ಮಹಿಳೆಯರು ಆರ್ಥಿಕವಾಗಿ ಮುಂದೆ ಬರಲಿ :ಭಾರತಿ ದರ್ಶನಾಪುರ

ಶಹಾಪುರ: ಸೆ.1:ಆಧುನಿಕ ಪ್ರಪಂಚದಲ್ಲಿ ಮಹಿಳೆ ಯರು ಸಾಮಾಜಿಕ, ಶೈಕ್ಷಣಿಕ ರಾಜಕೀಯ, ಹಾಗೂ ಸಂಸ್ಕøತಿಕವಾಗಿ ಹೆಚ್ಚು ಹೆಸರು ಮಾಡು ತಿದ್ದಾರೆ. ದೇಶದ ನಾಡಿನ ಸೊಬಗನ್ನು ನೀಡುವ ಮಹಿಳೆಯರು ಇಂದು ಅನೇಕ ಕ್ಷೇತ್ರದಲ್ಲಿ ಅಮೋಘ ಸಾಧನೆಯಲ್ಲಿದ್ದಾರೆ.

ಆದರೂ ಇನ್ನೂ ಗ್ರಾಮೀಣ ಭಾಗದಲ್ಲಿನ ಮಹಿಳೆಯರು ಆರ್ಥಿಕವಾಗಿ ರಾಜಿಕೀಯವಾಗಿ ಸಬಲರಾಗಿ ಮುಖ್ಯವಾಹಿನಿಗೆ ಬಂದಾಗ ಭಾರತ ಮಹಿಳೆ ಪ್ರಗತಿಶೀಲ ರಾಷ್ಟ್ರವಾಗುತ್ತದೆ. ಎಂದು ಸಣ್ಣ ಕೈಗಾರಿಕೆ ಸಾರ್ವಜನಿಕ ಉದ್ಯಮಗಳ ಸಚಿವರಾದ, ಶರಣಬಸಪ್ಪಗೌಡ ದರ್ಶನಾಪು ರವರ ಧರ್ಮ ಪತ್ನಿ ಭಾರತಿ ದರ್ಶನಾಪುರವರು
ಕರೆ ನೀಡಿದರು.

ಅವರು, ನಗರದ ಮಾಹಾತ್ಮ ಚರಬಸವೇಶ್ವರ ಗದ್ದುಗೆಯಲ್ಲಿ ಏರ್ಪಡಿಸಲಾದ 12ನೇಯ ವರ್ಷದ ಮಹಿಳಾ ಮಹೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು. ಚರಬಸವೇಶ್ವರ ಸಂಗೀತಾ ಸೇವಾ ಸಮಿತಿ ಆಶ್ರಯದಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಬಾಡಿಯಾಳದ ಪೂಜ್ಯ ಚೆನ್ನವೀರ ಮಾಹಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಿದ್ದರು. ಚರಬಸವೇಶ್ವರ ಸಂಸ್ಥಾನ ಗದ್ದುಗೆಯ ಪಿಠಾಧಿಪತಿಗಳಾದ, ಬಸವಯ್ಯಶರಣರು, ದಿವ್ಯ ಸಮ್ಮುಖದಲ್ಲಿ ಈ ಸಮಾರಂಭ ನೆರವೇರಿತು.ಅಧ್ಯಕ್ಷತೆಯನ್ನು ಸಂಸ್ಥೆಯ
ಅಧ್ಯಕ್ಷರಾದ ಶ್ರೀ ಶರಣು ಗದ್ದುಗೆಯವರು ವಹಿಸಿದ್ದರು. ಮುಖ್ಯ ಅಥಿತಿಗಳಾಗಿ ಶೀಲವಂತಯ್ಯ ಗದ್ದುಗೆ, ವೀರಶೈವ ಮಾಹಾಸಭಾದ ಯಾದಗಿರ ಜಿಲ್ಲಾ ಉಪಾಧ್ಯಕ್ಷ ಮಹೇಶ ಆನೆಗುಂದಿ, ಉದ್ಯಮಿ ಮಹೇಶ ಅವಂಟಿ, ಸಪ್ತಗಿರಿ, ಬಸ್ಸಪ್ಪ ಗೌಡತಿ. ಪಾಲ್ಗೊಂಡಿದ್ದರು. ಕಲಾವಿ ದರಾದ ನೀಲಪ್ಪ ಬಸವರಾಜ ಹಯ್ಯಾಳ.ರವರಿ0ದ ಸಂಗೀತ ಕಾರ್ಯಕ್ರಮ ಜರುಗಿದವು. ವೀರಭದ್ರ ನಾಟ್ಯ ಸೌರಭ ಕಲಾ ತಂಡದವರಿಂದ ವಿಶೇಷ ಸಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಸುನೀಲ ಶಿರಣಿ ಕಾರ್ಯಕ್ರಮ ನೀರೂಪಿಸಿದರು. ವಿವಿಧ ವಾರ್ಡ್ ಆಗಮಿಸಿದ್ದರು.