
ಬೀದರ,ಮಾ 11 ದೇಶದಲ್ಲಿ ಮಹಿಳೆಗೆ ಶಿಕ್ಷಣ ಮತ್ತು ವ್ಯಾವಹಾರಿಕ ಜ್ಞಾನ ಎಲ್ಲಿಯವರೆಗೆಸಿಗುವುದಿಲ್ಲವೋ ಅಲ್ಲಿ ತನಕ ದೇಶದ ಸ್ವಾತಂತ್ರ್ಯಕ್ಕೆ ಆರ್ಥವಿಲ್ಲ ಎಂದುಡಾ.ಅಂಬೇಡ್ಕರ ಅವರು ಹಿಂದೆಯೇ ಹೇಳಿದ್ದು ಮಹಿಳಾ ಸಬಲೀಕರಣಕ್ಕೆ ನಾಂದಿಹಾಡಿತ್ತು. ಜನಸಂಖ್ಯೆಯ ಶೇ 50 ರಷ್ಟು ಇರುವ ಮಹಿಳೆಯರು ಮುಖ್ಯವಾಹಿನಿಯಲ್ಲಿಬಂದಾಗ ಮಾತ್ರ ದೇಶವು ಎಲ್ಲಾ ರಂಗಗಳಲ್ಲೂ ಅಭಿವೃದ್ದಿ ಸಾಧಿಸಲು
ಸಾಧ್ಯವಿದೆ ಎಂದು ನಬಾರ್ಡ ಪ್ರಾಂತೀಯ ಕಛೇರಿ ಉಪಪ್ರಧಾನವ್ಯವಸ್ಥಾಪಕ ಅನಿಲ ಕುಮಾರ ರಾವತ ಅವರು ನುಡಿದರು.
ಡಾ.ಗುರುಪಾದಪ್ಪಾ ನಾಗಮಾರಪಳ್ಳಿ ಸೌಹಾರ್ದ ತರಬೇತಿ ಸಂಸ್ಥೆಯಲ್ಲಿ
ನಡೆದ ಮಹಿಳಾ ದಿನಾಚರಣೆ ಅಂಗವಾಗಿ ಸ್ವ ಸಹಾಯ ಗುಂಪುಗಳ
ಸದಸ್ಯರನ್ನು ಉದ್ದೇಶಿಸಿ ಅವರು ಮಾತನಾಡಿದರು. ಬೀದರ ಡಿಸಿಸಿ ಬ್ಯಾಂಕು ಸ್ವ-ಸಹಾಯ ಗುಂಪುಗಳ ಕ್ರಾಂತಿ ಮಾಡಲು ದೇಶಕ್ಕೆ ಮಾದರಿಯಾಗಿದೆ. ಮಹಿಳೆಯರಿಗೆ
ನೀಡಿದ ಸಾಲದ ಮರುಪಾವತಿ ಶೇ 99 ಇರುವುದು ಮಹಿಳಾ ಸಂಸ್ಕøತಿಯ
ಪ್ರತೀಕವಾಗಿದೆ. ಮಹಿಳೆಯರು ಪ್ರಾಮಾಣಿಕತೆಯ ದ್ಯೋತಕವಾಗಿದೆಎಂದರು . ಮಹಿಳೆಯರ ಅಭ್ಯುದಯಕ್ಕಾಗಿ ಸ್ವ ಸಹಾಯ ಗುಂಪುಗಳ
ರಚನೆ ಮತ್ತು ಸಾಲ ವಿತರಣೆ ಹಮ್ಮಿಕೊಂಡಿದ್ದು ಶೂನ್ಯ ಬಡ್ಡಿದರದಲ್ಲಿ ಸಾಲ
ವಿತರಿಸಲಾಗುತ್ತಿದೆ.ಬೀದರ ಜಿಲ್ಲೆಯಲ್ಲಿ ಕೂಡಾ ಸ್ವ ಸಹಾಯ ಗುಂಪುಗಳ ವ್ಯವಹಾರ
ಮಾದರಿಯಾಗಿ ಬೆಳೆದಿದ್ದು ಮಹಿಳೆಯರು ಇದರ ಪ್ರಯೋಜನಪಡೆಯುತ್ತಿದ್ದಾರೆ. ಸುಮಾರು 750 ಕೋಟಿ ರೂಪಾಯಿಗಳ ಸಾಲವನ್ನುನೀಡಲಾಗಿದೆ. ಸ್ವ ಸಹಾಯ ಗುಂಪುಗಳ ಉತ್ಪನ್ನಗಳನ್ನು ಮಾರಾಟ ಮಾಡುವಸಲುವಾಗಿ ಈಗಾಗಲೇ ಒಂದು ಗ್ರಾಮೀಣ ಮಾರ್ಟನ್ನು ನಬಾರ್ಡನಿಂದ ಆರಂಭಿಸಲಾಗಿದೆ ಎಂದರು
ನಬಾರ್ಡ ಬೀದರ ಜಿಲ್ಲಾ ಅಭಿವೃದ್ದಿ ಪ್ರಬಂಧಕರಾಮರಾವ್ ಯೆಗಬೋಟೆಯವರು ನಬಾರ್ಡನ ಹಲವು ಕಾರ್ಯಕ್ರಮಗಳವಿವರ ನೀಡಿದರುಸಹಾರ್ದ ನಿರ್ದೇಶಕ ಸುಬ್ರಹ್ಮಣ್ಯ ಪ್ರಭು ಸ್ವಾಗತಿಸಿದರು. ಬಸವಕಲ್ಯಾಣ ಮತ್ತು ಭಾಲ್ಕಿ ತಾಲ್ಲೂಕುಗಳ ವಿವಿಧ ಗ್ರಾಮಪಂಚಾಯತಗಳಿಂದ ಘನ ತ್ಯಾಜ್ಯ ವಿಲೇವಾರಿ ಮತ್ತು ಕಸ ನಿರ್ವಹಣೆ ಗುತ್ತಿಗೆಪಡೆದ ಸ್ವ ಸಹಾಯ ಗುಂಪುಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.
ಡಿಸಿಸಿ ಬ್ಯಾಂಕಿನ ಕಿರುಹಣಕಾಸು ವಿಭಾಗದ ಉಪಪ್ರಧಾನ ವ್ಯವಸ್ಥಾಪಕ ಬಸವರಾಜ ಕಲ್ಯಾಣಿ ವಂದಿಸಿದರು.ತರಬೇತಿ ಸಂಯೋಜಕ ಅನಿಲ ಪಿ ಕಾರ್ಯಕ್ರಮ ನಿರ್ವಹಿಸಿದರು. ರೈತರಉತ್ಪಾದಕ ಕೇಂದ್ರಗಳ ಸಂಯೋಜಕ ಡಿಸಿಸಿ ಬ್ಯಾಂಕಿನ ವಿಜಯಕುಮಾರ ಭಾಲ್ಕೆ,ನಾಗನಾಥ ಉಪಸ್ಥಿತರಿದ್ದರು.