ಮಹಿಳೆಯರ ಒತ್ತಡ ತಪ್ಪಿಸಲುತಾಲೂಕು ಕೇಂದ್ರಗಳಿಗೆ ತಡೆರಹಿತ ಬಸ್ ಸಂಚಾರ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಜೂ.19: ಶಕ್ತಿ ಯೋಜನೆಯಿಂದ ರಾಜ್ಯದ ಮಹಿಳೆಯರು ಉಚಿತವಾಗಿ ಬಸ್ ಸಂಚಾರ ಮಾಡಲು ಆರಂಭಿಸಿದಾಗಿನಿಂದ ಬಸ್ ಗಳಲ್ಲಿ ಮಹಿಳೆಯರ ಸಂಖ್ಯೆಯ ಒತ್ತಡ ಹೆಚ್ಚಿದೆ. ಇದನ್ನು ತಪ್ಪಿಸಲು ಸಂಸ್ಥೆ ತಾಲೂಕು ಕೇಂದ್ರಗಳಿಗೆ ನಿನ್ನೆಯಿಂದ ತಡೆ ರಹಿತ ಬಸ್ ವ್ಯವಸ್ಥೆಗೆ ಮುಂದಾಗಿದೆ.
ಶಕ್ತಿ ಯೋಜನೆಯಿಂದ ದಿನೇ ದಿನೆ ಮಹಿಳೆಯರ ಪ್ರಯಾಣದ  ಪ್ರಮಾಣ ಹೆಚ್ಚುತ್ತಿದೆ. ಇದರಿಂದ   ವಿದ್ಯಾರ್ಥಿಗಳು  ಸೇರಿ   ಇತರೆ   ಪ್ರಯಾಣಿಕರು ಎದುರಿಸುತ್ತಿರುವ  ಆಸನಗಳ ಸಮಸ್ಯೆ   ನಿವಾರಣೆಗಾಗಿ   ಕೆಕೆ ಆರ್‍ಟಿಸಿ ಬಳ್ಳಾರಿ   ವಿಭಾಗದ   ಅಧಿಕಾರಿಗಳು   ತಾಲೂಕು-ತಾಲೂಕುಗಳ   ನಡುವೆ   ತಡೆರಹಿತ ಬಸ್‍ಗಳನ್ನು ಓಡಿಸಲು ಮುಂದಾಗಿದ್ದಾರೆ.
ಉಚಿತ ಪ್ರಯಾಣವಾದ್ದರಿಂದ   ಒಂದೇ ಗ್ರಾಮದ ಅಥವಾ   ಒಂದೇ ಕುಟುಂಬದ   ಮಹಿಳೆಯರೆಲ್ಲರೂ  ಸೇರಿ   ದೇವರದರ್ಶನಕ್ಕೆಂದು  ರಾಜ್ಯದ ಧಾರ್ಮಿಕ, ಪ್ರವಾಸಿ ತಾಣಗಳಿಗೆ  ಗುಂಪು, ಗುಂಪಾಗಿ ಹೆಚ್ಚಿನ ಸಂಖ್ಯೆಯಲ್ಲಿ ತೆರಳುತ್ತಿದ್ದಾರೆ. ಇದರಿಂದ ಸಾರಿಗೆಬಸ್‍ಗಳಲ್ಲಿ   ನೂಕು ನುಗ್ಗಲು   ಉಂಟಾಗುತ್ತಿದೆ.
ಪುರುಷ ಪ್ರಯಾಣಿಕರು ಆಸನಗಳು ಸಿಗದೆ ಕಿರಿಕಿರಿ ಎದುರಿಸುವಂತಾಗಿದೆ. ಈ ಸಮಸ್ಯೆ ನಿವಾರಿಸುವ ಒಂದು ಪ್ರಯತ್ನ ತಡೆರಹಿತ ವ್ಯವಸ್ಥೆಯನ್ನು ಕಂಡುಕೊಂಡಿದೆ.
ಈ ಮೊದಲು ಬಳ್ಳಾರಿ ಮತ್ತು ಹೊಸಪೇಟೆ ನಡುವೆ ಮಾತ್ರ ತಡೆರಹಿತ ಬಸ್ ಗಳ ಸೌಲಭ್ಯ ಇದ್ದರೂ ಅಷ್ಟೊಂದು ಮಹತ್ವ ಪಡೆದಿರಲಿಲ್ಲ. ಈ ಶಕ್ತಿ ಯೋಜನೆ ಬಂದ ಮೇಲೆ ಈ ಬಸ್ ಗಳಿಗೆ ಓಡಾಡುವವರ ಸಂಖ್ಯೆ ಹೆಚ್ಚತೊಡಗಿತು. ಇದರಿಂದ ಆದಾಯವೂ ಹೆಚ್ಚತೊಡಗಿತು. ಅದಕ್ಕಾಗಿ ಸಂಸ್ಥೆ ಸಂಡೂರು, ಕೂಡ್ಲಿಗಿ, ಸಿತುಗುಪ್ಪ ನಗರ, ಪಟ್ಟಗಳಿಗೂ ತಡೆ ರಹಿತ ವಾಹನ ಓಡಿಸಲು ನಿನ್ನೆಯಿಂದ ಮುಂದಾಗಿದೆ.
ಸಧ್ಯ ಆರು ಬಸ್ ಗಳನ್ನು ಈ ರೀತಿ ಓಡಿಸಲಾಗುತ್ತಿದೆ.ಈ ಬಸ್‍ಗಳು   ನಿರ್ವಾಹಕರಹಿತವಾಗಿ   ಸಂಚರಿಸಲಿದ್ದು,   ಚಾಲಕ   ಕಂ   ನಿರ್ವಾಹಕರೇನಿರ್ವಹಣೆ ಮಾಡಲಿದ್ದಾರೆ.   ಬಸ್‍ಗಳನ್ನು ಓಡಿಸುವ   ಚಾಲಕಕಂ   ನಿರ್ವಾಹಕರೇ   ನಿಲ್ದಾಣದಲ್ಲೇ   50   ಪ್ರಯಾಣಿಕರಿಗೆ ಟಿಕೇಟ್ ವಿತರಿಸಿ ನೇರವಾಗಿ ನಿಗದಿತ ತಾಲೂಕು ಕೇಂದ್ರಕ್ಕೆತೆರಳಿ, ಪುನಃ ವಾಪಸ್ ಯಥಾರೀತಿ ಅಲ್ಲಿಂದ ಬರಲಿದೆ. ಅದೇ   ರೀತಿ   ಇನ್ನು   ಕೆಲ   ಬಸ್‍ಗಳಲ್ಲಿ   ನಿಲ್ದಾಣದಲ್ಲೇನಿರ್ವಾಹಕರೊಬ್ಬರನ್ನು ನಿಯೋಜಿಸಲಾಗುತ್ತದೆ. ಅವರು,ನಿರ್ವಾಹಕ   ರಹಿತ   ಬಸ್‍ಗಳಿಗೆ   ನಿಲ್ದಾಣದಲ್ಲೇ ಪ್ರಯಾಣಿಕರಿಗೆ   ಟಿಕೇಟ್   (ಗ್ರೌಂಡ್   ಬುಕಿಂಗ್)   ವಿತರಿಸಿಕಳುಹಿಸಲಾಗುತ್ತದೆ.   ತಡೆರಹಿತ ಬಸ್‍ಗಳಾದ್ದರಿಂದಮಾರ್ಗ   ಮಧ್ಯೆ   ಯಾವುದೇ   ಗ್ರಾಮಗಳಲ್ಲಿಪ್ರಯಾಣಿಕರನ್ನು  ಹತ್ತಿಸಿಕೊಳ್ಳಲು ನಿಲ್ಲುವುದಿಲ್ಲ.ನೇರವಾಗಿ   ತಾಲೂಕು   ಕೇಂದ್ರಗಳಿಗೆ   ತಲುಪಲಿದೆ.
ಇದರಿಂದ   ಪ್ರಯಾಣಿಕರಿಗೆ   ಸಮಯಉಳಿತಾಯವಾಗುವುದರ   ಜತೆಗೆ   ತುರ್ತಾಗಿ   ತೆರಳುವಪ್ರಯಾಣಿಕರಿಗೂ ಅನುಕೂಲವಾಗಲಿದೆ.  ಆಸನಗಳು ದೊರೆಯಲಿವೆ.
ಈ ವ್ಯವಸ್ಥೆಯ ಸಾಧಕ ಬಾಧಕಗಳನ್ನು ಗಮನಿಸಿ ಕಂಪ್ಲಿ ಕುರುಗೋಡಿಗೂ ತಡೆರಹಿತ ಬಸ್ ಓಡಿಸುವ ವ್ಯವಸ್ಥೆ ಮಾಡಲು ಚಿಂತನೆ ಇದೆಯಂತೆ.