ಮಹಿಳೆಯರು ಸಕಲ ಕ್ಷೇತ್ರಗಳಲ್ಲಿ ಪರಿಣಿತರಾಗಬೇಕು: ಜಯಶ್ರೀ.ಬಿ

ಗಂಗಾವತಿ ಡಿ 01 : ಮಹಿಳೆಯರು ಸಕಲ ಕ್ಷೇತ್ರಗಳಲ್ಲಿ ತೊಡಗಿಕೊಳ್ಳುವ ಮೂಲಕ ಆರ್ಥಿಕವಾಗಿ
ಸಬಲರಾಗಬೇಕು ಎಂದು ಮಹಿಳಾ ಸಾಂತ್ವಾನ ಕೇಂದ್ರದ ಮೇಲ್ವಿಚಾರಕಿ ಜಯಶ್ರೀ.ಬಿ ಹೇಳಿದರು.
ನಗರದ ವಿರುಪಾಪೂರ ತಾಂಡಾದಲ್ಲಿ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ವತಿಯಿಂದ
ಮಂಗಳವಾರ ಹಮ್ಮಿಕೊಂಡ ಮಹಿಳಾ ಜ್ಞಾನ ವಿಕಾಸನಾ ಕಾರ್ಯಕ್ರಮದಲ್ಲಿ ಭಾಗವಹಿಸಿ
ಮಾತನಾಡಿದರು. ಮಹಿಳೆಯರು ಸದ್ಯದ ಪರಿಸ್ಥಿತಿಯಲ್ಲಿ ಬೆರಳೆಣಿಕೆ ಕ್ಷೇತ್ರಗಳಿಗೆ ಮಾತ್ರ
ಸಿಮೀತರಾಗುತ್ತಿದ್ದಾರೆ, ಇದು ಬದಲಾವಣೆಯಾಗಬೇಕು. ಪ್ರತಿಯೊಂದು ಕ್ಷೇತ್ರದಲ್ಲಿ ಕೂಡ
ಮಹಿಳೆಯರು ಪರಿಣಿತರಾಗಿ ಯಶಸ್ಸು ಪಡೆದುಕೊಳ್ಳಬೇಕು.
ಅದೇ ರೀತಿಯಾಗಿ ಮಹಿಳೆಯರ ಮೇಲೆ ಹಲ್ಲೆ, ದೌರ್ಜನ್ಯಗಳು ಪದೆ ಪದೇ ಹೆಚ್ಚಾಗಿ
ನಡೆಯುತ್ತಿವೆ. ಕಾನೂನಿನ ಮೂಲಕ ನಾವುಗಳು ರಕ್ಷಣೆಯನ್ನು ಪಡೆದುಕೊಳ್ಳಬೇಕು ಎಂದು
ಹೇಳಿದರು. ಧರ್ಮಸ್ಥಳ ಗ್ರಾಮೀಣಾ ಭಿವೃದ್ಧಿ ಸಂಸ್ಥೆಯ ಸಮನ್ವಯಾಧಿಕಾರಿ ಸುನೀತಾ,
ಪ್ರಮುಖರಾದ ದ್ರಾಕ್ಷಾಯಣಿ, ಬಾನುಬೇಗಂ, ರತ್ನಮ್ಮ ರೇಣುಕಾ ಸೇರಿದಂತೆ ಇತರರಿದ್ದರು.