ಮಹಿಳೆಯರ ಅಭಿವೃದ್ಧಿಗೆ ಬದ್ಧ

ಧಾರವಾಡ ಮಾ.31 : ಗ್ರಾಮೀಣ ಕ್ರೇತ್ರದ ಮಹಿಳೆಯರಿಗೆ ಸ್ವಯಂ ಉದ್ಯೋಗ ಹಾಗೂ ಸಣ್ಣ ಕೈಗಾರಿಕೆಗ ಸ್ಥಾಪನೆಗೆ ಸರಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದು, ಅವುಗಳನ್ನು ಸದುಪಯೋಗ ಪಡಿಸಿಕೊಂಡು ಆರ್ಥಿಕವಾಗಿ ಸಬಲರಾಗಬೇಕು ಎಂದು ಶಾಸಕ ಅಮೃತ ದೇಸಾಯಿ ಹೇಳಿದರು.
2020-21 ನೇ ಸಾಲಿನಲ್ಲಿ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ ಇವರ ಉದ್ಯೋಗಿನಿ ಯೋಜನೆಯಡಿ ತಮ್ಮ ಕ್ಷೇತ್ರದಿಂದ ಆಯ್ಕೆಗೊಂಡ ಫಲಾನುಭವಿಗಳಾದ ಚನ್ನವ್ವ ವಿ ಕಂಬಾರಗಣವಿ ಸಾ. ಮಾದನಭಾವಿ ಮೊತ್ತ:200000, ಮಂಜುಳಾ ಬುಡವಿ ಹೊಸಯಲ್ಲಾಪುರ ಮೊತ್ತ: 300000 ಹೇಮಾವತಿ ನೀಲಕಂಠ ನೇಕಾರ ಸಾ. ಯಾದವಾಡ ಮೊತ್ತ: 300000 ರೂಪಾಯಿಗಳ ಸಹಾಯಧನ ಒಳಗೊಂಡ ಸಾಲದ ಚೆಕನ್ನು ಇಂದು ಶಾಸಕ ಅಮೃತ್ ದೇಸಾಯಿ ಅವರು ವಿತರಿಸಿ ಫಲಾನುಭವಿಗಳಿಗೆ ನಿಮ್ಮ ವ್ಯಾಪಾರಿಗಳಿಗೆ ಶುಭವಾಗಲಿ ಎಂದು ಹರಿಸಿದರು.