ಮಹಿಳೆಯರ ಆನ್ ಲೈನ್ ಧರಣಿ

ದಾವಣಗೆರೆ. ಮೇ.೨೮; ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ*  ವತಿಯಿಂದ  ಸಂಯುಕ್ತ ಕಿಸಾನ್ ಮೋರ್ಚಾ ದ ” ಕರಾಳ ದಿನಾಚರಣೆ” ಗೆ ಕರೆ ನೀಡಿರುವ ಹಿನ್ನಲೆಯಲ್ಲಿ ದಾವಣಗೆರೆಯಲ್ಲೂ ಎಐಎಂಎಸ್ ಎಸ್ ಕಾರ್ಯಕರ್ತರು, ಬೆಂಬಲಿಗರು ಕಪ್ಪು ವಸ್ತ್ರ ಧರಿಸಿ, ಕರಾಳ ದಿನಾಚರಣೆ ಬೇಡಿಕೆಯ ಪೋಸ್ಟರ್ ಹಿಡಿದು ಪ್ರತಿಭಟನೆ ನಡೆಸಿದರು.ದೆಹಲಿಯ ಗಡಿಭಾಗದಲ್ಲಿ ರೈತರು ನಡೆಸುತ್ತಿರುವಪ್ರತಿಭಟನೆಗೆ ೬ ತಿಂಗಳು ಪೂರ್ಣಗೊಂಡಿದೆ, ಕೇಂದ್ರಸರ್ಕಾರದ ದಿವ್ಯ ನಿರ್ಲಕ್ಷಕ್ಕೆ ರೈತರು ಗುರಿಯಾಗಿದ್ದಾರೆ, ಅದನ್ನು ಲೆಕ್ಕಿಸದೆ ಎಲ್ಲ ರೈತರು ಒಕ್ಕೊರಲಿನಿಂದ ಕರಾಳ ರೈತ ವಿರೋಧಿ ಕಾನೂನುಗಳನ್ನು ರದ್ದು ಮಾಡಬೇಕು ಎಂದು ಇನ್ನಷ್ಟು ಒಗ್ಗಟ್ಟಗುತ್ತಿದ್ದಾರೆ. ಈ ಹೋರಾಟಕ್ಕೆ ಮೊಲನೆಯ ದಿನದಿಂದಲೇ ಜೊತೆಗಿದ್ದ ಎಐಎಂಎಸ್ಎಸ್ ಸಂಘಟನೆಯ ಅಖಿಲ ಭಾರತ ಅಧ್ಯಕ್ಷರು ಹಾಗೂ ಕಾರ್ಯಕರ್ತರು ದೆಹಲಿಯ ಸಿಂಘು ಗಡಿಯಲ್ಲಿ ಇಂದಿಗೂ ರೈತರೊಂದಿಗೆ ಜೊತೆಗೂಡಿ ಹೋರಾಟ ನಡೆಸುತ್ತಿದ್ದಾರೆ, ಈ ಹಿನ್ನೆಲೆಯಲ್ಲಿ ದಾವಣಗೆರೆಯಲ್ಲಿ ಮೂರು ಕರಾಳ ಕೃಷಿ ಕಾನೂನುಗಳನ್ನು ರದ್ದುಗೊಳಿಸಿ. ಎಂಬ ಬೇಡಿಕೆಯೊಂದಿಗೆ    ಪ್ರತಿಭಟನೆ ನಡೆಸಲಾಯಿತು. ಈ ವೇಳೆಜಿಲ್ಲಾ ಕಾರ್ಯದರ್ಶಿ ಭಾರತಿ.ಕೆ, ಸರಸ್ವತಿ, ಮಮತಾ,ಪಲ್ಲವಿ, ಸ್ಮಿತಾ, ಇನ್ನೂ ಹಲವರು ಭಾಗಿಯಾಗಿದ್ದರು.