ಮಹಿಳೆಯರ ಕಲ್ಯಾಣಕ್ಕಾಗಿ ಶ್ರಮಿಸಿದ ಅಕ್ಕನ ಬದುಕು ನಮಗೆ ಪ್ರೇರಣೆಯಾಗಲಿ


ಸಂಜೆವಾಣಿ ವಾರ್ತೆ
ಕುಕನೂರ ಆ 19: 12 ನೇ ಶತಮಾನದಲ್ಲಿ ಭಾರತದ ದಕ್ಷಿಣದಲ್ಲಿ ಮಹಿಳೆಯರ ಕಲ್ಯಾಣಕ್ಕಾಗಿ ಶ್ರಮಿಸಿದ ಅಕ್ಕಮಹಾದೇವಿ ಶಿಕಾರಿಪುರ ತಾಲೂಕು ಶಿವಮೊಗ್ಗ ಜಿಲ್ಲೆಯ ಉಡುತಡಿಯಲ್ಲಿ ಜನಿಸಿದರು ಎಂದು ಪಪಂ ಮಾಜಿ ಸದಸ್ಯ ಹನುಮಂತಪ್ಪ ಹಂಪನಾಳ ಹೇಳಿದರು. 
 ಅವರು ಪಟ್ಟಣದ ಅನ್ನದಾನೀಶ್ವರ ಮಠದಲ್ಲಿ ನಡೆದ 177 ನೇ ಮಾಸಿಕ ಶಿವಾನುಭವ ಮತ್ತು ಅಕ್ಕನ ಬಳಗದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡುತ್ತಾ ಅಕ್ಕ ಕನ್ನಡ ಸಾಹಿತ್ಯ ಮತ್ತು ಕರ್ನಾಟಕದ ಇತಿಹಾಸಕ್ಕೆ ಸ್ಪೂರ್ತಿದಾಯಕ ಮಹಿಳೆಯಾಗಿ ಕಾಣಿಸಿಕೊಂಡಿದ್ದಾಳೆ. ಅಕ್ಕನ ವಚನಗಳು ಸುಂದರವಾದ ಭಗವಂತನ ವಿವರಣೆಯನ್ನು ತಿಳಿಸುತ್ತವೆ ಎಂದರು.
ನಂತರ ಅಧ್ಯಕ್ಷತೆ ವಹಿಸಿ ಮಾತಾನಾಡಿದ ಶ್ರೀಮತಿ ಲಲಿತಮ್ಮ ಕಲ್ಮಠ ಅಕ್ಕನ ಬಳಗ ಸಂಘಟನೆ ನಮ್ಮೂರಿನಲ್ಲಿ ಸುಮಾರು 25 ವರ್ಷಗಳಿಂದ ನಿರಂತರ ಕಾರ್ಯ ಮಾಡುತ್ತಾ ಬಂದಿದೆ, ಮಹಿಳೆಯರು ಸಂಘಟಿತರಾದಗ ಮಾತ್ರ ಸಮಾಜ ಅಭಿವೃದ್ದಿ ಹೊಂದಲು ಸಾದ್ಯ ಎಂಬುದನ್ನ ನಾವುಗಳು ಅರಿಯಬೇಕು, ಬದಲಾವಣೆ ನಮ್ಮಿಂದಲೇ ಅದು ಪ್ರತಿ ಮನೆಯಿಂದ ಪ್ರಾರಂಭವಾಗಬೇಕು, ಅಕ್ಕನ ಬಳಗದವರು ಅಕ್ಕನ ವಿಚಾರದಾರೆಯನ್ನ ಮೈಗೂಡಿಸಿಕೊಳ್ಳಬೇಕು ಮತ್ತು ಅಕ್ಕಮಹಾದೇವಿ ಶರಣ ಚಳುವಳಿಯ ಪ್ರಮುಖಳಾಗಿ ಸ್ವಾಭಿಮಾನದ ಪ್ರತೀಕವಾಗಿ, ಸ್ತ್ರೀವಾದಿ ಚಳವಳಿಯ ನಿಜವಾದ ಪ್ರತಿಪಾದಕಿಯಾಗಿ, ಅಕ್ಕರೆಯ ಅಕ್ಕನಾಗಿ, ಹೀಗೆ ಹಲವು ರೀತಿ ಗುರುತಿಸಬಹುದಾಗಿದೆ ಎಂದರು.
ಡಾ ಜಂಬಣ್ಣ ಅಂಗಡಿ ಮಾತನಾಡಿ ಮರದ ಮೇಲೆ ಕುಳಿತ ಹಕ್ಕಿಗೆ ಕೊಂಬೆ ಮುರಿದು ಬೀಳುವ ಭಯವಿರದು, ಏಕೆಂದರೆ ಅದು ನಂಬಿರುವುದು ತನ್ನ ರೆಕ್ಕೆಗಳನ್ನೆ ಹೊರತು ಕೊಂಬೆಯನ್ನಲ್ಲ, ಹಾಗೇಯೇ ನಮ್ಮ ಸಾಮಾಥ್ರ್ಯದ ಮೇಲೆ ನಮಗೆ ಸದಾ ಆತ್ಮವಿಶ್ವಾಸ ಇರಬೇಕು, ಹಾಗೆ ಒಂದು ಸಂಘಟನೆ ಮಾಡುವಾಗ ಟೀಕೆ ಟಿಪ್ಪಣೆಗಳು ಸಹಜ ಅವುಗಳನ್ನ ಸಮಾನ ದೃಷ್ಟಿಯಿಂದ ನೋಡಬೇಕು ಅಂದಾಗ ಮಾತ್ರ ನಾವುಗಳು ಗೆಲ್ಲಲು ಸಾಧ್ಯ ಮತ್ತು ನಮ್ಮೂರಿನ ಶ್ರೀಮಠ ಸಾಕಾಷ್ಟು ಅಭಿವೃದ್ದಿಗೊಂಡಿದೆ, ಪೂಜ್ಯರ ಆಶ್ರಯದಲ್ಲಿ ಸಾಕಾಷ್ಟು ಸಂಘಟನೆಗಳು ಉತ್ತಮ ಕಾರ್ಯ ಮಾಡುತ್ತಾ ಬರುತ್ತಿವೆ ಎಂದರು.
ಈ ಸಂಧರ್ಭದಲ್ಲಿ ಮುರಾರಿ ಭಜಂತ್ರಿ ಅವರ ತಂಡದಿಂದ ಸಂಗೀತ ಕಾರ್ಯಕ್ರಮ ನಡೆಯಿತು ಮತ್ತು ಬೆಳಿಗ್ಗೆ ಕತೃ ಗದ್ದುಗೆಗೆ ರುದ್ರಾಬಿಷೇಕ ನಡೆಯಿತು, ಸಂಜೆ ಮಹಾದಾಸೋಹ ಸೇವೆಯನ್ನ ಶ್ರೀಮತಿ ಗಿರಿಜಾ ವಿಜಯ ನರೆಗಲ್ಲಮಠ ಮಾಡಿದರು.
 ಶ್ರೀ ಮ ನಿ ಪ್ರ ಮಹಾದೇವ ಸ್ವಾಮೀಜೀ, ಪ್ರಭು ಶಿವಶಿಂಪರ, ಪಪಂ ಸದಸ್ಯ ಬಾಲರಾಜ ಗಾಳಿ, ಶೋಬಾ ಗಜಕೋಶ, ರತ್ನಮ್ಮ ಗದಗ, ಅನ್ನಪೂರ್ಣ ಗುರಿಕಾರ, ಡಾ ಜ್ಯೋತಿ ಹಿರೇಮಠ, ನಿರ್ಮಲ ಕಳ್ಳಿಮಠ, ಸರೋಜ ಹತ್ತಿಕಟಿಗಿ, ಶಾಂತಮ್ಮ ಹೊಸಮಠ, ಅನ್ನಪೂರ್ಣ ಚಟ್ನಿ, ಪಾರ್ವತಿ ರೆಡ್ಡಿ, ಶಾಂತ ಹಿರೇಮಠ, ಮೇಘರಾಜ ಜಿಡಗಿ, ಲಲಿತಾ ಸಿಳ್ಳಿನ, ಲತಾ ಗುತ್ತಿ ಮತ್ತು ಅಕ್ಕನ ಬಳಗದ ಸರ್ವ ಸದಸ್ಯರು ಇದ್ದರು.