್.ಇ ವೇಣುಧ್ವನಿ ಬಾನುಲಿ ಕೇಂದ್ರದ ಕಾರ್ಯಕ್ರಮ ನಿರ್ವಾಹಕರಾದ ಸುನೀತಾ ದೇಸಾಯಿ ಮಾತನಾಡಿ, ಮೊದಲಿಗೆ ಜನಪದ ಕಲಾವಿದರು ಹಾಗೂ ಹಳ್ಳಿಗಳಲ್ಲಿ ನಾಟಕಗಳನ್ನು ಮಾಡುತ್ತಿದ್ದರು. ಆದರೆ ಇಂದಿನ ದಿನಮಾನದಲ್ಲಿ ವಿದ್ಯಾವಂತರು ಹವ್ಯಾಸಿ ಕಲಾವಿದರಾಗಿ ತಮ್ಮನ್ನು ನಾಟಕಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಸಮಾಜಕ್ಕೆ ಉತ್ತಮ ಸಂದೇಶಗಳನ್ನು ನೀಡುತ್ತಿದ್ದಾರೆ. ಹೀಗಾಗಿ ಇಂದು ನಾಟಕಗಳ ಬೆಳವಣಿಗೆಯಾಗುತ್ತಿರುವುದು ಸಂತಸವಾಗಿದೆ.
ಈ ಸಂದರ್ಭದಲ್ಲಿ ರಂಗಭೂಮಿ ಕಲಾವಿದರಾರ ಸುನಂದಾ ನಿಂಬನಗೌಡರ ಹಾಗೂ ಸರ್ವೋದಯ ಸಾಧಕಿ ಅನಸೂಯಾ ಉತ್ತೂರ ಅವರನ್ನು ಸನ್ಮಾನಿಸಲಾಯಿತು.
ರಂಗಾಯಣ ನಿರ್ದೇಶಕ ರಮೇಶ ಪರವಿನಾಯ್ಕರ್ ಅಧ್ಯಕ್ಷತೆ ವಹಿಸಿದ್ದರು. ರಂಗ ರೆಪರ್ಟರಿ ಕಲಾವಿದರು ರಂಗ ಸಂಗೀತವನ್ನು ಪ್ರಸ್ತುತ ಪಡಿಸಿದರು. ಮಕ್ಕಳ ಸಾಹಿತಿ ಕೆ.ಎಚ್ ನಾಯಕ ವಿಶ್ವರಂಗಭೂಮಿ ದಿನದ ಸಂದೇಶವನ್ನು ವಾಚಿಸಿದರು.
ಅಕ್ಕ ಅನ್ನಪೂರ್ಣ ತಾಯಿ ರಚಿಸಿ, ವಿಶ್ವರಾಜ್ ಪಾಟೀಲ್ ನಿರ್ದೇಶಿಸಿರುವ ವಚನಕಾರ್ತಿಯರ ಶರಣ ಸಿಂಚನ ನಾಟಕವನ್ನು ರೇμÉ್ಮ ಸಾಂಸ್ಕøತಿಕ ಕಲಾ ಟ್ರಸ್ಟ್ ಕಲಬುರಗಿ ಕಲಾವಿದರು ಪ್ರದರ್ಶಿಸಿದರು.