ಮಹಿಳೆಯರು ಆತ್ಮಾವಲೋಕನ ಮಾಡಿಕೊಂಡು ಮುಂದೆ ಬರಬೇಕು

ರಾಯಚೂರು,ಮಾ.೧೦- ಮಹಿಳೆಯರು ಬೇರೆಯವರೊಂದಿಗೆ ಎಂದೂ ಹೋಲಿಕೆ ಮಾಡಿಕೊಳ್ಳಬಾರದು ಆತ್ಮಾವಲೋಕನ ಮಾಡಿಕೊಂಡು ಅಭಿವೃದ್ಧಿಗೊಳ್ಳುತ್ತ ಮುಂದೆ ಬರಬೇಕು ಎಂದು ಡಾ. ನೇಹಾ ಸುಖಾಣಿ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಅವರು ಬಿ.ಆರ್.ಬಿ. ವಾಣಿಜ್ಯ ಮಹಾವಿದ್ಯಾಲಯದಲ್ಲಿ ಅಯೋಜಿಸಲಾದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಡಾ. ವಿಜಯಕುಮಾರ್ ಸುಖಾಣಿಯವರು ಮಹಿಳೆಯರಲ್ಲಿ ಜೀವಿಸುವ ಛಲ ಹೆಚ್ಚಿದೆ ಅದು ಭ್ರೂಣಾವಸ್ಥೆಯಲ್ಲಿಯೇ ಕಂಡು ಬರುತ್ತದೆ. ಹೀಗಾಗಿ ತಾವು ಎಂದೂ ಕಡಿಮೆ ಎಂದು ಭಾವಿಸದೆ ಮುಂದೆ ಬರಬೇಕು.
ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಎಲ್ಲಾ ಕ್ಷೇತ್ರದಲ್ಲಿ ಉನ್ನತಿ ಸಾಧಿಸಿದ್ದಾರೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಆರೋಗ್ಯ ತಪಾಸಣೆ ನಡೆಸಲಾಯಿತು. ವಿದ್ಯಾರ್ಥಿನಿಯರಿಗಾಗಿ ಹಮ್ಮಿಕೊಂಡ ವಿವಿಧ ಸ್ಪರ್ಧೆಯಲ್ಲಿ ವಿಜೇತರದ ವಿದ್ಯಾರ್ಥಿನಿಯರಿಗೆ ಬಹುಮಾನ ವಿತರಿಸಲಾಯಿತು.
ಕಾರ್ಯಕ್ರಮವು ಕೃತಿ ತುಪ್ಪಸಕ್ಕರಿಯವರ ಪ್ರಾರ್ಥನೆಯೊಂದಿಗೆ ಆರಂಭವಾಯಿತು. ಶ್ರೀಲತಾ ಕಾರ್ಯಕ್ರಮ ನಿರೂಪಿಸಿದರು. ಪ್ರಾಚಾರ್ಯರಾದ ಡಾ.ಶೀಲಾಕುಮಾರಿ ದಾಸ ಅವರು ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಪೂಜಿತ ಕೆ, ಸಂದೀಪ ಕಾರಭಾರಿ, ರವಳಿಕಾ, ಶಶಿಕಲಾ, ಮಮತಾ ಉಪನ್ಯಾಸಕರು, ಬೋಧಕೇತರ ಸಿಬ್ಬಂದಿಯವರು ಮತ್ತು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.