ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲೂ ಮುನ್ನುಗ್ಗಿ: ಡಾ.ಲತಾ ಎಸ್ ಮುಳ್ಳೂರ


ಸಂಜೆವಾಣಿ ವಾರ್ತೆ
ಕುರುಗೋಡು:ಮಾ.26: ಮಹಿಳೆಯರ ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಮತ್ತು ರಾಜಕೀಯವಾಗಿ ಗುರಿತಿಸುಕೊಳ್ಳುವಲ್ಲಿ ಮುನ್ನುಗುವ ಅವಶ್ಯವಿದೆ ಎಂದು ಸಾವಿತ್ರಿಬಾಯಿ ಪುಲೆ ಸಂಘದ ಸಂಸ್ಥಾಪಕ ರಾಜ್ಯಾಧ್ಯಕ್ಷೆ ಡಾ.ಲತಾ ಎಸ್ ಮುಳ್ಳೂರ ಕರೆ ನೀಡಿದರು.
ಪಟ್ಟಣದ ಎಸ್.ಎಲ್.ವಿ ಫಾಂಕ್ಷನ್ ಹಾಲ್‌ನಲ್ಲಿ ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಅಂತರಾಷ್ಟಿಯ ಮಹಿಳಾ ದಿನಾಚರಣೆ ಹಾಗೂ ತಾಲೂಕು ಸಂಘದ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ನೌಕರರ ಸಂಘ ಮತ್ತು ಶಿಕ್ಷಕರ ಸಂಘದಲ್ಲಿ ಮಹಿಳೆಯರಿಗೆ ಅವಕಾಶ ನೀಡದೆ, ಓಟ ಬ್ಯಾಂಕಿಂಗ್ ಮಾಡಿಕೊಂಡಿರುವುದು ಮಹಿಳೆಯರ ದುರಂತ. ಆದರೆ ಮಹಿಳೆಯರಿಗೆ ತಮ್ಮದೇ ಆದ ನೂರು ಸಮಸ್ಯೆಗಳಿರುತ್ತವೆ. ಕೆಲ ಸಮಸ್ಯೆಗಳನ್ನು ಪುರುಷರಿಗೆ ಹೇಳಲು ಆಗುವುದಿಲ್ಲ. ಹಾಗಾಗಿ ರಾಜ್ಯದಲ್ಲೇ ಮೊದಲ ಮಹಿಳಾ ಶಿಕ್ಷಕಿ ಸಂಘ ಮಾಡಿಕೊಂಡು, ಈಗಾಗಲೇ ಆನೇಕ ಜನ ಮಹಿಳೆಯರ ಸಮಸ್ಯೆಗಳಿಗೆ ಪರಿಹಾರ ನೀಡಿದ್ದೇವೆ. ಸಾವಿತ್ರಿಬಾಯಿ ಫುಲೆರವರು ಮಹಿಳೆಯರು ಅಡುಗೆ ಮನೆಗೆ ಮಾತ್ರ ಸೀಮಿತರಾಗಿದ್ದೇವು. ಇಂತಹ ಸಂದರ್ಭದಲ್ಲಿ ಆನೇಕ ಕಷ್ಟಗಳನ್ನು ಅನುಭವಿಸಿ ಮಹಿಳೆಯರಿಗೆ ಶಿಕ್ಷಣ ನೀಡಲು ಶಾಲೆಗಳನ್ನು ಪ್ರಾರಂಭಿಸಿ. ಇಂದು ಮಹಿಳೆಯರಿಗೆ ಸಮಾನತೆ ಹಕ್ಕು ನೀಡಿಸಿದ್ದಾರೆ. ಇಂತಹ ಮಹನ್ ಮಹಿಳೆಯ ಆದರ್ಶ ತತ್ವಗಳನ್ನು ಪ್ರತಿಯೊಬ್ಬ ಮಹಿಳೆಯರು ತಮ್ಮ ಜೀವನದಲ್ಲಿ ಆಳವಡಿಸಿಕೊಂಡು ಉತ್ತಮ ಪ್ರಜೆಯಾಗಿ ಬಾಳಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮ ಉದ್ಘಾಟಿಸಿದ ಶ್ರೀದೇವಿ ಗಣೇಶ್ ಮಾತನಾಡಿ, ಪ್ರತಿಯೊಬ್ಬ ಮಹಿಳೆಯು ಶಿಕಯಕ್ಷಣ ಪಡೆದು ಉನ್ನತ ಮಟ್ಟಕ್ಕೆ ತಲುಪಬೇಕು. ಪ್ರತಿಯೊಬ್ಬರ ಕಷ್ಟಕ್ಕೂ ಸಹಕಾರ ನೀಡುತ್ತೇನೆ ಮತ್ತು ನಿಮ್ಮ ಜೊತೆಗೆ ಇರುತ್ತೇನೆ ಎಂದು ಮಹಿಳೆಯರಿಗೆ ಧೈರ್ಯ ನೀಡಿದರು.    
ನಂತರ ಪ್ರಜಾಪೀತಾ ಬ್ರಹ್ಮಕುಮಾರಿ ಈಶ್ವರಿ ವಿವಿ.ಯ ಶೈಲಾಜ ಹಾಗೂ ತಾಲೂಕು ಅಧ್ಯಕ್ಷೆ ಸಿ.ಚಂದ್ರಕಲಾ, ಜಿಲ್ಲಾಧ್ಯಕ್ಷೆ ಬೋರಮ್ಮ ಕೆಂಬಾವಿ ಮಾತನಾಡಿದರು.
ವೇದಿಕೆಯಲ್ಲಿ ಎಲ್.ಸುಚೇತ ಮತ್ತು ಜಿ.ಸಂಧ್ಯಾ ವತಿಯಿಂದ ಭರತನಾಟ್ಯ, ಮಂಗಳಮುಖಿ ಕೆಎಂ.ರೇಣುಕ ಪೂಜಾರ್ ವತಿಯಿಂದ ಜೋಗತಿ ನೃತ್ಯ ಹಾಗೂ ನಾನಾ ಸಾಂಸ್ಕೃತಿಕ ಕಾರ್ಯಕ್ರಗಳು ಜರುಗಿದವು. ನಂತರ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಮಹಿಳೆಯರಿಗೆ ಸನ್ಮಾನಿಸಿ ಗೌರವಿಸಿದರು.
ಕುರುಗೋಡು ತಾಲೂಕಿನ ಸಂಘದ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಜರುಗಿತು.
ಈ ಸಂದರ್ಭದಲ್ಲಿ ಪುರಸಭೆ ಮುಖ್ಯಾಧಿಕಾರಿ ವಿಜಯಲಕ್ಷ್ಮಿ ತಾಲೂಕು ಪ್ರಧಾನ ಕಾರ್ಯದರ್ಶಿ  ತುಳಿಸಿ ಪವಾರ್, ಗೌರವಾಧ್ಯಕ್ಷೆ ಟಿ.ನಾಗರತ್ನ, ಕೋಶಾಧ್ಯಕ್ಷೆ ಕೆ.ಪದ್ಮಾವತಿ, ಉಪಾಧ್ಯಕ್ಷರು, ಸಹ ಕಾರ್ಯದರ್ಶಿಗಳು, ಸಂಘಟನಾ ಕಾರ್ಯದರ್ಶಿ ಹಾಗೂ ಸದಸ್ಯರು, ಶಿಕ್ಷಕಿಯರು, ಅಂಗನವಾಡಿ, ಆಶಾ ಕಾರ್ಯಕರ್ತೆಯರು ಹಾಗೂ ಪಟ್ಟಣದ ನೂರಾರು ಮಹಿಳೆಯರು ಭಾಗವಹಿಸಿದ್ದರು.