ಮಹಿಳೆಯರು ಸಾಮಾಜಿಕ ಚಟುವಟಿಕೆಗಳಲ್ಲಿ ಭಾಗವಹಿಸಲು ಕರೆ

ಬಳ್ಳಾರಿ 26 : ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕೃತಿಕ ಸಂಘದಿಂದ ನಿನ್ನೆ ನಗರದ ವಾಜಪೇಯಿ ಬಡವಾಣೆಯಲ್ಲಿನ ರಂಗತೋರಣ ಸಂಸ್ಥೆಯ ಕಟ್ಟಡದಲ್ಲಿ ನಡೆದ ಒಂದು ದಿನದ ಶಿಬಿರವನ್ನು ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕೃತಿಕ ಸಂಘದ ಬಳ್ಳಾರಿ ಜಿಲ್ಲೆಯ ಆಡಳಿತ ಮಂಡಳಿ ಸದಸ್ಯ ಪ್ರಭುದೇವ ಕಪ್ಪಗಲ್ಲು ಅವರು ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು ಮಹಿಳೆಯರು ಸ್ವಯಂ ಪ್ರೇರಿತವಾಗಿ ಸಾಮಾಜಿಕ ಎಲ್ಲಾ ಚಟುವಟಿಕೆಗಳಲ್ಲಿ ಭಾಗವಹಿಸಬೇಕು, ಹೈದರಾಬಾದ ನಿಜಾಮರ ಆಳ್ವಿಕೆಯಿಂದ ಸ್ವಾತಂತ್ರವಾದ ನಂತರ ಈ ಭಾಗವು ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ತುಂಬಾ ಮುಂದುವರೆದಿದೆ ಹಾಗಾಗಿ ನಾವು ಯಾವುದೆ ಕಲಿಕೆಯನ್ನು ಪರಿಶ್ರಮದಿಂದ ಕಾರ್ಯನಿರ್ವಸಿದರೆ ಅಸಾದ್ಯವಾದುದು ಯಾವದು ಇಲ್ಲಾ, ಈ ರಾಜ್ಯದ ಮುಖ್ಯಮಂತ್ರಿಯವರು ಕಲ್ಯಾಣ ಕರ್ನಾಟಕ ಎಂದೂ ನಾಮಕರಣ ಮಾಡಿದ್ದಾರೆ. ಮಹಿಳೆಯರು ತುಂಬಾ ಶ್ರದ್ಧೆಯಿಂದ ಕಾರ್ಯ ನಿರ್ವಹಿಸಿದರೆ, ಗ್ರಾಮ ಅಭಿವೃದ್ಧಿ ಪಡಿಸಲು ಹಾಗಾಗಿ ಯಾವ ನಾಯಕರು ಅವಶ್ಯಕತೆ ಇರುವುದಿಲ್ಲ. ಇಲ್ಲಿ ಸೇರಿರುವ ಮಾತೆಯರು ಸೇವಾ ಮನೋಭಾವನೆಯಿಂದ ಕಾರ್ಯವನ್ನು ನಿರ್ವಹಿಸಿ ಬಸವರಾಜ ಪಾಟೇಲ ಸೇಡಂ ಜಿ ಅವರ ಕನಸನ್ನು ಸಾಕಾರ ಮಾಡಬೇಕಾಗಿದೆಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ರೂರಲ್ ಫಾರ್ ಡೆವಲಪಮೆಂಟ್ ಸಂಸ್ಥೆಯ ಅಧ್ಯಕ್ಷ ಬಿ.ಡಿ. ಗೌಡ ಹಾಗೂ ಜೋಳದರಾಶಿ ಪಂಪನಗೌಡ, ಕೆ.ಆರ್.ಮಲ್ಲೆಶ ಕುಮಾರ, ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕೃತಿಕ ಸಂಘದ ಬಳ್ಳಾರಿ ನಗರ ಜಿಲ್ಲಾ ಸಂಚಾಲಕ ಪ್ರವೀಣ ನಾಯಕ ಮತ್ತು ಗ್ರಾಮಾಂತರ ಜಿಲ್ಲಾ ಸಂಚಾಲಕ ಮಂಜುನಾಥ ಸ್ವಾಮಿ, ಸಿರಗುಪ್ಪ ವೀರೆಶ, ಸಂಡೂರು ಜಿಲ್ಲಾ ಸಂಚಾಲಕ ಸಂಜೀವ ಅವರು ಉಪಸ್ಥಿತಿರಿದ್ದರು, ವಿರೇಶ ಕಗ್ಗಲ್ ವಂದಿಸಿದರು