ಮಹಿಳೆಯರು ಸುರಕ್ಷಿತವಾಗಿ ಮನೆಗೆ ಬರಬೇಕೆಂದರೆ ಬಿಜೆಪಿಗೆ ಮತ ಹಾಕಿ:ಶ್ರೀರಾಮುಲು


(ಸಂಜೆವಾಣಿ ವಾರ್ತೆ)
ಬಳ್ಳಾರಿ:ಎ,26-  ನಿಮ್ಮ ಮನೆಯ ಹೆಣ್ಣು ಮಕ್ಕಳು ಸುರಕ್ಷಿತವಾಗಿ ಮನೆಗೆ ಬರಬೇಕೆಂದರೆ ಬಿಜೆಪಿಗೆ ಮತ ಹಾಕಿ ಎಂದು ಮಾಜಿ ಸಚಿವ ಹಾಗೂ ಬಳ್ಳಾರಿ ವಿಜಯನಗರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ಶ್ರೀರಾಮುಲು ಹೇಳಿದ್ದಾರೆ.
ಅವರು ನಿನ್ನೆ ಸಂಜೆ  ಹೊಸಪೇಟೆ ನಗರದ 03,04,05,06.08.09 ನೇ  ವಾರ್ಡ್ ಗಳಲ್ಲಿ ರೋಡ್ ಶೋ ಮೂಲಕ ಮತ ಯಾಚನೆ ಮಾಡಿ ಮಾತನಾಡುತ್ತಿದ್ದರು,
ಇದು ದೇಶದ ಭವಿಷ್ಯ ನಿರ್ಧರಿಸುವ ಚುನಾವಣೆ ನಮ್ಮ ತಾಯಂದಿರು, ಹೆಣ್ಣು ಮಕ್ಕಳು ಸುರಕ್ಷಿತವಾಗಿ ಮನೆಗೆ ಬರಲು ಬಿಜೆಪಿಗೆ ಮತ ಹಾಕಿ. ಅವರು ಆತಂಕದಲ್ಲಿಯೇ ಇರಬೇಕೆಂದರೆ ಕಾಂಗ್ರೆಸ್ ಗೆ ಮತ ಹಾಕಿ ಎಂದರು. 
ರೈತರ  ಕಿಸಾನ್ ಸಮ್ಮಾನ ಯೋಜನೆ ಮುಂದುವರೆಯಬೇಕೆಂದರೆ ಬಿಜೆಪಿಗೆ ಹಾಕಿ, ರೈತ ವಿದ್ಯಾನಿಧಿ ಯೋಜನೆ ಮತ್ತೆ ಬರಬೇಕು ಎಂದರೆ ಬಿಜೆಪಿಗೆ ಮತ ಹಾಕಿ,
ಕೊವಿಡ್ ಸಂದರ್ಭದಲ್ಲಿ ಮೋದಿಯವರು ಲಸಿಕೆ ಹಾಕಿಸಿ ಜೀವ ಉಳಿಸಿದ್ದಾರೆ. ಕೊರೊನಾ ಸಂದರ್ಭದಲ್ಲಿ ಹತ್ತು ಕೆಜಿ ಅಕ್ಕಿ ಕೊಟ್ಟರು. ಈಗಲೂ ಮೋದಿಯವರು ಐದು ಕೆಜಿ ಕೊಡುತ್ತಿದ್ದಾರೆ. ಮೋದಿಯವರ ಅಕ್ಕಿ, ಕಾಂಗ್ರೆಸ್ ಭಾಗ್ಯ ಎಂದು ಹೇಳಿಕೊಳ್ಳುತ್ತಿದೆ. ರೈತರ ಪಂಪ್ ಸೆಟ್ ಗಳಿಗೆ ಟಿಸಿಗಳನ್ನು ನಮ್ಮ ಅವಧಿಯಲ್ಲಿ 25. ಸಾವಿರಕ್ಕೆ ಕೊಡುತ್ತಿದ್ದೇವು. ಈಗ ಎರಡೂವರೆ ಲಕ್ಷ ರೂ. ಹಾಕುತ್ತಿದ್ದಾರೆ ಎಂದರು.
ಕಾಂಗ್ರೆಸ್ ಹೊಸದಾಗಿ ಗ್ಯಾರೆಂಟಿ ಕಾರ್ಡ್ ಗಳನ್ನು ಹಂಚುತ್ತಿದ್ದಾರೆ. ಗ್ಯಾರೆಂಟಿ ಕಾರ್ಡ್ ಹಂಚದಂತೆ ಚುನಾವಣಾ ಆಯೋಗದ ಆದೇಶ ಆಗಿದೆ. ಇನ್ನು ಮುಂದೆ ಅವರು ಗ್ಯಾರೆಂಟಿ ಕಾರ್ಡ್ ಹಂಚುವಂತಿಲ್ಲ. ಗ್ಯಾರೆಂಟಿ ಕಾರ್ಡ್ ಗಳನ್ನು ಹಂಚಲು ಬಂದರೆ, ಅದನ್ನು ತಡೆದು ಆಯೋಗಕ್ಕೆ ದೂರು ನೀಡಿ, ಅನಿಷ್ಟ ಕಾಂಗ್ರೆಸ್ ಸರ್ಕಾರಕ್ಕೆ ತಕ್ಕ ಪಾಠ ಕಲಿಸಿ, ಒಂದೇ ವರ್ಷದಲ್ಲಿ ಮತ್ತೆ ಚುನಾವಣೆ ವಿಧಾನಸಭೆಗೆ ಚುನಾವಣೆ ನಡೆಯಲಿದೆಂದು ಹೇಳಿದರು.
ಕಾಂಗ್ರೆಸ್ ನವರು ಹೊಸ ಕಾಯ್ದೆ ತರುತ್ತಿದ್ದು, ನಾವು ನಮ್ಮ ಪಿತ್ರಾರ್ಜಿತ ಆಸ್ತಿಯನ್ನು ಪಡೆಯಬೇಕಾದರೆ, ನಾವು ಶೇ 55% ರಷ್ಟು ತೆರಿಗೆ ಕಟ್ಟಬೇಕು. ಇಲ್ಲದಿದ್ದರೆ ಆಸ್ತಿ ಬಿಟ್ಟು ಕೊಡಬೇಕು. ಈ ರೀತಿಯ ಕಾನೂನು ತರುವುದಾಗಿ ರಾಹುಲ್  ಗಾಂಧಿ ಹೇಳಿದ್ದಾರೆ. ಕಾಂಗ್ರೆಸ್ ಗೆ ಮತ ಹಾಕಿದರೆ, ಆಸ್ತಿ ಹಂಚಿಕೆ ಕಾಯ್ದೆ ಜಾರಿಗೆ ತರುತ್ತಾರೆ. ಇದರ ಬಗ್ಗೆ ಎಚ್ಚರಿಕೆಯಿಂದ ಇರಬೇಕು. ಈ ಕಾಯ್ದೆ ಬಂದರೆ ದೇಶದಲ್ಲಿ ಕ್ಷೋಭೆ ಉಂಟಾಗಲಿದೆ ಎಂದು ಹೇಳಿದರು.
ನಿಮ್ಮ ಉತ್ಸಾಹ ನೋಡಿ ನನಗೆ ಶಕ್ತಿ ಬಂದಿದೆ. ಸಂಸತ್ತಿನಲ್ಲಿ ನಿಮ್ಮ ಧ್ವನಿಯಾಗಿ ಕೆಲಸ ಮಾಡುತ್ತೇನೆ ಮತ ನೀಡಿ ಆಶಿರ್ವಾದಿಸಿ ಎಂದರು.
ಈ ಸಂದರ್ಭದಲ್ಲಿ ಸಿದ್ಧಾರ್ಥ ಸಿಂಗ್, ತಾಲೂಕು ಅಧ್ಯಕ್ಷರಾದ ಶಂಕರ್ ಮೇಟಿ ಮತ್ತು ಗಕಾರ್ಯಕರ್ತರು ಪಾಲ್ಗೊಂಡಿದ್ದರು