ಮಹಿಳೆಯರು ಹೆಚ್ಚು ವಿದ್ಯಾಭ್ಯಾಸ ಮಾಡಬೇಕು

ಹರಪನಹಳ್ಳಿ.ನ.೬; ಮಹಿಳೆಯರು ಯಾರನ್ನು ಅವಲಂಬಿಸದೆ ಸ್ವಾವಲಂಬಿ ಜೀವನ ನಡೆಸಬೇಕು ಎಂದು ಕನಸು ಕಾಣುವವರಿಗೆ ಸಾಕಷ್ಟು ಅವಕಾಶಗಳುಂಟು ಎಂದು ಉತ್ತಮ ಉಪನ್ಯಾಸಕ ರಾಜ್ಯ ಪ್ರಶಸ್ತಿ ಪುರಸ್ಕೃತ ಹೆಚ್.ಮಲ್ಲಿಕಾರ್ಜುನ ಅಭಿಪ್ರಾಯ ಪಟ್ಟರು.
ತಾಲೂಕಿನ ತೆಲಿಗಿ ಗ್ರಾಮದಲ್ಲಿ ಡ್ರೀಮ್ ಡ್ಯಾನ್ಸ್ ಸ್ಟುಡಿಯೋ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿ ಸಾಕಷ್ಟು ಮಹಿಳೆಯರು ನಮಗೆ ಏನು ಗೊತ್ತಿಲ್ಲ, ಯಾವ ಕೆಲಸವೂ ಬರುವುದಿಲ್ಲ ಎಂದು ಹೇಳುವುದಿಲ್ಲ. ತೆಲಿಗಿಯಂತ ಗ್ರಾಮೀಣ ಭಾಗದಲ್ಲಿ ಕುಮಾರಿ ಶ್ವೇತ ಅವರು ಪಾರ್ಲರ್, ಟೈಲರಿಂಗ, ಆದುನಿಕತೆಗೆ ತಕ್ಕಂತೆ ಅಗತ್ಯವಾಗಿರುವ ಕಸೂತಿ ಕಲೆ ಜೊತೆಗೆ ಹೊಸ ಹೊಸ ವಿನ್ಯಾಸಗಳ ತರಬೇತಿ, ಜೊತೆಗೆ ನೃತ್ಯ ತರಬೇತಿಯನ್ನು ನೀಡುತ್ತಿರುವುದು ತುಂಬಾ ಸಂತೋಷದಾಯಕ ವಿಷಯ. ಇದರ ಸದುಪಯೋಗವನ್ನು ಸುತ್ತ ಮುತ್ತಲ ಗ್ರಾಮದ ಮಹಿಳೆಯರು ಮತ್ತು ಮಕ್ಕಳು ಸದುಪಯೋಗ ಪಡಿಸಿಕೊಳ್ಳಬೇಕು ಸ್ವಯಂ ಉದ್ಯೋಗವನ್ನು ಮಾಡಬೇಕು ಎಂದರು.
ಕುಮಾರಿ ಮಮತ ಮಾತನಾಡಿ ಮಹಿಳೆಯರು ಹೆಚ್ಚು ವಿದ್ಯಾಭ್ಯಾಸ ಮಾಡಬೇಕು ಅದು ನಿಮ್ಮ ಜೀವನಕ್ಕೆ ದಾರಿ ದೀಪವಾಗುತ್ತದೆ ಎಂದರು. ರಾಜ್ಯ ಪ್ರಶಸ್ತಿ ಪುರಸ್ಕೃತ ಹೆಚ್.ಮಲ್ಲಿಕಾರ್ಜುನ ಇವರನ್ನು ಸನ್ಮಾನಿಸಲಾಯಿತು. ವಿದ್ಯಾರ್ಥಿಗಳಿಂದ ನಾಡು-ನುಡಿಯ ಸಾಂಸ್ಕೃತಿಕ ನೃತ್ಯ ವಿವಿಧ ನೃತ್ಯವನ್ನು ನಡೆಸಲಾಯಿತು.
ಕಾರ್ಯಕ್ರಮದಲ್ಲಿ ಶ್ವೇತಾ,ಸಿ. ಮಂಜುನಾಥ, ಶಿವನಾಗ, ಹೆಚ್.ಮಂಜುನಾಥ, ಭೂಮಿಕ, ಚೆನ್ನವೀರ ಸ್ವಾಮಿ, ಡಿ.ಹನುಮಂತ, ಎಂ.ಅಜ್ಜಯ್ಯ, ಎಂ.ಮಂಜುನಾಥ ಇತರರು ಇದ್ದರು.

೧೩