ಮಹಿಳೆಯರು ಆರ್ಥಿಕ ಸ್ವಾವಲಂಬಿಗಳಾಗಬೇಕು- ಬಿ.ನಾಗನಗೌಡ


ಸಂಜೆವಾಣಿ ವಾರ್ತೆ
ಸಂಡೂರು: ಆ: 7:  ಸಂಡೂರು: ಕೇವಲ ಕಂಪನಿ ಮಾತ್ರ ಬೆಳೆಯುವುದಲ್ಲ ಅದರ ಸುತ್ತಲಿನ ಸಾರ್ವಜನಿಕರೂ ಸಹ ಪ್ರಗತಿಯನ್ನು ಹೊಂದಬೇಕು ಅದರಲ್ಲೂ ಮಹಿಳೆಯರು ಸ್ವಾವಲಂಬಿಗಳಾಗಬೇಕು ಎನ್ನುವ ಮಹತ್ತರ ಉದ್ದೇಶದಿಂದ ತಾಲೂಕಿನ ಧರ್ಮಾಪುರ ಗ್ರಾಮದ ಮಹಿಳೆಯರಿಗೆ ಉಚಿತ ಟೈಲರಿಂಗ್ ತರಬೇತಿಯನ್ನು ನೀಡುವ ಮೂಲಕ ಸ್ವಾವಲಂಬಿಗಳನ್ನಾಗಿ ಮಾಡುವ ಮಹತ್ತರ ಕಾರ್ಯವನ್ನು ಬಿ.ಕೆ.ಜಿ ಕಂಪನಿ ಹಾಗೂ ಬಿಕೆಜಿ ಫೌಂಡೇಷನ್ ವತಿಯಿಂದ ಮಾಡುತ್ತಿದ್ದು ಅದರ ಪೂರ್ಣ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮುಖ್ಯಸ್ಥರಾದ ಬಿ.ನಾಗನಗೌಡ ತಿಳಿಸಿದರು.
ಅವರು ಇಂದು ತಾಲೂಕಿನ ಧರ್ಮಾಪುರ ಗ್ರಾಮದಲ್ಲಿ ಬಿಕೆಜಿ ಫೌಂಡೇಶನ್ ಹಾಗೂ ಬಿಕೆಜಿ ಮೈನಿಂಗ್ ಪ್ರೈವೇಟ್ ಲಿಮಿಟೆಡ್ ವತಿಯಿಂದ ಧರ್ಮಪುರದಲ್ಲಿ ಆಯೋಜಿಸಿರುವಂತಹ ಉಚಿತ ಹೊಲಿಗೆ ತರಬೇತಿ ಕಾರ್ಯಕ್ರಮದ ಮೊದಲನೇ ಬ್ಯಾಚಿನ ಸಮಾರೋಪ ಸಮಾರಂಭ ಮತ್ತು ಎರಡನೇ ಬ್ಯಾಚಿನ ಉದ್ಘಾಟನೆ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿ ಇಂದು ಕಳೆದ 6 ತಿಂಗಳಿಂದ ಅವರಿಗೆ ಉತ್ತಮ ತರಬೇತಿಯನ್ನು ನೀಡಿದ್ದು ಈಗಾಗಲೇ ಸ್ವಂತ ಹೊಲಿಯುವಿಕೆಯನ್ನು ಕಲಿತಿದ್ದಾರೆ, ಇದರಿಂದ ಅವರು ಸ್ವಂತ ವೃತ್ತಿಯನ್ನು ಅರಂಭಿಸುವ ಮೂಲಕ ಸ್ವಾವಲಂಬಿಗಳಾಗಿ ಆರ್ಥಿಕ ಪ್ರಗತಿಯನ್ನು ಸಾಧಿಸಲು ಸಾಧ್ಯವಾಗುತ್ತದೆ, ಅಲ್ಲದೆ ಗ್ರಾಮದಲ್ಲಿ ಇನ್ನೂ ಹೆಚ್ಚಿನ ಮಹಿಳೆಯರು ನಮಗೆ ಅವಕಾಶ ಮಾಡಿಕೊಡಿ ಎಂದಕಾರಣ 2ನೇ ಬ್ಯಾಚ್ ಸಹ ಇಂದು ಪ್ರಾರಂಭಿಸಿದ್ದು ಎಲ್ಲರೂ ಇದರಲ್ಲಿ ಭಾಗಿಯಾಗಿ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ತರಬೇತಿ ಪಡೆದಂತಹ ವಿದ್ಯಾರ್ಥಿ ಆದಂತಹ ವಾಣಿ ಮಾತನಾಡಿ ಈ ತರಬೇತಿಯಿಂದ ನಮಗೆ ತುಂಬಾ ಉಪಯೋಗವಾಗಿದ್ದು ಮುಂಚೆ ಕೂಲಿ ಕೆಲಸಕ್ಕೆ ಹೋಗಿ ಜೀವನ ಮಾಡುತ್ತಿದ್ದು ಈಗ ಬಟ್ಟೆಗಳನ್ನು ಹೊಲಿದು ಜೀವನ ನಡೆಸುತ್ತಿದ್ದೇನೆ ಇದು ಬಿಕೆಜಿ ಕಂಪನಿ ನೀಡಿದ ಉಚಿತ ತರಬೇತಿಯಿಂದ ಸಾಧ್ಯವಾಯಿತು ಎಂಬ ಅಭಿಪ್ರಾಯವನ್ನು ಹಂಚಿಕೊಂಡರು.
ಈ ಕಾರ್ಯಕ್ರಮದಲ್ಲಿ ವ್ಯವಸ್ಥಾಪಕರಾದ ನರೇಶ್ ಬಿಕೆಜಿ ಮೈನ್ಸ್, ರಾಜಶೇಖರ್ ಬೆಲ್ಲದ ಜನರಲ್ ಮ್ಯಾನೇಜರ್ ಹೆಚ್.ಅರ್, ರಮೇಶ್ ಟ್ರಾನ್ಸ್ಪೋರ್ಟ್ ಕಾಂಟ್ರಾಕ್ಟರ್ ಧರ್ಮಪುರ, ಶಿವಮೂರ್ತಿ ಸ್ವಾಮಿ, ಬಶೀರ್, ಕುಮಾರಸ್ವಾಮಿ, ಗೋಪಾಲ್ ಹಾಗೂ ಧರ್ಮಪುರದ ಹೊಲಿಗೆ ತರಬೇತಿ ಪಡೆಯುವಂತಹ ಮೊದಲನೇ ಬ್ಯಾಚಿನ ಮತ್ತು ಎರಡನೇ ಬ್ಯಾಚನ ಮಹಿಳೆಯರು ಮತ್ತು ಹೊಲಿಗೆ ತರಬೇತಿಯ ಶಿಕ್ಷಕರಾದ ಶಕುಂತಲಾ ಮತ್ತು ಇಂದ್ರಮ್ಮ ಮುಂತಾದವರು ಉಪಸ್ಥಿತರಿದ್ದರು.
ಆರು ತಿಂಗಳ ಕಾಲ ಹೊಲಿಗೆ ತರಬೇತಿಯನ್ನು ಪೂರೈಸಿದಂತಹ ಮಹಿಳೆಯರಿಗೆ ಈ ಕಾರ್ಯಕ್ರಮದಲ್ಲಿ ತರಬೇತಿ ಪ್ರಮಾಣ ಪತ್ರವನ್ನು ವಿತರಿಸಲಾಯಿತು