
ಸಂಜೆವಾಣಿ ವಾರ್ತೆ
ಸಂಡೂರು:ಮೇ: 20; ಮಹಿಳೆಯರು ಸ್ವಾವಲಂಬಿಗಳಾಗಲು ಸ್ವಂತ ಉದ್ಯೋಗಗಳನ್ನು ನಡೆಸಬೇಕಾಗಿದೆ. ಜೆ.ಎಸ್.ಡಬ್ಯೂ. ಫೌಂಡೇಷನ್ ಈ ನಿಟ್ಟಿನಲ್ಲಿ ಕಾರ್ಖಾನೆಯ ಸುತ್ತಲಿನ ಗ್ರಾಮಗಳಲ್ಲಿ ಹಲವು ಜೀವನೋಪಾಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಮಹಿಳೆಯರು ಇವುಗಳನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ಜೆ.ಎಸ್.ಡಬ್ಯೂ. ಫೌಂಡೇಷ್ ಸ್ಟೀಲ್ ಸಂಸ್ಥೆಯ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥರಾದ ದೇಬಬ್ರತ ಮಿಶ್ರ ತಿಳಿಸಿದರು.
ಅವರು ತಾಲೂಕಿನ ತೋರಣಗಲ್ಲು ಓ.ಪಿ.ಜೆ. ಕೇಂದ್ರದಲ್ಲಿ ಕರ್ನಾಟಕ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಹುಬ್ಬಳ್ಳಿ ವಿಭಾಗದ ಹಾಗೂ ಸ್ಥಳೀಯ ಜೆ.ಎಸ್.ಡಬ್ಲ್ಯೂ ಫೌಂಡೇಷನ್ ಸಹಯೋಗದಲ್ಲಿ 10 ಮಹಿಳೆಯರಿಗೆ ಸಂಪೂರ್ಣ ಸ್ವಯಂ ಚಾಲಿತ ಅಗರಬತ್ತಿ ತಯಾರಿಕ ತರಬೇತಿ ಕಾರ್ಯಕ್ರಮದ ಸಮರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು. ಈ ಸಂದರ್ಭದಲ್ಲಿ 10 ಸ್ವಯಂ ಚಾಲಿತ ಅಗರರಬತ್ತಿ ಯಂತ್ರಗಳನ್ನು ಉಚಿತವಾಗಿ ವಿತರಿಸಲಾಯಿತು.
ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಹುಬ್ಬಳ್ಳಿ ವಿಭಾಗದ ನಿರ್ದೇಶಕ ಶ್ರೀನಿವಾಸ ಮಾನೆಯವರು ಮಾತನಾಡಿ ಪ್ರತಿಯೊಂದು ಯಂತ್ರವು 1 ಲಕ್ಷ ಕ್ಕೂ ಅಧಿಕ ಬೆಲೆ ಯದ್ದಾಗಿದೆ. ಇದನ್ನು ಇಲಾಖೆಯಿಂದ ಉಚಿತವಾಗಿ ನೀಡುತ್ತಿದ್ದೇವೆ. ತಯಾಸಿದ ಅಗರಬತ್ತಿಗಳನ್ನು ಹುಬ್ಬಳಿಯ ಇತರ ತಯಾರಿಕರಿಗೆ ಸಂಪರ್ಕ ಕಲ್ಪಿಸಿದ್ದೇವೆ ಎಂದು ತಿಲಿಸಿದರು.
ತರಬೇತಿ ಪಡೆದ ಮಹಿಳೆ ರೂಪರವರು ಮಾತನಾಡಿ ತರಬೇತಿ ಅವಧಿಯಲ್ಲಿ ನಮಗೆ ಕೈಯಿಂದ ಮತ್ತು ಯಂತ್ರದಿಂದ ಅಗರಬತ್ತಿ ತಯಾರಿಕ ವಿಧಾನ ಕಚ್ಚಾವಸ್ತುಗಳ ಕುರಿತು ಮಾಹಿತಿ ನೀಡಿದ್ದಾರೆ. ಇಂತಹ ಸ್ವಯಂ ಉದ್ಯೋಗ ಕಲ್ಪಿಸಿಕೊಡುವ ತರಬೇತಿ ಕಾರ್ಯಕ್ರಮಗಳು ಗ್ರಾಮೀಣ ಭಾಗದ ಮಹಿಳೆಯರಿಗೆ ತುಂಬಾ ಅನುಕೂಲವಾಗಲಿದೆ ಎಂದು ತಿಳಿಸಿದರು. ಕಾರ್ಯಕ್ರಮದ ಸಂದರ್ಭದಲ್ಲಿ ಜೆ.ಎಸ್. ಡಬ್ಲ್ಯೂ ಫೌಂಡೇಷನ್ ಸಿ.ಎಸ್.ಅರ್. ಮುಖ್ಯಸ್ಥ ಪದ್ದಣ್ಣ ಬಿಡಾಲ ಮಾತನಾಡಿದರು. ಅಧಿಕಾರಿಗಳಾದ ನಾಗನಗೌಡ, ರಾಜಣ್ಣ, ರಾಮದಾಸ, ತರಬೇತುದಾರ ಕಾಂಚನ ಉಪಸ್ಥಿತರಿದ್ದರು.