ಮಹಿಳೆಯರ ಅಭಿವೃದ್ಧಿಗೆ ಹಲವಾರು ಯೋಜನೆಗಳು

ಮುಳಬಾಗಿಲು ಏ ೫: ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮಹಿಳೆಯರ ಅಭಿವೃದ್ಧಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದು ಇವುಗಳನ್ನು ಸದುಪಯೋಗ ಮಾಡಿಕೊಳ್ಳಬೇಕೆಂದು ದುಗ್ಗಸಂದ್ರ ಕ್ಷೇತ್ರದ ಜಿ.ಪಂ ಸದಸ್ಯ ವಿ.ಎಸ್.ಅರವಿಂದ್‌ಕುಮಾರ್ ಹೇಳಿದರು.
ತಾಲೂಕಿನ ಮುಡಿಯನೂರು ಗ್ರಾ.ಪಂ ನಲ್ಲಿ ಸೋಮವಾರ ಏರ್ಪಡಿಸಿದ್ದ ವಿಶೇಷ ಮಹಿಳಾ ಗ್ರಾಮಸಭೆ ಉದ್ಘಾಟಿಸಿ ಮಾತನಾಡಿ ಮಹಿಳೆಯರು ಸಭೆ ಸಮಾರಂಭಗಳಲ್ಲಿ ಪಾಲ್ಗೊಳ್ಳುವ ಮೂಲಕ ಹೆಚ್ಚಿನ ಮಾಹಿತಿಯನ್ನು ಪಡೆಯಲು ಅನುಕೂಲವಾಗುತ್ತಿದೆ ಎಂದು ತಿಳಿಸಿದರು.
ಗ್ರಾ.ಪಂ ಅಧ್ಯಕ್ಷ ಗುಜ್ಜನಹಳ್ಳಿ ರಮೇಶ್ ಮಾತನಾಡಿ ಮುಡಿಯನೂರು ಗ್ರಾಮಪಂಚಾಯಿತಿಯಲ್ಲಿ ಮಹಿಳೆಯರಿಗೆ ವಿಶೇಷ ಗ್ರಾಮಸಭೆಯನ್ನು ಏರ್ಪಡಿಸಿದ್ದು ಸರ್ಕಾರದ ವಿವಿಧ ಯೋಜನೆಗಳಿಗೆ ಅರ್ಜಿಗಳನ್ನು ಸೌಲಭ್ಯಗಳಣ್ನು ಪಡೆಯಿರಿ ಎಂದು ಹೇಳಿದರು.
ಗ್ರಾ.ಪಂ ಉಪಾಧ್ಯಕ್ಷೆ ರಚ್ಚಬಂಡಹಳ್ಳಿ ಸರಸ್ವತಮ್ಮ, ಶ್ರೀರಾಮ್, ಪಿ.ಡಿ.ಒ. ವೆಂಕಟಾಚಲಪತಿ ಮತ್ತು ಗ್ರಾ.ಪಂ ಸದಸ್ಯರು ಇದ್ದರು.