ಮಹಿಳೆಯರು ಆರ್ಥಿಕ ಸಬಲೀಕರಣಗೊಳ್ಳಲು ಕರೆ

ಸಂಡೂರು : ಮಾ: 27: ಪ್ರತಿಯೊಬ್ಬ ಮಹಿಳೆಯು ಸಬಲರಾಗಬೇಕು ಅದಕ್ಕೆ ಅರ್ಥಿಕ ಬೆಂಬಲ ಅತಿ ಅಗತ್ಯವಾಗಿದೆ, ಅ ನಿಟ್ಟಿನಲ್ಲಿ ಎಲ್ಲಾ ಗೃಹಿಣಿಯರಿಗೆ ಹೊಲಿಗೆ ತರಬೇತಿಯನ್ನು ಉಚಿತವಾಗಿ ನೀಡುವ ಮೂಲಕ ಅವರನ್ನು ಸ್ವಾವಲಂಬಿಗಳನ್ನಾಗಿಸುವ ಮಹತ್ತರ ಯೋಜನೆ ಇದಾಗಿದ್ದು ಇದನ್ನು ಪ್ರತಿಯೊಬ್ಬರೂ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಡಾ.ಐ.ಅರ್. ಅಕ್ಕಿ ತಿಳಿಸಿದರು.
ಅವರು ಪಟ್ಟಣದ ಗುರುಭವನದಲ್ಲಿ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಹಾಗೂ ಸಾಂಸ್ಕೃತಿಕ ಸಂಘ, ಕಲಬುರ್ಗಿ ವಿಭಾಗ, ವಿಕಾಸ ಅಕಾಡೆಮಿ ಕಲಬುರುಗಿ ಇವರ ಸಂಯುಕ್ತಾಶ್ರಯದಲ್ಲಿ ನಡೆದ ಹೊಲಿಗೆ ಪರಿಣಿತರ ಹಾಗೂ ಪ್ರಗತಿ ಕೇಂದ್ರದ ಪ್ರಮುಖರ ತರಬೇತಿ ಶಿಬಿರದ ಶಿಬಿರಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ ಶಿಕ್ಷಣ ಪಡೆದು ಈ ರೀತಿಯ ತರಬೇತಿಗಳನ್ನು ಪಡೆದುಕೊಂಡು ಸ್ವಾವಲಂಬಿ ಬದುಕನ್ನು ಸಾಗಿಸಲು ಸಾಧ್ಯವಾಗುತ್ತದೆ, ಅದ್ದರಿಂದ ಪ್ರತಿ ಕುಟುಂಬವೂ ಸಹ ಎಲ್ಲಾ ರೀತಿಯ ಪ್ರಗತಿಯನ್ನು ಸಾಧಿಸಲು ಸಾಧ್ಯವಾಗುತ್ತದೆ, ಅದ್ದರಿಂದ ಇಂತಹ ತರಬೇತಿ ಪಡೆದವರು ಮತ್ತು ಪಡೆಯಲಾರದವರಿಗೆ ಮಾಹಿತಿ ರವಾನಿಸಿ ಅವರನ್ನು ಸಹ ಈ ರೀತಿಯ ಕಾರ್ಯಕ್ರಮಗಳಲ್ಲಿ ಭಾಗವಹಿಸುವಂತಹ ಕಾರ್ಯ ಮಾಡುವುದು ಅತಿ ಅಗತ್ಯವಾಗಿದೆ ಎಂದರು.
ಕಾರ್ಯಕ್ರಮದ ಉದ್ಘಾಟನೆಯನ್ನು ಅಡವಿ ಸ್ವಾಮಯವರು ನೆರವೇರಿಸಿ ಮಾತನಾಡಿ ಮಹಿಳೆ ಇಡೀ ಸಂಸಾರವನ್ನು ಒಂದಲ್ಲ ಒಂದು ರೀತಿಯಲ್ಲಿ ಸುಸ್ಥಿರಗೊಳಿಸುವಂತಹ ಕಾರ್ಯಮಾಡುತ್ತಿದ್ದಾಳೆ, ಅಲ್ಲದೆ ಇಂದು ಹೊಲಿಗೆ ತರಬೇತಿ ಶಿಬಿರದಲ್ಲಿ ಭಾಗವಹಿಸಿ ಸ್ವ ಉದ್ಯೋಗಕ್ಕೆ ಅಡಿಪಾಯದ ಕೆಲಸವನ್ನು ಕಲಿಯುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ ಪ್ರತಿಯೊಬ್ಬರೂ ಸಹ ಇದಕ್ಕೆ ಪ್ರೋತ್ಸಾಹಿಸುವ ಮೂಲಕ ಮಹಿಳೆಯರನ್ನು ತರಬೇತಿಗೆ ಕಳುಹಿಸಬೇಕು ಎಂದರು.
ಸಮಾರಂಭದಲ್ಲಿ ಅತಿಥಿಗಳಾಗಿ ಬಂಡ್ರಿ ದುರುಗಣ್ಣ ಅವರು ಸಾವಯವ ಕೃಷಿ ಮತ್ತು ಮಹಿಳೆಯರ ಸಬಲೀಕರಣ ಕುರಿತು ಮಾಹಿತಿ ನೀಡಿದರು. ಕೆ.ಶಿವಶಂಕರ ನಿರೂಪಿಸಿದರು, ಜಿಲ್ಲಾ ಸಂಚಾಲಕರಾದ ಸಂಜಯ ಅವರು ಯೋಜನೆಯ ಮಾಹಿತಿಯನ್ನು ನೀಡಿದರು, ತಾಲೂಕು ದೈಹಿಕ ಶಿಕ್ಷಣಾಧಿಕಾರಿ ಎಸ್.ಡಿ. ಸಂತಿ ತಾಲೂಕಿನಲ್ಲಿ ವಿವಿಧ ಯೋಜನೆ ಅಡಿಯಲ್ಲಿ ಕೈಗೊಂಡ ಶಿಬಿರಗಳ ಮಾಹಿತಿ ನೀಡಿದರು, ಬಳ್ಳಾರಿ ಜಿಲ್ಲಾ ಸಂಚಾಲಕ ಕಗ್ಗಲ್ ಮಂಜುನಾಥ, ಕುರುಗೋಡು ತಿಪ್ಪಣ್ಣ, ತಾಲೂಕಿನ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.