ಮಹಿಳೆಯರ ಗರ್ಭಾಕೋಶದ ಕೊರಳಿನ ಕ್ಯಾನ್ಸರಿನ ಬಗ್ಗೆ ತಿಳುವಳಿಕೆ


ಸಂಜೆವಾಣಿ ವಾರ್ತೆ
ಬಳ್ಳಾರಿ, ಮೇ,19- ಮಹಿಳೆಯರ ಗರ್ಭಾಕೋಶದ ಕೊರಳಿನ ಕ್ಯಾನ್ಸರಿನ ಬಗ್ಗೆ ತಿಳುವಳಿಕೆ ನೀಡಿ, ತಡೆಗಟ್ಟಲು  ತಪಾಸಣೆ ಮಾಡಿಸಿಕೊಳ್ಳಲು ಎಫ್ ಪಿಎಐ  ಶಾಖೆಯ ವ್ಯವಸ್ಥಾಪಕರಾದ ಶ್ರೀಮತಿ ವಿಜಯಲಕ್ಷ್ಮಿ ಕರೆ ನೀಡಿದರು.
ಎಫ್ ಪಿಎಐನ  ಹಣಕಾಸು ಸಲಹೆಗಾರರಾದ  ಶ್ರೀ ಮತಿ ಭಾಗ್ಯ  ಇವರು ಸಂಘಟಿಸಿದ್ದ   ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮಹಿಶೆಯರು ತಮ್ಮ ಆರೋಗ್ಯದ ಬಗ್ಗೆ ಗಮನ ಹರಿಸ ಬೇಕೆಂದರು. ತದನಂತರ ಮಕ್ಕಳಿಗೆ ಮತ್ತು ಮಹಿಳೆಯರಿಗೆ ಹೆಚ್ ಪಿವಿ  ವ್ಯಾಕ್ಸಿನ್ ಅನಿವಾರ್ಯತೆ ಮತ್ತು ಅವಶ್ಯಕತೆಯನ್ನು ತಿಳಿಸಲಾಯಿತು. ಕಾರ್ಯಕ್ರಮದ ನಂತರ  ನೆರೆದಂತ ಮಹಿಳೆಯರಿಗೆ ಗರ್ಭಕೋಶದ ಕೋ ಕ್ಯಾನ್ಸರಿನ ತಪಾಸಣೆಯನ್ನು ಸ್ಮಾರ್ಟ್ ಸ್ಕೋಪ್ ಮೂಲಕ ಮಾಡಲಾಯಿತು
ಕಾರ್ಯಕ್ರಮದಲ್ಲಿ 40 ಜನ ಆರ್ ವೈಎಂಇಸಿ  ಕಾಲೇಜಿನ ಮಹಿಳೆಯರು ಭಾಗವಹಿಸಿದ್ದರು.