ಮಹಿಳೆಯರು ಶಿಬಿರದ ಸದುಪಯೋಗ ಪಡಿಸಿಕೊಳ್ಳಲು ಕರೆ


ಸಂಜೆವಾಣಿ ವಾರ್ತೆ
ಸಂಡೂರು:ಮಾ: 30: ಮಹಿಳೆಯರು ಸ್ವಾವಲಂಬಿಗಳಾಗಬೇಕು ಎನ್ನುವ ಮಹತ್ತರ ಗುರಿ ಮತ್ತು ನಶಿಸುತ್ತಿರುವ ಹಾಗೂ ಆಕರ್ಷಕವಾದ ಲಂಬಾಣಿ ಕಲೆ ಹಾಗೂ ಕಸೂತಿ ಕಲೆಯನ್ನು ಉಳಿಸುವ ನಿಟ್ಟಿನಲ್ಲಿ ಅಕ್ಕನ ಬಳಗದ ಸದಸ್ಯರಾದ ನಿರ್ಮಲ ಮುದೇನೂರು ಇವರು ಶಿಬಿರ ನಡೆಸಲು ಮುಂದೆ ಬಂದು ಕಾರ್ಯಪ್ರವೃತ್ತರಾಗಿರುವುದು ಹೆಮ್ಮೆಯ ಸಂಗತಿ ಎಂದು ಅಧ್ಯಕ್ಷ ಜ್ಯೋತಿ ಗುಡೇಕೋಟೆ ತಿಳಿಸಿದರು.
ಅವರು ಪಟ್ಟಣದಲ್ಲಿ ನೂತನವಾಗಿ ಅಕ್ಕನ ಬಳಗದ ವತಿಯಿಂದ ಲಂಬಾಣಿ ಹಾಗೂ ಕಸೂತಿ. ಹೊಲಿಗೆ ತರಬೇತಿ ಶಿಬಿರ ಹಮ್ಮಿಕೊಳ್ಳಲಾಗಿದೆ ಇದಕ್ಕೆ ಚಾಲನೆ ನೀಡಿ ಮಾತನಾಡಿ ಮಹಿಳೆಯರು ಸ್ವಯಂ ಪ್ರೇರಣೆಯಿಂದ ಮುಂದೆ ಬಂದು ಸಮಾಜಕ ಪ್ರಗತಿಗೆ ಅದರಲ್ಲೂ ಮಹಿಳೆಯರಿಗೆ ಅನುಕೂಲವಾಗುವಂತಹ ಕಾರ್ಯಕ್ರಮಗಳನ್ನು ಮಾಡುವುದು ಬಹು ಮುಖ್ಯವಾಗಿದೆ, ಪ್ರಥಮ ಹಂತದಲ್ಲಿಯೇ ಇಂತಹ ಉತ್ತಮ ಕಾರ್ಯ ಮಾಡುವಂತಹ ಹೆಮ್ಮ ಅಕ್ಕನ ಬಳಗದ್ದಾಗುತ್ತದೆ ಎಮದರು.
ಈ ಸಂದರ್ಭದಲ್ಲಿ ಇಡೀ ತರಬೇತಿಯ ಹೊಣೆಯನ್ನು ನಿರ್ಮಲ ಮುದೇನೂರು , ಸೂಜಿ ದಾರದ ಮನೆ ಸಂಸ್ಥೆಯ ಮಾಲೀಕರು ವಹಿಸಿ ಕೊಂಡಿದ್ದಾರೆ.
ಈ ಸಂದರ್ಭದಲ್ಲಿ ಅಕ್ಕನ ಬಳಗದ ಉಪಾಧ್ಯಕ್ಷರಾದ ನಿರ್ಮಲ ಗೋನಾಳ್, ಗೌರವಾಧ್ಯಕ್ಷರಾದ ಶಾಂತಮ್ಮ ಅಂಕಮನಾಳ್, ಪ್ರಧಾನ ಕಾರ್ಯದರ್ಶಿ ಉಗ್ರಾಣದ ವಿಶಾಲಾಕ್ಷಿ, ಸರೋಜ.ಪಿ.ಜ್ಯೋತಿ, ಅನುಪಮ.ಕೆ., ಶಿವಲೀಲಾ. ಈ. ಎಂ. ಶಾಂತಮ್ಮ, ಸುಮಂಗಳ ಜಿ.ಎಸ್.ಎಸ್. ಭಾಗ್ಯಮ್ಮ, ಜಯಲಕ್ಷ್ಮೀ ಹೆಚ್., ಸುಧಾ ಹೆಚ್., ಶೈಲಜಾ ಹೆಚ್. ಬಿ.ಎಂ. ರತ್ನ, ಜಿ.ಶಶಿಕಲಾ, ಇತರ ಸದಸ್ಯರು ಉಪಸ್ಥಿತರಿದ್ದರು.