ಮಹಿಳೆಯರು, ಮಕ್ಕಳಿಗೆ ಊಟ ವಿತರಣೆ

ದೇವದುರ್ಗ.ಜೂ.೦೯-ತಾಲೂಕಿನ ಕಮಲದಿನ್ನಿ, ಕಕ್ಕಲದೊಡ್ಡಿ ಗ್ರಾಮದಲ್ಲಿ ಕೆ.ಶಿವನಗೌಡ ನಾಯಕ ಅನ್ನದಾಸೋಹ ಕೇಂದ್ರದಿಂದ ಮಹಿಳೆಯರು ಹಾಗೂ ಮಕ್ಕಳಿಗೆ ಊಟ, ಮಾಸ್ಕ್, ಮೊಟ್ಟೆ ಹಾಗೂ ಶುದ್ಧ ಕುಡಿವ ನೀರು ಮಂಗಳವಾರ ವಿತರಣೆ ಮಾಡಲಾಯಿತು.
ಬಿಜೆಪಿ ಎಸ್ಟಿ ಮೋರ್ಚಾ ಜಿಲ್ಲಾ ಸದಸ್ಯ ಶಿವಪ್ಪ ನಾಯಕ ಕಕ್ಕಲದೊಡ್ಡಿ ಮಾತನಾಡಿ, ಅನ್ನದಾನ ಶ್ರೇಷ್ಠ ದಾನ. ಅನ್ನ ಅಮೃತಕ್ಕೆ ಸಮ. ಶಾಸಕ ಕೆ.ಶಿವನಗೌಡ ನಾಯಕ ಲಾಕ್‌ಡೌನ್ ಸಮಯದಲ್ಲಿ ಬಡವರಿಗೆ ಊಟ ವಿತರಣೆ ಮಾಡಿ, ಹಸಿವು ನೀಗಿಸುತ್ತಿದ್ದಾರೆ. ಗಾಣಧಾಳ ಗ್ರಾಪಂ ವ್ಯಾಪ್ತಿಯ ಎಲ್ಲ ಹಳ್ಳಿಗಳಿಗೆ ಊಟ, ಮಾಸ್ಕ್, ಮೊಟ್ಟೆ, ಕುಡಿವ ನೀರು ವಿತರಣೆ ಮಾಡಲಾಗಿದೆ.
ಮುಖಂಡರಾದ ಲಿಂಗಯ್ಯ ಸುಣ್ಣದಕಲ್, ಶರಣಗೌಡ ಬೆನಕನ್, ಯಂಕನಗೌಡ ಮಾಲಿಪಾಟೀಲ್, ಬಸವರಾಜ, ಶಿವುಕುಮಾರ ನಾಯಕ ಇತರರಿದ್ದರು.