ಮಹಿಳೆಯರು ಸಾಕ್ಷರಸ್ಥರಾದಾಗ ಮಾತ್ರ ದೇಶದ ಪ್ರಗತಿ ಸಾದ್ಯ

ಆಳಂದ ;ಮಾ.30: ಮಹಿಳೆಯರು ಶಿಕ್ಷಣ ಪಡೆದು ಸಾಧನೆ ಮಾಡಿದರೆ ಮಾತ್ರ ದೇಶ ಪ್ರಗತಿ ಸಾಧ್ಯವಾಗುತ್ತದೆ ಎಂದು ಶ್ರೀಮುರಘೇಂದ್ರ ಕೋರಣೇಶ್ವರ ಶಿವಯೋಗಿಗಳು ಹೇಳಿದರು.
ತಾಲೂಕಿನ ಖಜೂರಿ ಗ್ರಾಮದ ಶ್ರೀ ಕೋರಣೇಶ್ವರ ಮಠದಲ್ಲಿ ನಡೆದ ಕನ್ನಡ ಜಾಣಪದ ಪರಿಷತ್ತು, ಕರ್ನಾಟಕ ವಚನ ಪರಿಷತ್ತು,ಗಡಿನಾಡು ಕಜಾಪ ಸಹಯೋಗದಲ್ಲಿ ಜಾನಪದ ಸಂಬ್ರಮ ಹಾಗೂ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಸಾನಿದ್ಯ ವಹಿಸಿ ಮಾತನಾಡಿದ ಅವರು ಮಹಿಳೆಯರಿಗೆ ಸಮಾನತೆ ಸಿಗಬೇಕು ಎಂದು ಕೇವಲ ಬಾಯಿಂದ ಹೇಳಿ ಸುಮ್ಮನಾಗಿ ಇರುವುದಲ್ಲ ಅದನ್ನು ಪ್ರತಿಯೊಬ್ಬರು ಕಾರ್ಯರೂಪಕ್ಕೆ ತರುವಲ್ಲಿ ಶ್ರಮಿಸಬೇಕು ಎಂದರು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕಜಾಪ ಜಿಲ್ಲಾಧ್ಯಕ್ಷ ಎಂ.ಬಿ.ನಿಂಗಪ್ಪ ಕಲೆ ಸಾಹಿತ್ಯ ಸಂಸ್ಕøತಿ ಗ್ರಾಮೀಣ ಜನರ ಜೀವಾಳವಾಗಿದೆ ಕಲಾವಿದರು ಕಲೆಯನ್ನು ನಂಬಿ ಬದುಕುತ್ತಿದ್ದ ಅವರಿಗೆ ಸರಕಾರ ಮಾಸಾಶನ ಹಾಗೂ ಕಲೆ ಉಳಿಸಿ ಬೆಳಸಲು ಅನುದಾನ ನೀಡಿ ಬೆಳಸಬೇಕಿದೆ ಎಂದರು.ಮಠದ ಉತ್ತರಾಧಿಕಾರಿ ನಿಲಲೋಚನತಾಯಿ ಸಾಹಿತಿ ಬಿ.ಎಚ್.ನಿರಗುಡಿ ವಿಶ್ವನಾಥ ಭಕರೆ ಡಾ.ಶಿವರಂಜನ ಸತ್ಯಂಪೇಟ ಅಪ್ಪಾಸಾಬ ತಿರ್ಥೇ ಸಾಹೇಬಗೌಡ ಪಾಟೀಲ ಮಾಜಿ ಜಿಪಂ ಸದಸ್ಯೆ ಜಯಶ್ರಿ ಸಾವಳೇಶ್ವರ ಆಳಂದ ಮಹಿಳಾ ವೇದಿಕೆ ಅಧ್ಯಕ್ಷೆ ರುಕ್ಮಿಣಿ ಸಂಗಾ ಮಾತನಾಡಿದರು.
ಚಂದ್ರಕಲಾ ಬಂಡೆ ಅಧ್ಯಕ್ಷತೆ ವಹಿಸಿದ್ದರು.ಗಂಗಾಧರ ಕುಂಭಾರ ವೀರಭದ್ರಪ್ಪ ಹಾರಕ ರಾಜಶೇಖರ ಹರಿಹರ ಶ್ರೀಶೈಲ ಭಿಮಪುರೆ ಶರಣಗೌಡ ಪಾಟೀಲ ಪಾಳಾ ಇತರರು ವೇದಿಕೆಯಲ್ಲಿ ಇದ್ದರು.ಸಾಧನೆ ಮಾಡಿದ ಮಹಿಳೆಯರನ್ನು ಸನ್ಮಾನಿಸಿದರು. ನಂತರ ಜನಪದ ಹಾಡುಗಳ ಸಂಬ್ರಮ ನಡೆಯಿತು.