
ಸಂಜೆವಾಣಿ ವಾರ್ತೆ
ಕೂಡ್ಲಿಗಿ.ಮಾ.8 :- ಪೌಷ್ಟಿಕಾಂಶದ ಕೊರತೆ ಕಾಣುತಿದ್ದು ಮಹಿಳೆಯರು ಹೆಚ್ಚಾಗಿ ತರಕಾರಿ, ಸೊಪ್ಪು, ಹಣ್ಣು ಹಂಪಲು ಸೇವಿಸುವ ಮೂಲಕ ಗರ್ಭಿಣಿ ಹಾಗೂ ಇತರೆ ಮಹಿಳೆಯರು ಆರೋಗ್ಯ ಕಾಪಾಡಿಕೊಳ್ಳುವಂತೆ ಕೂಡ್ಲಿಗಿ ವಿಧಾನಸಭಾ ಕ್ಷೇತ್ರದ ಕಾಂಗ್ರೇಸ್ ಟಿಕೇಟ್ ಆಕಾಂಕ್ಷಿ ಡಾ. ಶ್ರೀನಿವಾಸ ಮನವಿ ಮಾಡಿದರು.
ಅವರು ತಾಲೂಕಿನ ನರಸಿಂಹಗಿರಿ ಗ್ರಾಮದಲ್ಲಿ ಇಂದು ದಿವಂಗತ ಎನ್ ಟಿ ಬೊಮ್ಮಣ್ಣ ಅವರ ಪತ್ನಿ ಓಬಮ್ಮ ಹಾಗೂ ಪುತ್ರರಾದ ಎನ್ ಟಿ ತಮ್ಮಣ್ಣ ಮತ್ತು ಎನ್ ಟಿ ಶ್ರೀನಿವಾಸ ನೇತೃತ್ವದಲ್ಲಿ ಮಹಿಳಾ ದಿನಾಚರಣೆ ಅಂಗವಾಗಿ ಸುತ್ತಮುತ್ತಲ ಗ್ರಾಮದ 50ಕ್ಕೂ ಹೆಚ್ಚು ಮಹಿಳೆಯರಿಗೆ ಹಾಗೂ ಆಶಾ ಕಾರ್ಯಕರ್ತರಿಗೆ ಸೀಮಂತ ಹಾಗೂ ಉಡಿತುಂಬುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತ ಕೂಡ್ಲಿಗಿ ಅತೀ ಹಿಂದುಳಿದ ತಾಲೂಕಾಗಿದ್ದು ಇಲ್ಲಿ ಶಿಕ್ಷಣ ಹಾಗೂ ಆರೋಗ್ಯದ ಮಹತ್ವ ಹೆಚ್ಚಾಗಿದ್ದು ತಂದೆಯವರು ಗ್ರಾಮೀಣ ಭಾಗದ ಜನತೆಗೆ ಶಾಲೆಗಳನ್ನು ತೆರೆದು ಜನಸೇವೆ ಮಾಡಿದ್ದು ನಾನು ಸಹ ಈಭಾಗದ ಅನೇಕ ಜನರಿಗೆ ಕಣ್ಣಿನ ಪರೀಕ್ಷೆ ಹಾಗೂ ಶಸ್ತ್ರಚಿಕಿತ್ಸೆ ಮಾಡಿದ ಖುಷಿ ನನಗಿದೆ ಹಾಗೂ ಗ್ರಾಮದ ಜನರು ತಮ್ಮ ಗ್ರಾಮಗಳಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳುವುದರಿಂದ ಉತ್ತಮ ಆರೋಗ್ಯ ಪರಿಸರವಾಗುತ್ತದೆ ಎಂದು ಆರೋಗ್ಯದ ಅರಿವನ್ನು ಡಾ ಶ್ರೀನಿವಾಸ್ ತಿಳಿಸಿದರು ಹಾಗೂ ನನ್ನ ನಿಶ್ಚಿತಾರ್ಥದ ದಿನವಾದ ಇಂದು ಮಹಿಳೆಯರಿಗೆ ಈ ರೀತಿಯ ಗೌರವಿತ ಕಾರ್ಯವನ್ನು ಪ್ರತಿವರ್ಷ ಮಾಡಲು ನಿರ್ಧರಿಸಿದ್ದೇನೆ ಎಂದರು.
ಈ ಸಂದರ್ಭದಲ್ಲಿ ದಿವಂಗತ ಎನ್ ಟಿ ಬೊಮ್ಮಣ್ಣ ಅವರ ಧರ್ಮಪತ್ನಿ ಓಬಮ್ಮ, ಹಿರಿಯ ಪುತ್ರ ಎನ್ ಟಿ ತಮ್ಮಣ್ಣ, ಹರವದಿ ಈರಣ್ಣ ಹಾಗೂ ಇತರೆ ಗ್ರಾಮಪಂಚಾಯಿತಿ ಸದಸ್ಯರು ಉಪಸ್ಥಿತರಿದ್ದರು.
ನಂತರವಾಗಿ ಪಟ್ಟಣದಲ್ಲಿ ಮಧ್ಯಾಹ್ನ ಮಹಿಳಾ ದಿನಾಚರಣೆಯ ಅಂಗವಾಗಿ ವಿವಿಧ ಕ್ಷೇತ್ರವಾದ ಶಿಕ್ಷಣ, ರಂಗಭೂಮಿ, ಸೂಲಗಿತ್ತಿಯರು, ಪೌರಕಾರ್ಮಿಕರು, ಹಿರಿಯ ಮಹಿಳಾ ಸಾಧಕ ಮಹಿಳೆಯರನ್ನು ಗುರುತಿಸಿ ಅವರ ಮನೆಗೆ ತೆರಳಿ ಸನ್ಮಾನ ಮಾಡಿ ಗೌರವಿಸಿ ಅವರ ಆಶೀರ್ವಾದ ಪಡೆದುಕೊಂಡರು.