ಮಹಿಳೆಯರು ಕಡ್ಡಾಯವಾಗಿ ಮತದಾನ ಮಾಡಿ

ಚಿತ್ರದುರ್ಗ.ಏ.೨೨; ಪ್ರಜಾಪ್ರಭುತ್ವದದಲ್ಲಿ ಮಹಿಳೆಯರು ಪ್ರಮುಖ ಶಕ್ತಿ, ಎಲ್ಲಾ ಮಹಿಳೆಯುರು ಕಡ್ಡಾಯವಾಗಿ ಮತದಾನ ಮಾಡಬೇಕು ಎಂದು ಚಿತ್ರದುರ್ಗ ತಾ.ಪಂ ಇಓ ಹೆಚ್. ಹನುಮಂತಪ್ಪ ಹೇಳಿದರು.
ಶುಕ್ರವಾರ ತಾಲ್ಲೂಕು ಸ್ವೀಪ್ ಸಮಿತಿ ಹಾಗೂ ಭರಮಸಾಗರ ಗ್ರಾ.ಪಂ ವತಿಯಿಂದ ಆಯೋಜಿಸಿದ್ದ ಮತದಾನ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಯಾವುದೇ ಆಸೆ-ಆಮಿಷಗಳಿಗೆ ಒಳಗಾಗದೇ ಮತ ಚಲಾಯಿಸಬೇಕು. ಮತದಾನದ ಕುರಿತು ಸುತ್ತಮುತ್ತಲಿನ ಜನರಿಗೆ ಪ್ರೇರಣೆ ನೀಡಬೇಕು ಎಂದು ಮಹಿಳೆಯರಿಗೆ ಕರೆ ನೀಡಿದರು.ಭರಮಸಾಗರ ಗ್ರಾ.ಪಂ ಆವರಣದಲ್ಲಿ ಆಯೋಜಿಸಿದ್ದ ರಂಗೋಲಿ ಸ್ಫರ್ಧೆ ಹಾಗೂ ಜಾಥಾ ಕಾರ್ಯಕ್ರಮದಲ್ಲಿ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಮತದಾನ ಪ್ರತಿಜ್ಞಾ ವಿಧಿ ಬೋಧಿಸಲಾಯಿತು.    
 ಕಾರ್ಯಕ್ರಮದಲ್ಲಿ ಭರಮಸಾಗರ ಸಿಡಿಪಿಓ ವೀಣಾ, ಚಿತ್ರದುರ್ಗ ಸಿಡಿಪಿಓ ಸುಧಾ, ಪಿ.ಡಿ.ಓ ಕೆ.ಶಿವಪ್ಪ, ಸೇರಿದಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ಕೆಂಪ ಹನುಮಯ್ಯ, ತಾ.ಪಂ. ಸಿಬ್ಬಂದಿ ಓ. ಮಂಜುನಾಥ ಇದ್ದರು.