ಮಹಿಳೆಯರು ಸಾಮಾಜಿಕವಾಗಿ ಸದೃಢರಾಗಲು ಕಾಂಗ್ರೆಸ್ ಕೊಡುಗೆ ಅಪಾರ

ದಾವಣಗೆರೆ.ಸೆ.೧೭; ದಾವಣಗೆರೆ ಮಹಾನಗರ ಪಾಲಿಕೆಯ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಿವಿಧ ವಾರ್ಡ್ಗಳಿಗೆ ಕಾಂಗ್ರೆಸ್ ಪಕ್ಷದ ಮಹಿಳಾ ಘಟಕಕ್ಕೆ ನೂತನವಾಗಿ ಅಧ್ಯಕ್ಷರು ಮತ್ತು ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದೆ.
ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ.ಶಾಮನೂರು ಶಿವಶಂಕರಪ್ಪ ಹಾಗೂ ಮಾಜಿ ಸಚಿವರಾದ ಎಸ್ ಎಸ್ ಮಲ್ಲಿಕಾರ್ಜುನ್ ಮತ್ತು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಹೆಚ್. ಬಿ. ಮಂಜಪ್ಪ ಹಾಗೂ ದಾವಣಗೆರೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನೇಶ್ ಶೆಟ್ಟಿ, ದಾವಣಗೆರೆ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀಮತಿ ಅನಿತಬಾಯಿ ಮಾಲತೇಶ್ ರಾವ್ ರವರ ಆದೇಶದ ಮೇರೆಗೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಅಧ್ಯಕ್ಷೆ ಶುಭಮಂಗಳ ಮೋಹನರವರು ನೂತನವಾಗಿ ಸಮಿತಿಗಳನ್ನು ನೇಮಕ ಮಾಡಿದ್ದಾರೆ. ಮಹಾನಗರ ಪಾಲಿಕೆಯ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ೧೧ನೇ ವಾರ್ಡಿನ ಮಹಾನಗರ ಪಾಲಿಕೆ ಸದಸ್ಯರಾದ ಸೈಯದ್ ಚಾರ್ಲಿ ನೇತೃತ್ವದಲ್ಲಿ ಹಾಗೂ ೧೪ನೇ ವಾರ್ಡ್ನ ಮಹಾನಗರ ಪಾಲಿಕೆ ಸದಸ್ಯ ಕೆ. ಚಮನ್ ಸಾಬ್ , ಕಾಂಗ್ರೆಸ್ ಮುಖಂಡ ಲಾಲ್ ಆರಿಫ್ ಅವರ ನೇತೃತ್ವದಲ್ಲಿ ೧೧ನೇ ವಾರ್ಡ್ ಅಧ್ಯಕ್ಷರಾಗಿ ರುದ್ರಮ್ಮ, ೧೩ನೇ ವಾರ್ಡ ಅಧ್ಯಕ್ಷರಾಗಿ ಕೌಸರ್‌ಬಾನು, ೧೪ನೇ ವಾರ್ಡ್ ಅಧ್ಯಕ್ಷರಾಗಿ ಶಾಹಿನಾರವರನ್ನು ಹಾಗೂ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ನೂತನ ಪದಾಧಿಕಾರಿಗಳಿಗೆ ನಗರದ ಬೇತೂರು ರಸ್ತೆಯಲ್ಲಿ ನಡೆದ ಸರಳ ಕರ‍್ಯಕ್ರಮದಲ್ಲಿ ಆದೇಶ ಪ್ರತಿ ನೀಡಲಾಯಿತು. ಈ ಕರ‍್ಯಕ್ರಮದಲ್ಲಿ ಭಾಗವಹಿಸಿದ್ದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಬಿ.ಮಂಜಪ್ಪ ಮಾತನಾಡಿ ಕಾಂಗ್ರೆಸ್ ಪಕ್ಷ ಮಹಿಳೆಯರಿಗಾಗಿ ಸಾಮಾಜಿಕ, ಆರ್ಥಿಕವಾಗಿ ಮುಂದುವರೆಯಲು ಸಾಕಷ್ಟು ಕರ‍್ಯಕ್ರಮಗಳನ್ನು ನೀಡುವ ಮೂಲಕ ಮಹಿಳೆಯರು ಸ್ವಾವಲಂಬಿ ಜೀವನ ನಡೆಸುವಂತಾಗಿದೆ. ಈ ಹಿಂದೆ ಮೋಟಮ್ಮನವರು ಸಚಿವರಾಗಿದ್ದ ವೇಳೆ ಸ್ವ-ಸಹಾಯ ಸಂಘ ಆರಂಭಿಸುವ ಮೂಲಕ ಮಹಿಳೆಯರು ಆರ್ಥಿಕವಾಗಿ ಸದೃಢವಾಗಲು ನೆರವಾದರು ಎಂದರು. ಕಾಂಗ್ರೆಸ್ ಪಕ್ಷ ಮಹಿಳೆಯರಿಗೆ ನೀಡಿರುವ ಯೋಜನೆಗಳನ್ನು ತಿಳಿಸುವ ಮೂಲಕ ಪಕ್ಷದ ಸಂಘಟನೆಯಲ್ಲಿ ಹೆಚ್ಚೆಚ್ಚು ಮಹಿಳೆಯರನ್ನು ತೊಡಗಿಸಿಕೊಳ್ಳಬೇಕೆಂದು ಕರೆ ನೀಡಿದರು. ಜಿಲ್ಲಾ ಕಾಂಗ್ರೆಸ್ ಪ್ರಧಾನ ಕರ‍್ಯದರ್ಶಿ ದಿನೇಶ್ ಕೆ.ಶೆಟ್ಟಿ ಅವರು ಮಾತನಾಡಿ ಕಾಂಗ್ರೆಸ್ ಪುರುಷರಷ್ಟೇ ಮಹಿಳೆಯರಿಗೂ ಸಮಾನವಾಗಿ ಸ್ಥಾನಮಾನ ನೀಡುತ್ತಾ ಬಂದಿದ್ದು, ಇಂದು ದಾವಣಗೆರೆ ಜಿಲ್ಲೆಯಲ್ಲಿ ಅನಿತಾಬಾಯಿ ಮಾಲತೇಶ್ ಅವರ ನೇತೃತ್ವದಲ್ಲಿ ಪಕ್ಷ ಉತ್ತಮವಾಗಿ ಸಂಘಟನೆ ಆಗುತ್ತಿದ್ದು, ಬೂತ್ ಮಟ್ಟದಲ್ಲಿ ಪಕ್ಷ ಸಂಘಟನೆಯಾದರೆ ಎಲ್ಲಾ ಕಡೆಗಳಲಲ್ಲೂ ಪಕ್ಷ ಅಧಿಕಾರಕ್ಕೆ ಬರುವುದರಲ್ಲಿ ಸಂಶಯವಿಲ್ಲ ಎಂದರು.
ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾದ ಶ್ರೀಮತಿ ಅನಿತಾಬಾಯಿ ಮಾಲತೇಶ್ ರಾವ್ ಅವರು ಮಾತನಾಡಿ ಮಹಿಳೆ ಪರ ಕಾಂಗ್ರೆಸ್ ಪಕ್ಷ ಎಂಬುದಕ್ಕೆ ದಾವಣಗೆರೆ ದಕ್ಷಿಣ ಭಾಗದಲ್ಲಿ ಸಮರ್ಪಕವಾದ ನೀರು ಪೂರೈಕೆಯಲ್ಲಿ ನಂಬರ್ ಒನ್ ಎನ್ನುವಂತಿದೆ. ಈ ಭಾಗದ ಶಾಸಕರಾದ | ಶಾಮನೂರು ಶಿವಶಂಕರಪ್ಪನವರು ಮಹಿಳೆಯರು ನೀರಿಗೆ ಕಷ್ಟಪಡುತ್ತಿದ್ದನ್ನು ಗಮನಿಸಿ ಸಮರ್ಪಕವಾದ ನೀರು ಸರಬರಾಜಿಗೆ ಕ್ರಮ ಕೈಗೊಂಡರೂ ಇದೀಗ ಜಲಸಿರಿ ಯೋಜನೆ ಜಾರಿಗೆ ತರುತ್ತಿದ್ದು, ೨೪ ಗಂಟೆ ನೀರು ಸರಬರಾಜಾಗಲಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಸದಸ್ಯರಾದ ಸೈಯದ್ ಚಾರ್ಲಿ, ಕೆ.ಚಮನ್ ಸಾಬ್, ಕಾಂಗ್ರೆಸ್ ಮುಖಂಡರುಗಳಾದ ಲಾಲ್‌ಆರಿಫ್, ಆಶಾ ಮುರಳಿ, ಕವಿತಾ ಚಂದ್ರಶೇಖರ್, ವೀಣಾ ಮಂಜುನಾಥ್, ದಿಲ್‌ಶಾದ್ ಬಾನು, ಭಾರತಿ ಅಶೋಕ್‌ರವರು ಉಪಸ್ಥಿತರಿದ್ದರು.